Rashmika Mandanna: ಕನ್ನಡಿಗರ ಕೋಪದ ಬಿಸಿ ರಶ್ಮಿಕಾಗೆ ತಟ್ಟಿತಾ? ಮತ್ತೆ ನೆನಪಾದ್ರಾ ರಿಷಬ್, ರಕ್ಷಿತ್ ಶೆಟ್ಟಿ?
ನಟಿ ರಶ್ಮಿಕಾ ಮಂದಣ್ಣ ಎಲ್ಲ ಸದ್ಯ ಬಹು ಬೇಡಿಕೆ ಇರುವ ನಟಿ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ರಶ್ಮಿಕಾ ಅವರಿಗೆ ಅದ್ಯಾಕೋ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಮತ್ತೆ ನೆನಪಾಗಿದ್ದಾರೆ.
ಸ್ಯಾಂಡಲ್ವುಡ್ನಿಂದ ರಶ್ಮಿಕಾ ಮಂದಣ್ಣ ಅವರಿಗೆ ಹೆಸರು ತಂದು ಕೊಟ್ಟ ಚಿತ್ರ ಕಿರಿಕ್ ಪಾರ್ಟಿ. ಆ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಸಾನ್ವಿ ಆಗಿ ಕರುನಾಡ ಕ್ರಶ್ ಆಗಿದ್ದರು.
2/ 8
ರಶ್ಮಿಕಾ ಮಂದಣ್ಣ ಅವರು ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ಅಭಿನಯಿಸಿದ್ದ ಪುಷ್ಪಾ ಚಿತ್ರವೂ ತುಂಬಾ ಹೆಸರು ತಂದುಕೊಟ್ಟಿತು. ಶ್ರೀವಲ್ಲಿಯಾಗಿ ರಶ್ಮಿಕಾ ಎಲ್ಲರ ಮನಸ್ಸು ಗೆದ್ದಿದ್ದರು. ರಶ್ಮಿಕಾ ಅವರು ಪುಷ್ಪಾ 2 ಗಾಗಿ ಕಾಯ್ತಾ ಇದ್ದಾರಂತೆ.
3/ 8
ರಶ್ಮಿಕಾ ಮದಣ್ಣ ಅವರು ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿಯನ್ನು ನೆನಪು ಮಾಡಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ನಾನು ಸಿನಿಮಾ ರಂಗಕ್ಕೆ ಬರಲು ಅವರೇ ಕಾರಣ. ಅವರು ನನಗೆ ಒಳ್ಳೆ ಅವಕಾಶ ಕೊಟ್ಟಿದ್ದರು ಎಂದುಹೇಳಿದ್ದಾರೆ.
4/ 8
ರಶ್ಮಿಕಾ ಅವರು 4 ಬೇರೆ ಬೇರೆ ಸಿನಿಮಾ ಇಂಡಸ್ಟ್ರಿಗಳಲ್ಲಿ ಕೆಲಸ ಮಾಡಿದ್ದಾರೆ. ಎಲ್ಲ ಕಡೆ ನನಗೆ ಬೆಸ್ಟ್ ಪಿಪಲ್ ಸಿಕ್ಕಿದ್ದಾರೆ. ಅವರ ಜೊತೆ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
5/ 8
ಕಳೆದ ಬಾರಿ ರಶ್ಮಿಕಾ ಅವರು ರಿಷಬ್ ಶೆಟ್ಟಿ ಅವರ ಹೆಸರು ಹೇಳದೇ ಕೈ ಸನ್ನೆ ಮಾಡಿ, ಈ ರೀತಿಯ ಪ್ರೊಡಕ್ಷನ್ ಹೌಸ್ ಜೊತೆ ಕೆಲಸ ಮಾಡಿದ್ದೆ ಎಂದು ಹೇಳಿದ್ದರು.
6/ 8
ಅಲ್ಲದೇ ಕನ್ನಡ ಸಿನಿಮಾ ರಂಗಕ್ಕೆ ಅವಮಾನ ಮಾಡಿದ್ದರು ಎಂದು ಕನ್ನಡಾಭಿನಿಗಳು ಬೇಸರ ಮಾಡಿಕೊಂಡಿದ್ದರು. ಇಲ್ಲಿ ಸಿನಿಮಾ ಶುರು ಮಾಡಿ ಇಲ್ಲಿವರನ್ನೇ ಕಡೆಗಣಿಸುತ್ತಿದ್ದರು ಎಂದು ಹೇಳಿದ್ದರು.
7/ 8
ಅಲ್ಲದೇ ರಶ್ಮಿಕಾ ಮಂದಣ್ಣ ಅವರ ಸಿನಿಮಾಗಳನ್ನು ನೋಡಲ್ಲ ಎಂದು, ಎಷ್ಟೋ ಅಭಿಮಾನಿಗಳು ಹೇಳಿಬಿಟ್ಟಿದ್ದಾರೆ. ಕನ್ನಡಿಗರ ಕೋಪದ ಬಿಸಿ ನಟಿಗೆ ತಟ್ಟಿದಂತೆ ಕಾಣ್ತಾ ಇದೆ.
8/ 8
ರಶ್ಮಿಕಾ ಮಂದಣ್ಣ ಅವರು ಇದ್ದಕ್ಕಿದ್ದ ಹಾಗೇ ರಿಷಬ್, ರಕ್ಷಿತ್ ಅವರನ್ನು ನೆನಪಿಸಿಕೊಂಡಿರುವುದು ಶಾಕ್ ಆಗಿದೆ. ಮತ್ತೆ ಕನ್ನಡಿಗರು ರಶ್ಮಿಕಾ ಅವರನ್ನು ಒಪ್ಪಿಕೊಳ್ತಾರಾ ನೋಡಬೇಕು.