ಸುದೀಪ್ ಹೆಸರು ಹೇಳದೆ ನಟಿ ರಶ್ಮಿಕಾ ಮಂದಣ್ಣ ಟಾಂಗ್ ನೀಡಿದ್ದಾರೆ. ಪ್ರೇಮಾ ದಿ ಜರ್ನಲಿಸ್ಟ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ ಸುದೀಪ್ ಮಾತಿಗೂ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ನನ್ನ ಫೇವರಿಟ್ ಹೀರೋ ಮಾತಾಡುತ್ತಾ ಮಾಲೆಯ ಜತೆಗೆ ಟೊಮ್ಯಾಟೊ, ಕಲ್ಲು, ಮೊಟ್ಟೆಗಳೂ ಬರುತ್ತವೆ. ಅದನ್ನು ತೆಗೆದುಕೊಳ್ಳಲು ರೆಡಿ ಇರಬೇಕು ಎಂದು ಹೇಳಿದ್ದರು ಆದ್ರೆ ಅದನ್ನು ನಾನು ಒಪ್ಪುತ್ತೇನೆ ಎಂದು ಹೇಳಿದ್ದರು.
2/ 8
ನಿಜ ನಾವು ಪಬ್ಲಿಕ್ ಫಿಗರ್ಸ್. ಆದರೆ ಅವರು ಎಸೆದ ಕಲ್ಲುಗಳಿಂದ ನೋವಾಗುತ್ತಿದೆ. ರಕ್ತ ಬರುತ್ತಿದೆ ಎಂದಾಗ ಅದನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದು ರಶ್ಮಿಕಾ ಹೇಳಿದ್ದಾರೆ.
3/ 8
ರಶ್ಮಿಕಾ ಮಂದಣ್ಣ ಬಗ್ಗೆ ಸುದೀಪ್ ಮಾತುಗಳು ಸಹ ಭಾರೀ ಚರ್ಚೆಗೆ ಕಾರಣವಾಗಿತ್ತು. ಸ್ಯಾಂಡಲ್ ವುಡ್ ಮರೆತ ರಶ್ಮಿಕಾಗೆ ಸುದೀಪ್ ಕೂಡ ತಿರುಗೇಟು ನೀಡಿದ್ರು.
4/ 8
ರಶ್ಮಿಕಾ ಬಗ್ಗೆ ಸುದೀಪ್ ಹೇಳಿದ್ದೇನು? ತೆಲುಗಿನ ಇಂಡಿಯಾಗ್ಲಿಟ್ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಸುದೀಪ್, ಜಗತ್ತು ಬದಲಾಗಿದೆ. ಬೆಳೆದು ಬಂದ ಬೇರನ್ನು ಮರೆಯಬಾರದು ಎಂದು ಸುದೀಪ್ ಹೇಳಿದ್ರು.
5/ 8
15-20 ವರ್ಷಗಳ ಹಿಂದೆ ಮಾಧ್ಯಮದವರು ನಮ್ಮನ್ನು ಸಂದರ್ಶನ ಮಾಡುತ್ತಿದ್ದರು. ಅದು ನಮಗೆ ಹೊಸದಾಗಿತ್ತು. ಡಾ. ರಾಜ್ ಕುಮಾರ್ ಅವರ ಕಾಲದಲ್ಲಿ ದೂರದರ್ಶನ ಮತ್ತು ಪೇಪರ್ ಬಿಟ್ಟು ಬೇರೆ ಯಾವುದೂ ಇರಲಿಲ್ಲ.
6/ 8
ನಾವು ಈಗ ಅಂದಿನ ಕಾಲವೇ ಚೆನ್ನಾಗಿತ್ತು ಎಂದು ಹೇಳುವುದೆಲ್ಲ ತಪ್ಪು. ನಾವು ಕೂಡ ನಿರ್ವಹಣೆ ಮಾಡುವುದನ್ನು ಕಲಿಯಬೇಕಿದೆ ಎಂದು ಸುದೀಪ್ ಹೇಳಿದ್ದಾರೆ.
7/ 8
ಪಬ್ಲಿಕ್ ಫಿಗರ್ ಆದ್ಮೇಲೆ ಹೂವಿನ ಮಾಲೆಯ ಜತೆಗೆ ಮೊಟ್ಟೆ, ಟೊಮ್ಯಾಟೋ ಹಾಗೂ ಕಲ್ಲುಗಳು ಕೂಡ ನಮ್ಮ ಕಡೆ ಬರುತ್ತವೆ ಎಂದು ಹೇಳಿದ್ರು.
8/ 8
ಲೈಕ್ ಮಾಡಲು ಫಾಲೋವರ್ಸ್ಬೇಕು ಆದ್ರೆ ತೆಗಳಿಕೆ ಬೇಡ್ವಾ ಎಂದು ಸುದೀಪ್ ಹೇಳಿದ್ರು.