Sapthami Gowda: ಆಕಾಶ ಬಣ್ಣದ ಸೀರೆ ಉಟ್ಟ ಸಪ್ತಮಿ ಗೌಡಗೆ ಬಂತು ಮದ್ವೆ ಪ್ರಪೋಸಲ್
ನಟಿ ಸಪ್ತಮಿ ಗೌಡ ಅವರ ಸಾರಿ ಲುಕ್ಸ್ ಎಲ್ಲರಿಗೂ ಇಷ್ಟ. ಈಗ ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಈ ಸಂದರ್ಭ ನಟಿಗೆ ವಿಶೇಷ ಬೇಡಿಕೆ ಬಂದಿದೆ.
1/ 8
ಸ್ಯಾಂಡಲ್ವುಡ್ ನಟಿ ಸಪ್ತಮಿ ಗೌಡ ಅವರು ಅವರ ಸೀರೆ ಲುಕ್ಗಳಿಂದ ಸಿಕ್ಕಾಪಟ್ಟೆ ಫೇಮಸ್. ಅವರ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಸಾರಿ ಸ್ಟೈಲ್ ಸಖತ್ತಾಗಿ ಕಾಣಸಿಗುತ್ತದೆ.
2/ 8
ನಟಿ ಸಪ್ತಮಿ ಅವರು ಸುಂದರವಾದ ಸಣ್ಣ ಝರಿ ಅಂಚಿನ ಸೀರೆ ಉಟ್ಟು ಅದಕ್ಕೆ ಗೋಲ್ಡನ್ ಕಲರ್ ಬ್ಲೌಸ್ ಧರಿಸಿದ್ದರು. ಮ್ಯಾಚಿಂಗ್ ಬಿಂದಿ ಕೂಡಾ ಧರಿಸಿದ್ದರು.
3/ 8
ಸುಂದರವಾದ ದೊಡ್ಡ ಝುಮುಕಿ ಧರಿಸಿದ್ದ ನಟಿ ಗಾಗಲ್ಸ್ ಕೂಡಾ ಧರಿಸಿದ್ದರು. ರೆಡ್ ಲಿಪ್ಸ್ಟಿಕ್ ಹೈಲೈಟ್ ಆಗಿತ್ತು.
4/ 8
ಬಿಳಿ ಮುತ್ತುಗಳನ್ನು ಜೋಡಿಸಿದ ಬಳೆಗಳನ್ನು ಧರಿಸಿದ ನಟಿ ಉಗುರಿಗೆ ಗಾಢ ಕೆಂಬಣ್ಣದ ನೇಲ್ ಪಾಲಿಶ್ ಹಚ್ಚಿದ್ದರು. ಫ್ರೀ ಬಿಟ್ಟಿದ್ದ ಕೂದಲು ಅವರ ಲುಕ್ ಹೈಲೈಟ್ ಮಾಡಿದೆ.
5/ 8
ನಟಿ ಸೀರೆ ಉಟ್ಟಿರೋ ಫೋಟೋ ಶೇರ್ ಮಾಡಿದ್ದೇ ತಡ ನನ್ನ ಮದ್ವೆ ಆಗ್ತೀರಾ ಪ್ಲೀಸ್ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ಡೈರೆಕ್ಟ್ ಮ್ಯಾರೇಜ್ ಪ್ರಪೋಸಲ್ ಮಾಡಿದ್ದಾರೆ.
6/ 8
ಇನ್ನೂ ಕೆಲವು ಅಭಿಮಾನಿಗಳು ಬ್ಲೂ ಸಾರಿ ಬ್ಲೂ ಟಿಕ್ ಎಂದು ನಟಿಯ ಖಾತೆ ವೇರಿಫೈ ಆಗಿರುವುದಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.
7/ 8
ಹಸಿರಿನ ಬ್ಯಾಗ್ರೌಂಡ್ನಲ್ಲಿ ಕ್ಲಿಕ್ ಮಾಡಲಾಗಿರುವ ಫೋಟೋ ಸಖತ್ ವೈರಲ್ ಆಗಿದ್ದು 96 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಗಳಿಸಿದೆ.
8/ 8
ಒಂದಷ್ಟು ಜನರು ನಟಿಯ ಕಾಲನ್ನು ನೋಡಿ ನಿಮ್ಮ ಕಾಲು ಸುಂದರವಾಗಿದೆ ಎಂದಿದ್ದಾರೆ. 460ಕ್ಕೂ ಹೆಚ್ಚು ಮಂದಿ ನಟಿಯ ಫೋಟೋಸ್ಗೆ ಕಾಮೆಂಟ್ ಮಾಡಿದ್ದಾರೆ.
First published: