ಕಿರುತೆರೆ ನಟಿ ಸಾರಾ ಅಣ್ಣಯ್ಯ ಅವರು ವರುಧಿನಿ ಎಂದೇ ಫೇಮಸ್. ಕನ್ನಡತಿ ಧಾರಾವಾಹಿಯ ಮೂಲಕ ಕರುನಾಡ ಜನರ ಮನಸ್ಸು ಗೆದ್ದಿದ್ದಾರೆ. ಸಾರಾ ಅಣ್ಣಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಟೈಲಿಷ್ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ನೋಡಿ ಕೆಲವರು ಮೆಚ್ಚಿಕೊಂಡ್ರೆ, ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಹಾಕಿದ್ದಾರೆ. ಕನ್ನಡತಿ ಧಾರಾವಾಹಿ ಮುಕ್ತಾಯವಾಗಿದೆ. ಕಲಾವಿದರು ಏನ್ ಮಾಡ್ತಾರೆ ಎಂದು ಜನ ಕೇಳ್ತಾ ಇದ್ರು. ಅದಕ್ಕೆ ಸಾರಾ ಅಣ್ಣ ಅವರು ಉತ್ತರ ಕೊಟ್ಟಾಯ್ತು. ಹೌದು ಸಾರಾ ಅಣ್ಣಯ್ಯ ದೀಪಿಕಾ ಆಗಿ ಎಂಟ್ರಿ ಕೊಟ್ಟಿದ್ದಾರೆ. ಸ್ಟಾರ್ ಸುರ್ವಣದಲ್ಲಿ ಪ್ರಸಾರವಾಗ್ತಿರುವ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ದೀಪಿಕಾ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ದೀಪಿಕಾ ಹೀರೋ ಸಂಗಮ್ ಪತ್ನಿ. ಸಂಗಮ್ ದೊಡ್ಡ ಸಿಂಗರ್. ದೀಪಿಕಾ ಅಪ್ಪ ಸಹಾಯ ಮಾಡಿದ ಕಾರಣ, ಸಂಗಮ್ ತಾನು ಹೇಳಿದ ಹಾಗೆ ಕೇಳಬೇಕು ಎಂದು ಬಯಸುತ್ತಾಳೆ. ನಮ್ಮ ಲಚ್ಚಿಯಲ್ಲಿ ದೀಪಿಕಾ ಪಾತ್ರವನ್ನು ಜನ ಮೆಚ್ಚಿಕೊಳ್ತಾ ಇದ್ದಾರೆ. ಸೂಪರ್ ಆಗಿ ಸಾರಾ ಅವರು ನಟನೆ ಮಾಡ್ತಾ ಇದ್ದಾರೆ ಎಂದು ಹೇಳ್ತಿದ್ದಾರೆ. ಸಾರಾ ಅಣ್ಣಯ್ಯ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಫೋಟೋಗಳನ್ನು ಹಾಕ್ತಾ ಇರ್ತಾರೆ. ಜನ ಪೋಟೋಗಳನ್ನು ಮೆಚ್ಚಿಕೊಳ್ತಾರೆ. ಸಾರಾ ಅಣ್ಣಯ್ಯ ಅವರಿಗೆ ಟ್ರಿಪ್ ಮಾಡುವುದು ಅಂದ್ರೆ ತುಂಬಾ ಇಷ್ಟ ಅಂತೆ. ಅದಕ್ಕೆ ಆಗಾಗ ಪ್ರವಾಸಕ್ಕೆ ಹೋಗ್ತಾರೆ. ಅಲ್ಲಿಯ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.