ಹೈದರಾಬಾದ್ ನಲ್ಲಿ ಹೊಸದಾಗಿ ಖರೀದಿಸಿದ ಐಷಾರಾಮಿ ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್ ನಿಂದಾಗಿ ಈ ನಟಿ ಈಗ ಸುದ್ದಿಯಲ್ಲಿದ್ದಾರೆ. ಈ ನಟಿ ಈಗ ಜಯಭೇರಿ ಆರೆಂಜ್ ಕೌಂಟಿಯಲ್ಲಿ ಐಷಾರಾಮಿ 3 ಬಿಎಚ್‌ಕೆ ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದಾರೆ. ಇದರ ಬೆಲೆ ಕೇಳಿದರೆ, ನೀವು ಒಂದು ಕ್ಷಣ ಶಾಕ್ ಆಗುವುದಂತೂ ಗ್ಯಾರಂಟಿ. ಏಕೆಂದರೆ ಇದು ಬರೋಬ್ಬರಿ 7.8 ಕೋಟಿ ರೂಪಾಯಿ ಬೆಲೆಯ ಐಷಾರಾಮಿ ಅಪಾರ್ಟ್ಮೆಂಟ್ ಆಗಿದೆಯಂತೆ.
ಐಷಾರಾಮಿ ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್ ನ ಬೆಲೆ ಎಷ್ಟು?: ರಿಯಲ್ ಎಸ್ಟೇಟ್ ಡೇಟಾ ಅನಾಲಿಟಿಕ್ಸ್ ಸಂಸ್ಥೆಯಾದ ಸಿಆರ್‌ಇ ಮ್ಯಾಟ್ರಿಕ್ಸ್ ನ ವರದಿಯು ಸಮಂತಾ ರುತ್ ಪ್ರಭು ಅವರ ಐಷಾರಾಮಿ ಹೊಸ ಆಸ್ತಿಯ ಬಗ್ಗೆ ಬಹಿರಂಗಪಡಿಸಿದೆ. ಹೈದರಾಬಾದ್ ನ ಜಯಭೇರಿ ಆರೆಂಜ್ ಕೌಂಟಿಯಲ್ಲಿ ನಟಿ ತನ್ನ ಈ ಐಷಾರಾಮಿ ಮನೆಯನ್ನು 7.8 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. 13ನೇ ಮಹಡಿಯಲ್ಲಿ 3,920 ಚದರ ಅಡಿ ಮತ್ತು 14ನೇ ಮಹಡಿಯಲ್ಲಿ 4,024 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಈ ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್ ಒಟ್ಟು 7,944 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.