Rashmika Mandanna: ಸಾನ್ವಿ ಮತ್ತು ಕರ್ಣನ ಲವ್ ಸ್ಟೋರಿಗೆ 6 ವರ್ಷ; 'ಕಿರಿಕ್ ಪಾರ್ಟಿ' ನೆನಪು ಮಾಡಿಕೊಂಡ ರಶ್ಮಿಕಾ ಮಂದಣ್ಣ
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಟಿ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದೀಗ ಕಿರಿಕ್ ಪಾರ್ಟಿ ಚಿತ್ರ ತೆರೆ ಕಂಡು 6 ವರ್ಷವಾಗಿದೆ. ಈ ದಿನವನ್ನು ರಶ್ಮಿಕಾ ನೆನಪು ಮಾಡಿಕೊಂಡಿದ್ದಾರೆ. ನಿರ್ದೇಶಕ ರಿಷಬ್ ಕೂಡ ಚಿತ್ರ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಕಿರಿಕ್ ಪಾರ್ಟಿ'(Kirik Party) ಚಿತ್ರ 6 ವರ್ಷಗಳನ್ನ ಪೂರೈಸಿದೆ. ಕಿರಿಕ್ ಪಾರ್ಟಿ ಸಿನಿಮಾ ಜರ್ನಿಯನ್ನ ರಶ್ಮಿಕಾ ಮಂದಣ್ಣ ನೆನಪು ಮಾಡಿಕೊಂಡಿದ್ದಾರೆ. ಈ ಕುರಿತು ಸ್ಪೆಷಲ್ ಪೋಸ್ಟ್ ಕೂಡ್ ಶೇರ್ ಮಾಡಿದ್ದಾರೆ.
2/ 8
ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ `ಕಿರಿಕ್ ಪಾರ್ಟಿ’ ಡಿ.30, 2016ರಲ್ಲಿ ತೆರೆಕಂಡಿತ್ತು. ಸಿನಿಮಾ ಕೂಡ ಸಕ್ಸಸ್ ಕಂಡಿತ್ತು.
3/ 8
ಚಿತ್ರದಲ್ಲಿ ರಶ್ಮಿಕಾ ಹಾಗೂ ರಕ್ಷಿತ್ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದರು. ಈ ಸಿನಿಮಾ ಹಿಟ್ ಆದ ಬಳಿಕ ರಶ್ಮಿಕಾಗೆ ಸಾಲು ಸಾಲು ಆಫರ್ ಗಳು ಬಂದವು.
4/ 8
ರಶ್ಮಿಕಾ ಮಂದಣ್ಣ ಟಾಲಿವುಡ್ ನತ್ತ ಮುಖ ಮಾಡಿದ್ರು. ಬಳಿಕ ಕನ್ನಡ ಸಿನಿಮಾ ಕಡೆಗಣಿಸಿದ್ದಾರೆ ಎಂದು ಕನ್ನಡಿಗರ ಕೆಂಗಣ್ಣಿಗು ರಶ್ಮಿಕಾ ಗುರಿಯಾಗಿದ್ದರು.
5/ 8
ಇತ್ತೀಚಿಗೆ ಸಂದರ್ಶನ ಒಂದರಲ್ಲಿ ತನ್ನ ಮೊದಲ ಚಿತ್ರದ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಸನ್ನೆ ಮಾಡಿ ಮತ್ತೆ ರಶ್ಮಿಕಾ ಮಂದಣ್ಣ ಟ್ರೋಲ್ ಆಗಿದ್ದರು.
6/ 8
ಇದೀಗ ರಶ್ಮಿಕಾ 6 ವರ್ಷದ ಹಿಂದೆ ನಟಿಸಿದ್ದ `ಕಿರಿಕ್ ಪಾರ್ಟಿ’ ಸಿನಿಮಾ ನೆನಪಿಸಿಕೊಂಡಿದ್ದಾರೆ. `ಕಿರಿಕ್ ಪಾರ್ಟಿ’ಗೆ ಆರು ವರ್ಷ. ಎಲ್ಲವೂ ಆರಂಭವಾದ ದಿನ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.
7/ 8
ಇದರ ಜೊತೆಗೆ ಕಿರಿಕ್ ಪಾರ್ಟಿ ಪೋಸ್ಟರ್ ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಹಂಚಿಕೊಂಡಿರುವ ಈ ಸ್ಟೇಟಸ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ರಶ್ಮಿಕಾ ಪೋಸ್ಟ್ ನೋಡಿದ ನೆಟ್ಟಿಗರು ಪರ ಹಾಗೂ ವಿರುದ್ಧವಾಗಿ ಕಮೆಂಟ್ ಮಾಡುತ್ತಿದ್ದಾರೆ.
8/ 8
ಕಿರಿಕ್ ಪಾರ್ಟಿ ರಿಲೀಸ್ ಆಗಿ 6 ವರ್ಷ ಪೂರ್ಣಗೊಳಿಸಿದ ಹಿನ್ನೆಲೆ ನಿರ್ದೇಶಕ ರಿಷಬ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ