Rekha At NMACC: ಯಾವ ಫ್ಯಾಷನ್ ಬಂದ್ರೂ ಸೀರೆ ಬಿಡಲ್ಲ ಹಿರಿಯ ನಟಿ ರೇಖಾ! ಫೋಟೋಸ್ ನೋಡಿ

ಬಾಲಿವುಡ್ ನಟಿ ರೇಖಾ ಅವರು NMACC ಗಾಲಾದಲ್ಲಿ ಮಿಂಚಿದ್ದಾರೆ. ಎಲ್ಲಾ ಸೆಲೆಬ್ರಿಟಿಗಳು ಟ್ರೆಂಡೀ ಡ್ರೆಸ್ ಧರಿಸಿದ್ದರೆ ರೇಖಾ ಮಾತ್ರ ಸುಂದರವಾದ ಸೀರೆ ಉಟ್ಟು ಬಂದಿದ್ದರು. ಅದೂ ಕೂಡಾ ಸಾಂಪ್ರದಾಯಿಕ ಶೈಲಿಯಲ್ಲಿದ್ದದ್ದು ವಿಶೇಷ.

First published:

  • 17

    Rekha At NMACC: ಯಾವ ಫ್ಯಾಷನ್ ಬಂದ್ರೂ ಸೀರೆ ಬಿಡಲ್ಲ ಹಿರಿಯ ನಟಿ ರೇಖಾ! ಫೋಟೋಸ್ ನೋಡಿ

    ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆ ಅದ್ಧೂರಿಯಾಗಿ ನಡೆದು ಎರಡನೇ ದಿನ NMACC ಗಾಲಾದಲ್ಲಿ ಬಾಲಿವುಡ್ ಸ್ಟಾರ್ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದರು. ಹಿರಿಯ ಬಾಲಿವುಡ್ ತಾರೆ ರೇಖಾ ಅವರು ನೀತಾ ಅಂಬಾನಿ ಅವರ ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟರು.

    MORE
    GALLERIES

  • 27

    Rekha At NMACC: ಯಾವ ಫ್ಯಾಷನ್ ಬಂದ್ರೂ ಸೀರೆ ಬಿಡಲ್ಲ ಹಿರಿಯ ನಟಿ ರೇಖಾ! ಫೋಟೋಸ್ ನೋಡಿ

    ಇಲ್ಲಿ ತುಂಬಾ ಹೈಲೈಟ್ ಆಗಿದ್ದು ನಟಿ ರೇಖಾ ಅವರ ಉಡುಗೆ ಹಾಗೂ ಅಲಂಕಾರ. ಹಿರಿಯ ತಾರೆ ಗಿಣಿ ಹಸಿರು ಬಣ್ಣದ ಗೋಲ್ಡನ್ ಶೇಡ್ ಸೀರೆ ಉಟ್ಟಿದ್ದರು. ಇದಕ್ಕೆ ಅದೇ ಬಣ್ಣವನ್ನು ಹೋಲುವಂತಹ ಪ್ರಿಂಟೆಡ್ ಬ್ಲೌಸ್ ಧರಿಸಿದ್ದರು.

    MORE
    GALLERIES

  • 37

    Rekha At NMACC: ಯಾವ ಫ್ಯಾಷನ್ ಬಂದ್ರೂ ಸೀರೆ ಬಿಡಲ್ಲ ಹಿರಿಯ ನಟಿ ರೇಖಾ! ಫೋಟೋಸ್ ನೋಡಿ

    ರೇಖಾ ಅವರು ಎಂದಿನಂತೆ ಸೀರೆ ಉಟ್ಟುಕೊಂಡು ಬಂದರೂ ಈ ಬಾರಿ ನಟಿಯ ಅಲಂಕಾರ ಹಾಗೂ ಆಭರಣಗಳು ವಿಶಿಷ್ಟವಾಗಿದ್ದವು. ಈ ಅಲಂಕಾರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    MORE
    GALLERIES

  • 47

    Rekha At NMACC: ಯಾವ ಫ್ಯಾಷನ್ ಬಂದ್ರೂ ಸೀರೆ ಬಿಡಲ್ಲ ಹಿರಿಯ ನಟಿ ರೇಖಾ! ಫೋಟೋಸ್ ನೋಡಿ

    ರೇಖಾ ಅವರು ಹಿರಿಯ ನಟಿ ಕಾಜೊಲ್ ಹಾಗೂ ಅವರ ಪುತ್ರಿ ನೈಸಾ ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟರು. ಮೂವರು ಜೊತೆಯಾಗಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ಕಾಜೊಲ್ ಅವರು ಹಾಗೂ ಅವರ ಮಗಳು ನೈಸಾ ವೈಟ್ ಔಟ್​ಫಿಟ್​ನಲ್ಲಿ ಬಂದಿದ್ದರು.

    MORE
    GALLERIES

  • 57

    Rekha At NMACC: ಯಾವ ಫ್ಯಾಷನ್ ಬಂದ್ರೂ ಸೀರೆ ಬಿಡಲ್ಲ ಹಿರಿಯ ನಟಿ ರೇಖಾ! ಫೋಟೋಸ್ ನೋಡಿ

    ರೇಖಾ ಅವರು ಫುಲ್ ಸ್ಲೀವ್ ಬ್ಲೌಸ್ ಧರಿಸಿದ್ದರು. ಸುಂದರವಾಗಿ ಕೂದಲು ಬಾಚಿ ಬನ್ ಮಾಡಿ ಮಲ್ಲಿಗೆ ಮುಡಿದಿದ್ದರು ಈ ಹಿರಿಯ ತಾರೆ. ನಟಿ ಕೆಂಪು ಬಿಂದಿಯನ್ನೂ ಇಟ್ಟಿದ್ದರು. ನಟಿ ಸ್ಟೈಲಿಷ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟರು.

    MORE
    GALLERIES

  • 67

    Rekha At NMACC: ಯಾವ ಫ್ಯಾಷನ್ ಬಂದ್ರೂ ಸೀರೆ ಬಿಡಲ್ಲ ಹಿರಿಯ ನಟಿ ರೇಖಾ! ಫೋಟೋಸ್ ನೋಡಿ

    ರೇಖಾ ಅವರು ಆಭರಣಗಳಲ್ಲಿ ವಿಶೇಷವಾದ ನೆತ್ತಿಬೊಟ್ಟು ಇಟ್ಟಿದ್ದರು. ಮುತ್ತುಗಳನ್ನು ಪೋಣಿಸಿದಂತಹ ಗ್ರ್ಯಾಂಡ್ ನೆತ್ತಿಬೊಟ್ಟು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ನೀವು ಎವರ್​ಗ್ರೀನ್ ಬ್ಯೂಟಿ ಮೇಡಂ ಎಂದಿದ್ದಾರೆ ನೆಟ್ಟಿಗರು.

    MORE
    GALLERIES

  • 77

    Rekha At NMACC: ಯಾವ ಫ್ಯಾಷನ್ ಬಂದ್ರೂ ಸೀರೆ ಬಿಡಲ್ಲ ಹಿರಿಯ ನಟಿ ರೇಖಾ! ಫೋಟೋಸ್ ನೋಡಿ

    ನಟಿ ರೇಖಾ ಅವರು ಈಗ ನಟನೆಯಿಂದ ದೂರವಿದ್ದಾರೆ. ಅವರು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ, ಅತಿಥಿಯಾಗಿ ಕಾಣಿಸಿಕೊಳ್ಳುವುದು ಬಿಟ್ಟರೆ ಸಿನಿಮಾಗಳನ್ನು ಮಾಡುತ್ತಿಲ್ಲ. ಆದರೆ ಬಾಲಿವುಡ್ ಇವೆಂಟ್​ಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.

    MORE
    GALLERIES