Rashmika Mandanna: ಕೆಂಪು ಸೀರೆಯಲ್ಲಿ ಮಿರಿ ಮಿರಿ ಮಿಂಚಿದ ಶ್ರೀವಲ್ಲಿ! ರೆಡ್ ಮಿರ್ಚಿಯಷ್ಟೇ ನೀವು ಹಾಟ್ ಎಂದ ಫ್ಯಾನ್ಸ್
Rashmika Mandanna: ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಹಾಟ್ ಟಾಪಿಕ್ ಆಗಿದ್ದಾರೆ. ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಕೆಂಪು ಸೀರೆಯಲ್ಲಿ ಮಿಂಚುತ್ತಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಿಡಿ ಹಚ್ಚಿದ್ದು, ಫುಲ್ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿ ಸಹ ಬ್ಯುಸಿ ಹೀರೋಯಿನ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ, ಚಮಕ್, ಪುಷ್ಪ, ಗೀತಾ ಗೋವಿಂದಂ ಮುಂತಾದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಉತ್ತಮ ಹೆಸರುಗಳಿಸಿದ್ದಾರೆ.
2/ 8
ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಮಾತ್ರ ಜನಪ್ರಿಯತೆ ಗಳಿಸಿದ್ದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ನಲ್ಲೂ ಬ್ಯುಸಿ ಹೀರೋಯಿನ್ ಆಗುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ನ ಫೇಮಸ್ ಮ್ಯಾಗಜೀನ್ ಫಿಲ್ಮ್ಫೇರ್ಗೆ ರಶ್ಮಿಕಾ ಮಂದಣ್ಣ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ.
3/ 8
ಪ್ಯಾನ್ ಇಂಡಿಯಾ ಸಿನಿಮಾದ ಯಶಸ್ಸಿನೊಂದಿಗೆ, ರಶ್ಮಿಕಾ ಮಂದಣ್ಣ ಕ್ರೇಜ್ ತುಂಬಾ ಹೆಚ್ಚಾಗಿದೆ. ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರಲ್ಲಿ ರಶ್ಮಿಕಾ ಕೂಡ ಒಬ್ಬರು.
4/ 8
ಸದ್ಯ ಬಾಲಿವುಡ್ನತ್ತ ಮುಖ ಮಾಡಿರುವ ರಶ್ಮಿಕಾ, ತಮ್ಮ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಯಾರಿಗೂ ತಾನೂ ಕಮ್ಮಿ ಇಲ್ಲ ಎನ್ನುವಂತೆ ಫುಲ್ ಮಿಂಚುತ್ತಿದ್ದು, ಅವರನ್ನು ಮೀರಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.
5/ 8
ಇತ್ತೀಚೆಗೆ, ಅವರು ಕೆಂಪು ಸೀರೆಯಲ್ಲಿ ಹಾಟ್ ಆಗಿ ಪೋಸ್ ನೀಡುತ್ತಿರುವ ಫೋಟೋಗಳು ವೈರಲ್ ಆಗುತ್ತಿದ್ದು, ಸದ್ಯ ಅದೇ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ. ರಶ್ಮಿಕಾ ಮಂದಣ್ಣ ಸ್ಟಾರ್ ಡಮ್ ಪೀಕ್ ತಲುಪಿದ್ದು, ಎಲ್ಲೆಡೆ ಅವರೇ ಸದ್ದು ಮಾಡುತ್ತಿದ್ದಾರೆ.
6/ 8
ಫುಲ್ ಹಾಟ್ ಆಗಿ ಕಾಣಿಸಿಕೊಂಡಿರುವ ರಶ್ಮಿಕಾ ನೋಡಿ ಅಭಿಮಾನಿಗಳು ರೆಡ್ ಚಿಲ್ಲಿ ಥರ ಕಾಣ್ತಿದ್ದೀರಿ ಎಂದೆಲ್ಲಾ ಕಾಮೆಂಟ್ ಮಾಡಿದ್ದು, ಸುಂದರಿಯ ಫೋಟೋಗಳಿಗೆ ಫುಲ್ ಫಿದಾ ಆಗಿದ್ದಾರೆ.
7/ 8
ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿರುವ ರಶ್ಮಿಕಾ ಮಂದಣ್ಣ ಅದಕ್ಕೂ ಮೀರಿದ ಕ್ರೇಜ್ ಸಿನಿಮಾಗಳನ್ನು ಮಾಡಿದ್ದು, ಅಭಿಮಾನಿಗಳು ಅವರ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದಾರೆ. ತೆಲುಗಿನಲ್ಲಿ ಎಲ್ಲರ ಕಣ್ಣು ಅವರ ಪುಷ್ಪ 2 ಸಿನಿಮಾದ ಮೇಲಿದೆ.
8/ 8
ಅಲ್ಲದೇ ಬಾಲಿವುಡ್ನಲ್ಲಿ ಸಹ ಅವರ ಅಭಿನಯದ ಮಿಷನ್ ಮಜ್ನು ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಬಿಗ್ ಬಿ ಜೊತೆ ಸಹ ಈ ಸುಂದರಿ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೇ ಇನ್ನೂ ಹಲವಾರು ಸಿನಿಮಾಗಳನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.