ಕಿರುತೆರೆ ನಟಿ ಸಾರಾ ಅಣ್ಣಯ್ಯ ಅವರು ವರುಧಿನಿ ಎಂದೇ ಫೇಮಸ್. ಕನ್ನಡತಿ ಧಾರಾವಾಹಿಯ ಮೂಲಕ ಕರುನಾಡ ಜನರ ಮನಸ್ಸು ಗೆದ್ದಿದ್ದಾರೆ.
2/ 8
ಸಾರಾ ಅಣ್ಣಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಟೈಲಿಷ್ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ನೋಡಿ ಕೆಲವರು ಮೆಚ್ಚಿಕೊಂಡ್ರೆ, ಇನ್ನೂ ಕೆಲವರು ನೆಗೆಟಿವ್ ಕಮೆಂಟ್ ಹಾಕಿದ್ದಾರೆ.
3/ 8
ಸಾರಾ ಅಣ್ಣಯ್ಯ ಅವರಿಗೆ ಟ್ರಿಪ್ ಮಾಡುವುದು ಅಂದ್ರೆ ತುಂಬಾ ಇಷ್ಟ ಅಂತೆ. ಅದಕ್ಕೆ ಆಗಾಗ ಪ್ರವಾಸಕ್ಕೆ ಹೋಗ್ತಾರೆ. ಅಲ್ಲಿಯ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.
4/ 8
ಸಾರಾ ಅಣ್ಣಯ್ಯ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಫೋಟೋಗಳನ್ನು ಹಾಕ್ತಾ ಇರ್ತಾರೆ. ನೆಗೆಟಿವ್ ಕಮೆಂಟ್ ಬಂದ್ರೂ ತಲೆಕೆಡಿಸಿಕೊಳ್ಳಲ್ಲ.
5/ 8
ಕನ್ನಡತಿ ಧಾರಾವಾಹಿಯಲ್ಲಿ ಡಿಫರೆಂಟ್ ಪಾತ್ರ ಇವರದ್ದು. ತನಗೆ ಬೇಕಾದ್ದನ್ನು ಹೇಗಾದ್ರೂ ಪಡೆಯೋ ಹಠ. ಅದು ಬೇರೆ ಅವರ ಪಾಲಾಗಿದ್ರೂ ಬಿಡದೇ ಅದೇ ಬೇಕು ಎನ್ನುವ ಹುಚ್ಚುತನ.
6/ 8
ಧಾರಾವಾಹಿ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಸಾರಾ ಅಣ್ಣಯ್ಯ, ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಗೆ ಬೇಕಾದ್ದನ್ನು ಪಡೆದೇ ತೀರುತ್ತಾರೆ. ಹೀರೋ ಹರ್ಷ ಅಂದ್ರೆ ಪ್ರಾಣ ಇವರಿಗೆ.
7/ 8
ಶೀಘ್ರದಲ್ಲೇ ಕನ್ನಡತಿ ಧಾರಾವಾಹಿ ಮುಗಿಯುತ್ತೆ ಎನ್ನುವ ಸುದ್ದಿಗಳಿಗಳಿವೆ. ಮುಂದಿನ ತಿಂಗಳು, ಇಲ್ಲವೇ ಮಾರ್ಚ್ ಮೊದಲ ವಾರದಲ್ಲಿ ಧಾರಾವಾಹಿ ಮುಕ್ತಾಯಗೊಳ್ಳಲಿದೆಯಂತೆ.
8/ 8
ಧಾರಾವಾಹಿಯನ್ನು ಹ್ಯಾಪಿ ಎಂಡಿಂಗ್ ಮಾಡಲು ವರೂಧಿನಿಗೆ ಮದುವೆ ಮಾಡಿಸಲು ಲಾಯರ್ ಹರ್ಷಿತ್ ಪಾತ್ರ ತರಲಾಗಿದೆ. ಅವರನ್ನು ವರು ಒಪ್ತಾಳಾ ನೋಡಬೇಕು