Saanya Iyer: ಬಿಗ್ ಬಾಸ್ ಮೇಲೆ ಸಾನ್ಯಾ ಕೋಪ! ರೂಪೇಶ್ಗೆ ತಲುಪುತ್ತಿಲ್ವಂತೆ ಪುಟ್ಟಗೌರಿ ಕಳಿಸಿದ ಗಿಫ್ಟ್!
ಬಿಗ್ ಬಾಸ್ ಮೇಲೆ ಸಾನ್ಯಾ ಐಯ್ಯರ್ ಕೋಪಗೊಂಡಿದ್ದಾರೆ. ತಾನು ಕಳಿಸಿದ ವಸ್ತುಗಳು ರೂಪೇಶ್ ಶೆಟ್ಟಿಗೆ ತಲುಪುತ್ತಿಲ್ಲ ಎಂದು ಹೇಳಿದ್ದಾರೆ. ಸಾನ್ಯಾ ಐಯ್ಯರ್ ಬಿಗ್ ಬಾಸ್ ಮೇಲೆ ಮಾಡುತ್ತಿರುವ ಆರೋಪ ಸುಳ್ಳಾ? ನಿಜಾನಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ...
ಬಿಗ್ ಬಾಸ್ ಸೀಸನ್ 09ರಲ್ಲಿ ಸಾನ್ಯಾ ಐಯ್ಯರ್ ಮತ್ತು ರೂಪೇಶ್ ಶೆಟ್ಟಿ ಎಷ್ಟು ಕ್ಲೋಸ್ ಆಗಿದ್ದರು ಎಂದು ಗೊತ್ತಿದೆ. ಆದ್ರೆ ಸಾನ್ಯಾ ಕಳೆದ 2 ವಾರಗಳ ಹಿಂದೆ ಔಟ್ ಆಗಿದ್ದಾರೆ.
2/ 8
ಬಿಗ್ ಬಾಸ್ ನಿಂದ ಔಟ್ ಆದ ಮೇಲೆ ಸಾನ್ಯಾ ಐಯ್ಯರ್ ರೂಪೇಶ್ ಶೆಟ್ಟಿಗೆ ಡ್ರೆಸ್ಗಳನ್ನು ಕಳಿಸುತ್ತಿದ್ದಾರಂತೆ. ಆದ್ರೆ ಅವು ರೂಪೇಶ್ ಶೆಟ್ಟಿಗೆ ತಲುಪಿಲ್ಲ ಎಂದು ಸಾನ್ಯಾ ಹೇಳುತ್ತಿದ್ದಾರೆ.
3/ 8
ಎಸ್ ಅಂದ್ರೆ ಸ್ಟ್ರಾಂಗ್. ರೂಪಿ ನೀನು ಸ್ಟ್ರಾಂಗ್ ಆಗಿರು ಆಯ್ತಾ ನಾನು ಕಳುಹಿಸುತ್ತಿರುವ ಶರ್ಟ್ಗಳು ನಿನಗೆ ತಲುಪಿಸುತ್ತಿಲ್ಲ ಆದರೆ ಪಾರ್ಸಲ್ ಸ್ವೀಕರಿಸಿರುವುದಾಗಿ ಹೇಳುತ್ತಿದ್ದಾರೆ ಎಂದು ಸಾನ್ಯಾ ಐಯ್ಯರ್ ಬಿಗ್ ಬಾಸ್ ಮೇಲೆ ಕೋಪಗೊಂಡಿದ್ದಾರೆ.
4/ 8
ನನ್ನ ಪಾಸಿಟಿವಿಟಿ ಮತ್ತು ಸಪೋರ್ಟ್ಸ್ ಕಳುಹಿಸುತ್ತಿರುವೆ, ಇದನ್ನು ಯಾರಿಂದಲ್ಲೂ ಸ್ಟಾಪ್ ಮಾಡಲು ಆಗುವುದಿಲ್ಲ ಆಯ್ತಾ. ನನ್ನ ಬೆಸ್ಟಿ ಸದಾ ಶೈನ್ ಆಗುತ್ತಿರಬೇಕು ಎಂದು ಸಾನ್ಯಾ ಪೋಸ್ಟ್ ಹಾಕಿಕೊಂಡಿದ್ದಾರೆ.
5/ 8
ಸಾನ್ಯಾ ಐಯ್ಯರ್ ಔಟ್ ಆದಾಗ ರೂಪೇಶ್ ಶೆಟ್ಟಿ, ನೀನು ಎಸ್ ಅಕ್ಷರ ಇರುವ ರೆಡ್ ಟಿ ಶರ್ಟ್ ಕಳಿಸು ಎಂದಿರುತ್ತಾನೆ. ಆದ್ರೆ ಸಾನ್ಯಾ ಯಾಕೆ ಟಿ ಶರ್ಟ್ ಕಳಿಸಿಲ್ಲ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ.
6/ 8
ಅದಕ್ಕೆ ಸಾನ್ಯಾ ಐಯ್ಯರ್ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಕಳಿಸಿದ ಡ್ರೆಸ್ ರೂಪೇಶ್ ಶೆಟ್ಟಿಯನ್ನು ತಲುಪುತ್ತಿಲ್ಲ ಎಂದಿದ್ದಾರೆ. ಇಬ್ಬರು ಪ್ರಣಯ ಪಕ್ಷಿಗಳಂತೆ ಮನೆಯಲ್ಲಿ ಇರುತ್ತಿದ್ರು.
7/ 8
ಸಾನ್ಯಾ ಐಯ್ಯರ್ ಮತ್ತು ರೂಪೇಶ್ ಶೆಟ್ಟಿ ಒಟಿಟಿಯಿಂದ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಇಬ್ಬರು ತುಂಬಾ ಆತ್ಮೀಯರಾಗಿದ್ದರು.
8/ 8
ಸಾನ್ಯಾ ಐಯ್ಯರ್ ಬಿಗ್ ಬಾಸ್ ಮೇಲೆ ಮಾಡುತ್ತಿರುವ ಆರೋಪ ಸುಳ್ಳಾ? ನಿಜಾನಾ? ಎಂದು ಎಲ್ಲರು ಕೇಳುತ್ತಿದ್ದಾರೆ. ಏನೇ ಆಗಲಿ ಇಬ್ಬರ ಸ್ನೇಹ ಮುಂದುವರೆಯಲಿ ಎಂದು ಹೇಳ್ತಾ ಇದ್ದಾರೆ ಇಬ್ಬರ ಫ್ಯಾನ್ಸ್.