ನಟಿ ರಶ್ಮಿಕಾ ಮಂದಣ್ಣ ಸದ್ಯ ಬಹು ಬೇಡಿಕೆ ಇರುವ ನಟಿ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಸಿನಿಮಾ ಮಿಷನ್ ಮಜ್ನು ಮಿಂಚುತ್ತಿದೆ.
2/ 8
ನಟಿ ರಶ್ಮಿಕಾ ಮಂದಣ್ಣ ಮಿಷನ್ ಮಜ್ನು ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ. ಸಿನಿಮಾ ಜನವರಿ 20ಕ್ಕೆ ಬಿಡುಗಡೆ ಆಗಿದೆ. ಚಿತ್ರವನ್ನು ನೆಟ್ಫ್ಲಿಕ್ಸ್ ನಲ್ಲಿ ವೀಕ್ಷಣೆ ಮಾಡಬಹುದು.
3/ 8
ಶಂತನು ಬಾಗ್ಚಿ ನಿರ್ದೇಶನದ ಮಿಷನ್ ಮಜ್ನು ಚಿತ್ರದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಕುಮುದ್ ಮಿಶ್ರಾ, ಪರ್ಮೀತ್ ಸೇಥಿ, ಶರೀಬ್ ಹಶ್ಮಿ, ಮೀರ್ ಸರ್ವರ್ ಮತ್ತು ಜಾಕಿರ್ ಹುಸೇನ್ ಪಾತ್ರಗಳಲ್ಲಿ ಮಿಂಚಿದ್ದಾರೆ.
4/ 8
ಮಿಷನ್ ಮಜ್ನು ಚಿತ್ರ 1970 ರ ದಶಕದಲ್ಲಿ ನಡೆದ ಒಂದು ದೇಶಭಕ್ತಿಯ ಥ್ರಿಲ್ಲರ್ ಕಥೆಯಾಗಿದೆ. ಈ ಪ್ರೇಮಕಥೆ ನಿಷ್ಠೆ, ಪ್ರೀತಿ, ತ್ಯಾಗ ಮತ್ತು ದ್ರೋಹದ ಭಾವನೆ ತೆರೆದಿಡುತ್ತದೆ.
5/ 8
ಮಿಷನ್ ಮಜ್ನು ಚಿತ್ರ ಹಲವರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂಪರ್ ಆಗಿದೆ ಎಂದಿದ್ದಾರೆ. ರಶ್ಮಿಕಾ ಮಂದಣ್ಣ ನಟನೆ ಮತ್ತೊಮ್ಮೆ ಅಭಿಮಾನಿಗಳನ್ನು ಸೆಳೆದಿದೆ.
6/ 8
ಮಿಷನ್ ಮಜ್ನು ಚಿತ್ರದ ರಬ್ಬಾ ಜಾಂದಾ ರೊಮ್ಯಾಂಟಿಕ್ ಹಾಡಿನಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ರಶ್ಮಿಕಾ ಮಂದಣ್ಣ ಮೋಡಿ ಮಾಡಿದ್ದರು. ಈಗ ಜನ ಸಿನಿಮಾವನ್ನೂಇಷ್ಟಪಟ್ಟಿದ್ದಾರೆ.
7/ 8
ನಟಿ ಕಿಯಾರಾ ಅಡ್ವಾಣಿ ನಟ ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ಮಿಷನ್ ಮಜ್ನು ಟ್ರೇಲರ್ ಅನ್ನು ಅತ್ಯುತ್ತಮ ಎಂದು ಕರೆದಿದ್ದರು.
8/ 8
ಕನ್ನಡ ಚಿತ್ರರಂಗದಿಂದ ಸಿನಿಮಾ ಜೀವನ ಪ್ರಾರಂಭಿಸಿದ್ದ ರಶ್ಮಿಕಾ ಮಂದಣ್ಣ ಅವರು ಈಗ ಎಲ್ಲಾ ಚಿತ್ರರಂಗದಲ್ಲೂ ಮಿಂಚುತ್ತಿದ್ದಾರೆ. ಅವರ ಕಾಲ್ ಶೀಟ್ ಪಡೆಯಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಸಾಲು ನಿಂತಿವೆಯಂತೆ.