Rashmika Mandanna: ಪ್ರೇಮಿಗಳ ದಿನದಂದು ರಶ್ಮಿಕಾ ಮಂದಣ್ಣ ಪ್ರೀತಿಗೆ ಕೊಟ್ಟ ವ್ಯಾಖ್ಯಾನ ಹೀಗಿದೆ..!
Valentine's Day 2020: ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ನಟಿ. ಅದರಲ್ಲೂ ಅವರು ಜೀವನಕ್ಕೆ ಪ್ರೇರಣೆ ನೀಡುವ ಕೆಲವೊಂದು ಕೋಟ್ಗಳನ್ನು ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ. ನಿನ್ನೆ ಪ್ರೇಮಿಗಳ ದಿನದಂದು ಪ್ರೀತಿಗೆ ತಮ್ಮದೇ ಆದ ವ್ಯಾಖ್ಯಾನ ಕೊಟ್ಟಿದ್ದು, ಅದು ಅಭಿಮಾನಿಗಳಿಗೆ ಸಖತ್ ಇಷ್ಟವಾಗುತ್ತಿದೆ. (ಚಿತ್ರಗಳು ಕೃಪೆ: ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಂ ಖಾತೆ)
ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ನಟಿ. ಅದರಲ್ಲೂ ಅವರು ಜೀವನಕ್ಕೆ ಪ್ರೇರಣೆ ನೀಡುವ ಕೆಲವೊಂದು ಕೋಟ್ಗಳನ್ನು ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ.
2/ 9
ನಿನ್ನೆ ಪ್ರೇಮಿಗಳ ದಿನದಂದು ಪ್ರೀತಿಗೆ ತಮ್ಮದೇ ಆದ ವ್ಯಾಖ್ಯಾನ ಕೊಟ್ಟಿದ್ದು, ಅದು ಅಭಿಮಾನಿಗಳಿಗೆ ಸಖತ್ ಇಷ್ಟವಾಗುತ್ತಿದೆ.
3/ 9
ನಿಮ್ಮನ್ನ ನೀವು ಎಷ್ಟು ಸಾಧ್ಯವೋ ಅಷ್ಟು ಭಯಾನಕವಾಗಿ ಪ್ರೀತಿಸಿದರೆ, ಬೇರೆಯವರನ್ನು ಪ್ರೀತಿಸುವ ಕುರಿತು ನಿಮಗಿರುವ ಅಭಿಪ್ರಾಯವೇ ಬದಲಾಗುತ್ತದೆ ಎಂದು ಕಿರಿಕ್ ಬ್ಯೂಟಿ ಬರೆದುಕೊಂಡಿದ್ದಾರೆ.
4/ 9
ರಶ್ಮಿಕಾ ಯಾವಾಗ ಪ್ರೀತಿ-ಪ್ರೇಮದ ಬಗ್ಗೆ ಮಾತನಾಡಿದರೂ ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥದ ವಿಷಯವನ್ನು ಮಧ್ಯೆ ತಂದು ಸದಾ ಟ್ರೋಲ್ ಮಾಡಲಾಗುತ್ತಿತ್ತು.
5/ 9
ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಪ್ರೀತಿಸಿ ವಿವಾಹವಾಗುವ ನಿರ್ಧಾರಕ್ಕೆ ಬಂದಿದ್ದರು. ಮನೆಯವರ ಒಪ್ಪಿಗೆಯಿಂದ ನಿಶ್ಚಿತಾರ್ಥವೂ ಆಗಿತ್ತು.
6/ 9
ಆದರೆ ಕಾರಣಾಂತರಗಳಿಂದಾಗಿ ಈ ನಿಶ್ಚಿತಾರ್ಥ ಮುರಿದು ಬಿತ್ತು. ಆದರೆ ನೆಟ್ಟಿಗರುಮಾತ್ರ ಅದಕ್ಕೆ ಕಾರಣ ರಶ್ಮಿಕಾ ಮಾತ್ರ ಎಂದು ಅವರನ್ನು ಸಾಕಷ್ಟು ಟ್ರೋಲ್ ಮಾಡತೊಡಗಿದ್ದರು. ಇಂದಿಗೂ ಪ್ರೀತಿಯ ವಿಷಯ ಬಂದಾಗಲೆಲ್ಲ ರಶ್ಮಿಕಾರನ್ನೇ ದೂರುವವರ ಸಂಖ್ಯೆ ಹೆಚ್ಚು.
7/ 9
ಟ್ರೋಲಿಗರು ಹಾಗೂ ಟೀಕೆ ಮಾಡುವವರ ಮಾತುಗಳಿಗೆ ಕಿವಿಗೊಡದ ರಶ್ಮಿಕಾ ವೃತ್ತಿ ಬದುಕಿನಲ್ಲಿ ಉತ್ತುಂಗವೇರುತ್ತಿದ್ದಾರೆ.
8/ 9
ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಕನ್ನಡದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಇದೆ.
9/ 9
ಪುನೀತ್ ರಾಜ್ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾದಲ್ಲಿ ಕಿರಿಕ್ ಬ್ಯೂಟಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.