Sangeetha Bhat: ನಾಗಿಣಿಯಾಗಿ ಕಿರುತೆರೆಗೆ ಮರಳಿದ ಸಂಗೀತಾ ಭಟ್, 'ಎರಡನೇ ಸಲ' ಮೋಡಿ ಮಾಡಲು ರೆಡಿಯಾದ ನಟಿ
Sangeetha Bhat Come Back: ಎರಡನೇ ಸಲ', 'ಅನುಕ್ತ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದ್ದ ನಟಿ ಸಂಗೀತಾ ಭಟ್ ಕಳೆದ 2 ವರ್ಷದಿಂದ ಸಿನಿಮಾರಂಗದಿಂದ ದೂರವಿದ್ದರು. ಆದರೆ ಇದೀಗ ಮರಳಿ ಬಂದಿದ್ದಾರೆ. ಅದು ನಾಗಿಣಿ ಅವತಾರದಲ್ಲಿ.
ಸ್ಯಾಂಡಲ್ವುಡ್ನಲ್ಲಿ ತಮ್ಮ ನಟನೆ ಹಾಗೂ ಸೌಂದರ್ಯದ ಕಾರಣದಿಂದ ಹೆಸರು ಪಡೆದ ನಟಿ ಎಂದರೆ ಸಂಗೀತಾ ಭಟ್. ಎರಡನೇ ಸಲ, ಪ್ರೀತಿ ಗೀತಿ ಇತ್ಯಾದಿ, ಮಾಮು ಟೀ ಅಂಗಡಿ, ದಯವಿಟ್ಟು ಗಮನಿಸಿ ಸಿನಿಮಾಗಳಲ್ಲಿ ಅವರ ಅಭಿನಯ ಜನರಿಗೆ ಬಹಳ ಇಷ್ಟವಾಗಿದ್ದವು. (ಚಿತ್ರಕೃಪೆ: ಇನ್ಸ್ಟಾಗ್ರಾಂ)
2/ 8
ಬರೋಬ್ಬರಿ ಎರಡು ವರ್ಷಗಳ ನಂತರ ಮತ್ತೊಮ್ಮೆ ಸಿನಿಮಾದಲ್ಲಿ ನಟಿಸಲು ನಟಿ ಸಿದ್ದವಾಗಿದ್ದು, ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲು ಬರುತ್ತಿದ್ದಾರೆ. ಅದು ಒಂದು ವಿಭಿನ್ನ ಕಥೆಯುಳ್ಳ ಸಿನಿಮಾ ಮೂಲಕ. (ಚಿತ್ರಕೃಪೆ: ಇನ್ಸ್ಟಾಗ್ರಾಂ)
3/ 8
ಟಿ ಸಂಗೀತಾ ಭಟ್ ತಮ್ಮ ವೈಯಕ್ತಿಕ ಜೀವನದತ್ತ ಗಮನ ಹರಿಸುವ ಸಲುವಾಗಿ ಹಾಗೂ ಕೆಲ ವಿಚಾರಗಳಿಂದ ಅವರು ಸಿನಿಮಾ ರಂಗದಿಂದ ದೂರವಿದ್ದರು. ಆದರೆ ರೂಪಾಂತರ ಎನ್ನುವ ಸಿನಿಮಾ ಮೂಲಕ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. (ಚಿತ್ರಕೃಪೆ: ಇನ್ಸ್ಟಾಗ್ರಾಂ)
4/ 8
ಈ ಬಗ್ಗೆ ಮಾತನಾಡಿದ್ದ ನಟಿ, ರೂಪಾಂತರ ಸಿನಿಮಾ ನನಗೆ ಒಂದು ರೀತಿಯಲ್ಲಿ ಕಮ್ಬ್ಯಾಕ್ ಸಿನಿಮಾವಾಗಿದೆ, ಇದರಲ್ಲಿ ಹಾರರ್, ಸಸ್ಪೆನ್ಸ್, ಥ್ರಿಲ್ಲರ್, ಫ್ಯಾಮಿಲಿ ಎಮೋಷನ್ಸ್ ಎಲ್ಲವೂ ಇದೆ ಎಂದು ಹೇಳಿದ್ದಾರೆ. (ಚಿತ್ರಕೃಪೆ: ಇನ್ಸ್ಟಾಗ್ರಾಂ)
5/ 8
ಕೇವಲ ಸಿನಿಮಾ ಪಾತ್ರವಲ್ಲದೇ ಸಂಗೀತಾ ಭಟ್ ಧಾರಾವಾಹಿಯನ್ನು ಸಹ ಒಪ್ಪಿಕೊಂಡಿದ್ದಾರೆ. ಈ ಮೂಲಕ ಒಟ್ಟಿಗೆ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಒಟ್ಟಿಗೆ ಸದ್ದು ಮಾಡಲು ಬರುತ್ತಿದ್ದಾರೆ. (ಚಿತ್ರಕೃಪೆ: ಇನ್ಸ್ಟಾಗ್ರಾಂ)
6/ 8
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ’ ಸೀರಿಯಲ್ನಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ. (ಚಿತ್ರಕೃಪೆ: ಇನ್ಸ್ಟಾಗ್ರಾಂ)
7/ 8
ನಾಗರಪಂಚಮಿ ಪ್ರಯುಕ್ತ ನಾಗಮಣಿ ರಹಸ್ಯ ಎಂಬ ಎಪಿಸೋಡ್ಗಾಗಿ ನಾಗಿಣಿಯಾಗಿ ಸಂಗೀತಾ ಭಟ್ ಕಾಣಿಸಿಕೊಳ್ಳುತ್ತಿದ್ದು, 3 ಗಂಟೆಗಳ ಮಹಾ ಸಂಚಿಕೆಯಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. (ಚಿತ್ರಕೃಪೆ: ಇನ್ಸ್ಟಾಗ್ರಾಂ)
8/ 8
ಕೊನೆಗೂ ನಟಿ ಇಷ್ಟು ದಿನ ಅಭಿಮಾನಿಗಳು ಎಲ್ಲಿದ್ದೀರಿ ಎಂದು ಕೇಳುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಒಳ್ಳೊಳ್ಳೆ ಪಾತ್ರ ಸಿಕ್ಕರೆ ನಟಿಸುತ್ತೇನೆ ಎಂದಿದ್ದಾರೆ. (ಚಿತ್ರಕೃಪೆ: ಇನ್ಸ್ಟಾಗ್ರಾಂ)