Yuva Rajkumar: 'ಯುವ' ರಾಜನ ಅರಸಿ ಸಪ್ತಮಿ ಗೌಡ! ರಾಜ್​ ಮೊಮ್ಮಗನ ಜೊತೆ ಕಾಂತಾರ ಲೀಲಾ ರೊಮ್ಯಾನ್ಸ್​!

ಡಾ.ರಾಜ್ ಕುಟುಂಬದ ಮತ್ತೊಬ್ಬ ಮೊಮ್ಮಗ ಅಧಿಕೃತವಾಗಿ ಸಿನಿಮಾ ರಂಗ ಪ್ರವೇಶಿಸಿದ್ದಾರೆ. ಯುವ ರಾಜ್​ಕುಮಾರ್ ಚೊಚ್ಚಲ ಸಿನಿಮಾ ಟೈಟಲ್ ಹಾಗೂ ಟೀಸರ್ ಬಿಡುಗಡೆಯಾಗಿದೆ. ಯುವ ರಾಜ್ ನಟನೆಯ ಸಿನಿಮಾ ಶೀರ್ಷಿಕೆ ಭಾರೀ ಕುತೂಹಲ ಮೂಡಿಸಿತ್ತು. ಇದೀಗ ಸಿನಿಮಾಗೆ ಯುವ ರಾಜ್​ಗೆ ನಾಯಕಿಯಾಗಿ ಸಪ್ತಮಿ ಗೌಡ ಆಯ್ಕೆ ಆಗಿದ್ದಾರೆ.

First published:

  • 17

    Yuva Rajkumar: 'ಯುವ' ರಾಜನ ಅರಸಿ ಸಪ್ತಮಿ ಗೌಡ! ರಾಜ್​ ಮೊಮ್ಮಗನ ಜೊತೆ ಕಾಂತಾರ ಲೀಲಾ ರೊಮ್ಯಾನ್ಸ್​!

    ಕಾಂತಾರ ಸಿನಿಮಾ ಹಿಟ್ ಆಗಿದ್ದೇ ತಡ ಸಪ್ತಮಿ ಗೌಡಗೆ ಲಕ್ ಖುಲಾಯಿಸಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿ ಸಪ್ತಮಿ ಗೌಡ ಪಾಲಾಗ್ತಿದೆ. ದೊಡ್ಮನೆ ಮೊಮ್ಮಗ ಯುವ ರಾಜ್ ಮೊದಲ ಸಿನಿಮಾಗೆ ನಾಯಕಿಯಾಗಿ ಸಪ್ತಮಿಗೌಡ ಆಯ್ಕೆಯಾಗಿದ್ದಾರೆ.

    MORE
    GALLERIES

  • 27

    Yuva Rajkumar: 'ಯುವ' ರಾಜನ ಅರಸಿ ಸಪ್ತಮಿ ಗೌಡ! ರಾಜ್​ ಮೊಮ್ಮಗನ ಜೊತೆ ಕಾಂತಾರ ಲೀಲಾ ರೊಮ್ಯಾನ್ಸ್​!

    ಕಾಂತಾರ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಸಪ್ತಮಿ ಗೌಡಗೆ ಇದೀಗ ಆಫರ್ಗಳ ಸುರಿಮಳೆಯಾಗ್ತಿದೆ. ಅಂಬಿ ಪುತ್ರ ಅಭಿಷೇಕ್ ಮುಂದಿನ ಸಿನಿಮಾ ಕಾಳಿಯಲ್ಲೂ ಸಪ್ತಮಿ ಗೌಡ ಅವರೇ ನಾಯಕಿಯಾಗಿದ್ದಾರೆ.

    MORE
    GALLERIES

  • 37

    Yuva Rajkumar: 'ಯುವ' ರಾಜನ ಅರಸಿ ಸಪ್ತಮಿ ಗೌಡ! ರಾಜ್​ ಮೊಮ್ಮಗನ ಜೊತೆ ಕಾಂತಾರ ಲೀಲಾ ರೊಮ್ಯಾನ್ಸ್​!

    ಇದೀಗ ರಾಜ್ ಫ್ಯಾಮಿಲಿ ಕುಡಿ ಜೊತೆ ತೆರೆ ಮೇಲೆ ಮಿಂಚಲು ಸಪ್ತಮಿ ಗೌಡ ರೆಡಿಯಾಗಿದ್ದಾರೆ. ಸಪ್ತಮಿ ಗೌಡ ಆಯ್ಕೆ ಬಗ್ಗೆ ಸಿನಿಮಾ ತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ನಿರ್ದೇಶಕ ಸಂತೋಷ್ ಆನಂದರಾಮ್ ಅವರೇ ಘೋಷಿಸಿದ್ದಾರೆ.

    MORE
    GALLERIES

  • 47

    Yuva Rajkumar: 'ಯುವ' ರಾಜನ ಅರಸಿ ಸಪ್ತಮಿ ಗೌಡ! ರಾಜ್​ ಮೊಮ್ಮಗನ ಜೊತೆ ಕಾಂತಾರ ಲೀಲಾ ರೊಮ್ಯಾನ್ಸ್​!

    ಸೋಶಿಯಲ್ ಮೀಡಿಯಾದಲ್ಲಿ ಸಪ್ತಮಿ ಗೌಡ ಫೋಟೋ ಹಂಚಿಕೊಂಡ ನಿರ್ದೇಶಕ ಸಂತೋಷ್ ಆನಂದರಾಮ್, ಯುವ ರಾಜನ ಅರಸಿಗೆ ಆದರದ ಸ್ವಾಗತ ಎಂದು ಬರೆಯುವ ಮೂಲಕ ಸಪ್ತಮಿ ಗೌಡ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿದ್ದಾರೆ.

    MORE
    GALLERIES

  • 57

    Yuva Rajkumar: 'ಯುವ' ರಾಜನ ಅರಸಿ ಸಪ್ತಮಿ ಗೌಡ! ರಾಜ್​ ಮೊಮ್ಮಗನ ಜೊತೆ ಕಾಂತಾರ ಲೀಲಾ ರೊಮ್ಯಾನ್ಸ್​!

    ಸ್ಯಾಂಡಲ್​ವುಡ್​ ಬಿಗ್ ಎಂಟ್ರಿ ಕೊಡಲು ಯುವ ರಾಜ್ ಕುಮಾರ್ ರೆಡಿಯಾಗಿದ್ದಾರೆ. ಯುವ ರಾಜ್​ಕುಮಾರ್ ಲಾಂಚ್ ಮಾಡಲು ಕುಟುಂಬ ಬಿಗ್ ಪ್ರಾಜೆಕ್ಟ್​ಗಾಗಿಯೇ ಕಾಯುತ್ತಿತ್ತು. ಕೊನೆಗೂ ಚಿಕ್ಕಪ್ಪ ಪುನೀತ್ ರಾಜ್ ಕುಮಾರ್​ಗಾಗಿ ರೆಡಿಯಾದ ಸಿನಿಮಾದಲ್ಲಿ ಯುವ ರಾಜ್ ಕುಮಾರ್ ಕಾಣಿಸಿಕೊಳ್ತಿದ್ದಾರೆ.

    MORE
    GALLERIES

  • 67

    Yuva Rajkumar: 'ಯುವ' ರಾಜನ ಅರಸಿ ಸಪ್ತಮಿ ಗೌಡ! ರಾಜ್​ ಮೊಮ್ಮಗನ ಜೊತೆ ಕಾಂತಾರ ಲೀಲಾ ರೊಮ್ಯಾನ್ಸ್​!

    ಸ್ಯಾಂಡಲ್​ವುಡ್​ನಲ್ಲಿ ಯುವ ರಾಜ್ ಕುಮಾರ್, ‘ಯುವ’ ಹೆಸರಿನಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಪುನೀತ್ ಅವರನ್ನು ಕೂಡ ಎಲ್ಲ ಅಪ್ಪು ಎನ್ನುತ್ತಿದ್ರು. ಮೊದಲ ಸಿನಿಮಾಗೆ ಅವರ ಹೆಸರನ್ನೇ ಆಯ್ಕೆ ಮಾಡಿದ್ರು. ಯುವ ರಾಜ್ ಮೊದಲ ಸಿನಿಮಾಗೂ ಯುವ ಎಂದು ಹೆಸರಿಡಲಾಗಿದೆ.

    MORE
    GALLERIES

  • 77

    Yuva Rajkumar: 'ಯುವ' ರಾಜನ ಅರಸಿ ಸಪ್ತಮಿ ಗೌಡ! ರಾಜ್​ ಮೊಮ್ಮಗನ ಜೊತೆ ಕಾಂತಾರ ಲೀಲಾ ರೊಮ್ಯಾನ್ಸ್​!

    ಮೊದಲ ಚಿತ್ರದಲ್ಲೇ ಪುನೀತ್ ರಾಜ್ ಕುಮಾರ್ ಅಪ್ಪುಆಗಿ ಫೇಮಸ್ ಆದರು. ಯುವ ರಾಜ್ ಕುಮಾರ್ ಕೂಡ ಯುವ ಹೆಸರಿನಿಂದಲೇ ಮುಂದುವರೆಯಲಿ ಎನ್ನುವ ಗುರಿಯೂ ಈ ಟೈಟಲ್ ಹಿಂದಿದೆ ಎಂದು ಹೇಳಲಾಗ್ತಿದೆ.

    MORE
    GALLERIES