Rashmika Mandanna: ರಿಷಬ್ ಶೆಟ್ಟಿಗೆ ಟಾಂಗ್ ಕೊಟ್ಟ ರಶ್ಮಿಕಾ ಮಂದಣ್ಣ! ಕೈ ಸನ್ನೆ ಬಗ್ಗೆ ಹೇಳಿದ್ದೇನು?
ನನ್ನ ಕೈ ಸನ್ನೆಗಳು ಕೆಲವರಿಗೆ ಇಷ್ಟವಾಗದಿರಬಹುದು, ನಾನು ಹೆಚ್ಚು ಎಕ್ಸ್ ಪ್ರೆಸಿವ್ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಅವರು ಹೇಳಿದ್ದು ರಿಷಬ್ ಶೆಟ್ಟಿಗಾ ಎಂಬ ಅನುಮಾನಗಳು ಹೆಚ್ಚಾಗಿವೆ.
ಸ್ಯಾಂಡಲ್ವುಡ್ ಸಾನ್ವಿ, ತೆಲುಗಿನ ಶ್ರೀವಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ಸಿನಿಮಾ ಮಾಡ್ತಾ ಇದ್ದಾರೆ.
2/ 8
ಕನ್ನಡ ಚಿತ್ರರಂಗದಿಂದ ಸಿನಿಮಾ ಜೀವನ ಪ್ರಾರಂಭಿಸಿದ್ದ ರಶ್ಮಿಕಾ ಮಂದಣ್ಣ ಅವರು ಈಗ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಅವರ ಕಾಲ್ ಶೀಟ್ ಪಡೆಯಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಸಾಲು ನಿಂತಿವೆಯಂತೆ.
3/ 8
ಬಾಲಿವುಡ್ ಬಬಲ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಈ ರೀತಿ ಹೇಳಿದ್ದಾರೆ. ನಾನು ಮಾತನಾಡುವುದು, ನನ್ನ ಕೈ ಸನ್ನೆಗಳು ಕೆಲವರಿಗೆ ಇಷ್ಟವಾಗದಿರಬಹುದು ಎಂದು ಹೇಳಿದ್ದಾರೆ.
4/ 8
ನನ್ನ ಕೈ ಸನ್ನೆಗಳು ಕೆಲವರಿಗೆ ಇಷ್ಟವಾಗದಿರಬಹುದು, ನಾನು ಹೆಚ್ಚು ಎಕ್ಸ್ ಪ್ರೆಸಿವ್ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಅವರು ಹೇಳಿದ್ದು ರಿಷಬ್ ಶೆಟ್ಟಿಗಾ ಎಂಬ ಅನುಮಾನಗಳು ಹೆಚ್ಚಾಗಿವೆ.
5/ 8
ಈ ಹಿಂದೆ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ, ಕಿರಿಕ್ ಪಾರ್ಟಿ ಸಿನಿಮಾ ಬಗ್ಗೆ ಹೇಳುವಾಗ ಪ್ರೊಡಕ್ಷನ್ ಹೌಸ್ ಹೆಸರನ್ನು ಕೈ ಬೆರಳ ಸನ್ನೆ ಯಿಂದ ಹೇಳಿದ್ದರು.
6/ 8
ರಿಷಬ್ ಶೆಟ್ಟಿ ಸಹ ಸಂದರ್ಶನವೊಂದರಲ್ಲಿ ಕೈ ಸನ್ನೆ ಮಾಡಿ ಈ ರೀತಿ ತೋರಿಸುವ ನಟಿಯರ ಜೊತೆ ನಟಿಸಲ್ಲ ಎಂದು ಹೇಳಿದ್ದರು. ರಶ್ಮಿಕಾ ಕೈ ಸನ್ನೆ ತೀವ್ರ ವಿವಾದಕ್ಕೊಳಗಾಗಿತ್ತು.
7/ 8
ಇದಲ್ಲದೇ ಇದನ್ನು ಹೊರತು ಪಡಿಸಿ ನನ್ನನ್ನು ಇಷ್ಟ ಪಡುವ ಜನರಿದ್ದಾರೆ ಎಂದು ರಶ್ಮಿಕಾ ಮಂದಣ್ಣ ಸಂದರ್ಶನದಲ್ಲಿ ಹೇಳಿದ್ದಾರೆ. ಸದಾ ರಶ್ಮಿಕಾ ಟ್ರೋಲ್ ಗೆ ಒಳಗಾಗುತ್ತಿದ್ದಾರೆ.
8/ 8
2016ರಲ್ಲಿ ತೆರೆಗೆ ಬಂದ ಕಿರಿಕ್ ಪಾರ್ಟಿ ಮೂಲಕ ರಶ್ಮಿಕಾ ಅವರು ಕರುನಾಡಿನ ಸಾನ್ವಿ ಆಗಿ ಮಿಂಚಿದ್ದರು. ಅವರು ಈಗ ಕನ್ನಡವನ್ನು ನಿರ್ಲಕ್ಷ್ಯ ಮಾಡ್ತಿದ್ದಾರೆ ಅನ್ನೋ ಆರೋಪ ಇದೆ.