Rashmika Mandanna: ಸಲ್ಲು ಭಾಯ್ಗಾಗಿ ರಶ್ಮಿಕಾ-ಸಮಂತಾ ನಡುವೆ ಬಿಗ್ ಫೈಟ್, ಯಾರಿಗೆ ಸಿಗಲಿದೆ ಗೋಲ್ಡನ್ ಚಾನ್ಸ್?
ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ಬ್ಯೂಟಿ ಸಮಂತಾ ನಡುವೆ ಇದೀಗ ಬಿಗ್ ಫೈಟ್ ಏರ್ಪಟ್ಟಿದೆ. ಹೌದು, ಕೇವಲ ಬಾಲಿವುಡ್ನ ಚಿತ್ರಕ್ಕಾಗಿ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದೆ.
ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ಬ್ಯೂಟಿ ಸಮಂತಾ ನಡುವೆ ಇದೀಗ ಬಿಗ್ ಫೈಟ್ ಏರ್ಪಟ್ಟಿದೆ. ಹೌದು, ಕೇವಲ ಬಾಲಿವುಡ್ ಚಿತ್ರಕ್ಕಾಗಿ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದೆ. ಸಲ್ಮಾನ್ ಖಾನ್ ಮುಂದಿನ ಚಿತ್ರಕ್ಕಾಗಿ ನಾಯಕಿಯಾಗಲು ಈ ಸೌತ್ ಬ್ಯೂಟಿಗಳ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದೆಯಂತೆ.
2/ 7
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಬಾಲಿವುಡ್ನಲ್ಲಿಯೂ ಈಗಾಗಲೇ ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಲಿದ್ದಾರೆ ಎನ್ನಲಾಗಿದ್ದು, ಇದೀಗ ಸಲ್ಮಾನ್ ಖಾನ್ ಜೊತೆ ನಟಿಸಲು ರಶ್ಮಿಕಾ ಅವರು ಸಹ ಕಾತುರರಾಗಿದ್ದಾರೆ ಎನ್ನಲಾಗಿದೆ.
3/ 7
ಸದ್ಯ ಟಾಲಿವುಡ್ ನಲ್ಲಿ ಹಾಗೂ ಸೌತ್ ಇಂಡಸ್ಟ್ರಿಯಲ್ಲಿಯೂ ಸಮಂತಾಗೆ ಸಖತ್ ಬೇಡಿಕೆ ಇದೆ. ಹೀಗಾಗಿ ಅವರಿಗೂ ಬಾಲಿವುಡ್ ಅಂಗಳದಿಂದ ಆಫ್ರ್ಗಳು ಬರುತ್ತಿವೆಯಂತೆ. ಸಲ್ಮಾನ್ ಖಾನ್ ಜೊತೆಗೆ ಮೊದಲ ಬಾರಿಗೆ ನಟಿಸಲಿದ್ದಾರೆ ಎನ್ನಲಾಗಿದೆ.
4/ 7
ಇನ್ನು, ಬಾಲಿವುಡ್ನ ಸಲ್ಲು ಭಾಯ್ ಸಹ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅವರ ಮುಂದಿನ ಸಿನಿಮಾ 'ನೋ ಎಂಟ್ರಿ 2', ಚಿತ್ರದಲ್ಲಿ ನಾಯಕಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಉತ್ತರವಾಗಿ ಸಮಂತಾ ಮತ್ತು ರಶ್ಮಿಕಾ ಹೆಸರು ಮುನ್ನಲೆಯಲ್ಲಿ ಕೇಳಿಬರುತ್ತಿದೆ.
5/ 7
ಹೌದು, ದಕ್ಷಿಣದ ನಟಿಯರ ಚಾರ್ಮ್ ಸೂಪರ್ ಆಗಿದ್ದು, ಸೌತ್ ಹೀರೋಯಿನ್ ಗಳಿಗೂ ಬಾಲಿವುಡ್ನಲ್ಲಿ ಸಖತ್ ಆಫರ್ ಗಳು ಬರುತ್ತಿವೆ. ಈಗಾಗಲೇ ಪೂಜಾ ಹೆಗ್ಡೆ ಸಲ್ಲು ಜೊತೆ 'ಕಬಿ ಈದ್ ಕಬಿ ದಿವಾಲಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಅವರ ಮುಂದಿನ ಚಿತ್ರದಲ್ಲಿ ರಶ್ಮಿಕಾ ಅಥವಾ ಸಮಂತಾ ಅವರಿಬ್ಬರಲ್ಲಿ ಪೈಪೋಟಿ ನಡೆಯುತ್ತಿದೆ.
6/ 7
ಬಾಲಿವುಡ್ ಮೂಲಗಳ ಪ್ರಕಾರ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ಸಮಂತಾ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ವಿಜಯ್ ದೇವರಕೊಂಡ ಜೊತೆ 'ಖುಷಿ' ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ.
7/ 7
ಇನ್ನು, ಟಾಲಿವುಡ್ ಅಂಗಳದಲ್ಲಿ ಬಹು ಬೇಡಿಕೆಯ ನಟಿ ಆಗಿರುವ ರಶ್ಮಿಕಾ ಸದ್ಯ ರಾಮ್ ಚರಣ್ ಅವರ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ ಈ ಇಬ್ಬರೂ ನಟಿಯರ ನಡುವೆ ಸಲ್ಮಾನ್ ಖಾಣ್ ಚಿತ್ರಕ್ಕಾಗಿ ಬಿಗ್ ಪೈಟ್ ನಡೆಯುತ್ತಿದ್ದು, ಅಂತಿಮವಾಗಿ ಯಾರ ಕೈಗೆ ಈ ಆಫರ್ ಸಿಗಲಿದೆ ಎಂದು ಕಾದು ನೋಡಬೇಕಿದೆ.