Sanjjanaa Galrani: ಮಗುವಿಗೆ ಜನ್ಮ ನೀಡುವ ಮುನ್ನ ಸಂಜನಾ ಫೋಟೋ ಶೂಟ್ - ಗ್ರೀನ್ ಗೌನ್ನಲ್ಲಿ ಫುಲ್ ಮಿಂಚಿಂಗ್
Baby Bump Photoshoot: ಗಂಡ – ಹೆಂಡತಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶ ಮಾಡಿದ ನಟಿ ಸಂಜನಾ ಗಲ್ರಾನಿ ಮೊದಲ ಮಗುವಿಗೆ ಜನ್ಮ ನೀಡಿದ್ದು, ಮುದ್ದಾದ ಗಂಡು ಮಗುವಿನ ತಾಯಿಯಾಗಿದ್ದಾರೆ. ಅದಕ್ಕೆ ಮೊದಲು ಅವರು ಮಾಡಿಸಿದ್ದ ಬೇಬಿ ಬಂಪ್ ಫೋಟೋ ಶೂಟ್ ವೈರಲ್ ಆಗಿದ್ದು, ಆ ಫೋಟೋಗಳು ಇಲ್ಲಿವೆ.
ಕನ್ನಡ ಮಾತ್ರವಲ್ಲದೇ ಪರಭಾಷಾ ಚಿತ್ರಗಳಲ್ಲೂ ನಟಿಸಿರುವ ಸಂಜನಾ ಇತ್ತೀಚೆಗೆ ತಾವು ಗರ್ಭಿಣಿ ಎಂಬ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದರು. ಸಾಮಾಜಿಕ ಜಾಲಾತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ಸಂಜನಾ ಜೀವನದ ಸುಂದರ ಕ್ಷಣಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.
2/ 9
ಗಂಡ ಹೆಂಡತಿ, ಮೈಲಾರಿ, ದಂಡುಪಾಳ್ಯ 2′ ಸಿನಿಮಾಗಳಲ್ಲಿ ನಟಿಸಿರುವ ಸಂಜನಾ ಅಜೀಜ್ ಪಾಷಾ ಅವರೊಂದಿಗೆ ಮದುವೆ ಆಗಿದ್ದು, ಹೊಸ ಬದುಕಿನತ್ತ ಹೆಜ್ಜೆ ಇಟ್ಟಿದ್ದು, ಗಂಡು ಮಗುವಿನ ತಾಯಿಯಾಗಿದ್ದಾರೆ.
3/ 9
ಇನ್ನು ಇತ್ತೀಚೆಗಷ್ಟೇ ಸಂಜನಾ ಸೀಮಂತವಾಗಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರ ಆಗಿದ್ದು, ಸಂಜನಾ ಅವರ ನೆಚ್ಚಿನ ತಿನಿಸುಗಳನ್ನು ಕೊಟ್ಟು, ಸಂಭ್ರಮದಿಂದ ಸೀಮಂತ ಮಾಡಲಾಗಿತ್ತು.
4/ 9
ಮೊದಲು ಹಿಂದು ಸಂಪ್ರದಾಯದಂತೆ ಸೀಮಂತ ಮಾಡಲಾಗಿತ್ತು, ನಂತರ ಗಂಡನ ಧರ್ಮ ಮುಸ್ಲಿಂ ಸಂಪ್ರದಾಯದಂತೆ ಸಹ ಸಂಜನಾಗೆ ಸೀಮಂತಾ ಮಾಡಲಾಗಿತ್ತು.
5/ 9
ಸಾಮಾಜಿಕ ಜಾಲಾತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ಸಂಜನಾ ಜೀವನದ ಸುಂದರ ಕ್ಷಣಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಈಗ ಗಂಡು ಮಗುವಿಗೆ ಜನ್ಮ ನೀಡಿರುವ ಸಂಜನಾ ಅದಕ್ಕೂ ಮೊದಲು ಹೊಸ ಬೇಬಿ ಬಂಪ್ ಫೋಟೋಶೂಟ್ನ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ,
6/ 9
ಗ್ರೀನ್ ಕಲರ್ ಗೌನ್ನಲ್ಲಿ ಬೇಬಿ ಬಂಪ್ ತೋರಿಸುತ್ತಾ ಸಂಜನಾ ಗಲ್ರಾನಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ ವೈರಲ್ ಆಗುತ್ತಿದೆ. ಈ ಫೋಟೋಗಳಲ್ಲಿ ಸಂಜನಾ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ.
7/ 9
ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸಂಜನಾ, ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ಕುರಿತು ಅವರು ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. 2022ರ ಮೇ ತಿಂಗಳಲ್ಲಿ ಮಗುವಿನ ಆಗಮನ ಆಗಲಿದೆ ಎಂದು ತಿಳಿಸಿದ್ದರು.
8/ 9
ಕೇವಲ ಚಿತ್ರಗಳಲ್ಲಿ ಅಷ್ಟೇ ಅಲ್ಲದೇ ರಿಯಾಲಿಟಿ ಶೋಗಳಲ್ಲೂ ನಟಿ ಸಂಜನಾ ಗಲ್ರಾನಿ ಅವರು ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಕನ್ನಡ, ಮುಜ್ಞೆ ಶಾದಿ ಕರೋಗೆ? ಎಂಬ ರಿಯಾಲಿಟಿ ಶೋಗಳಲ್ಲೂ ನಟಿ ಸಂಜನಾ ಅವರು ಭಾಗವಹಿಸಿದ್ದರು.
9/ 9
ಸಂಜನಾ ತಮ್ಮ ಜೀವನದ ಪ್ರತಿಯೊಂದು ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುವ ಸಂಜನಾ, ಗಂಡು ಅಥವಾ ಹೆಣ್ಣು ಮಗುವಿಗೆ ಹೆಸರನ್ನು ಸೂಚಿಸಿ ಎಂದು ಸಹ ಕೇಳಿದ್ದಾರೆ.