Rashmika Mandanna: ಮರಸುತ್ತೋ ಪಾತ್ರಕ್ಕೆ ಮೀಸಲಾಗಿದ್ಯಾಕೆ ರಶ್ಮಿಕಾ ಮಂದಣ್ಣ? ವಾರಿಸು ಸಿನಿಮಾ ಆಯ್ಕೆ ಬಗ್ಗೆ ಶ್ರೀವಲ್ಲಿ ಮಾತು
ವರ್ಷದ ಆರಂಭದಲ್ಲೇ ನಟಿ ರಶ್ಮಿಕಾ ಮಂದಣ್ಣಗೆ ಡಬಲ್ ಧಮಾಕಾ, ವಾರಿಸು ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ನಟಿಯ ಬಾಲಿವುಡ್ ಸಿನಿಮಾ ಮಿಷನ್ ಮಜ್ನು ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರ್ತಿದೆ.
ನಟಿ ರಶ್ಮಿಕಾ ಮಂದಣ್ಣ ಅಭಿನಯದ ವಾರಿಸು ಸಿನಿಮಾದಲ್ಲಿ ನಟ ದಳಪತಿ ವಿಜಯ್ ಅವರದ್ದೇ ಹವಾ ಇದೆ. ಸಿನಿಮಾದಲ್ಲಿ ರಶ್ಮಿಕಾ ಸೈಡ್ ಲೈನ್ ಆಗಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬಂದಿತ್ತು.
2/ 8
ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇರಲಿಲ್ಲ, ಕೆಲವೇ ಕೆಲವು ಹಾಡು ಹಾಗೂ ದೃಶ್ಯಗಳಿಗೆ ನಟಿ ಸೀಮಿತವಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
3/ 8
ಡಿಮ್ಯಾಂಡ್ ಇರುವ ನಟಿಯರು ಇಂತಹ ಪಾತ್ರ ಬಂದಾಗ ಒಪ್ಪಿಕೊಳ್ಳುವುದಿಲ್ಲ. ಆದರೆ, ರಶ್ಮಿಕಾ ಮಂದಣ್ಣ ವಾರಿಸು ಚಿತ್ರವನ್ನು ಒಪ್ಪಿಕೊಂಡು ನಟಿಸಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ನಟಿ ರಶ್ಮಿಕಾ ಉತ್ತರಿಸಿದ್ದಾರೆ.
4/ 8
ರಶ್ಮಿಕಾ ಮಂದಣ್ಣ ಅವರ ನಟನೆಯ ವಾರಿಸು ಸಿನಿಮಾ ಸಂಕ್ರಾಂತಿ ಹಬ್ಬದ ಹಿನ್ನೆಲೆ ಜನವರಿ 11ರಂದು ರಿಲೀಸ್ ಆಗಿತ್ತು. ಭರ್ಜರಿ ಕಲೆಕ್ಷನ್ ಕೂಡ ಮಾಡಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಆರಂಭದಲ್ಲಿ ಕೆಲವು ದೃಶ್ಯಗಳಲ್ಲಿ ಬರುತ್ತಾರೆ.
5/ 8
ಕೆಲ ದೃಶ್ಯಗಳಲ್ಲಿ ಅಷ್ಟೇ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ತಾರೆ. ಒಂದೆರಡು ಹಾಡುಗಳಲ್ಲಿ ವಿಜಯ್ ಜೊತೆ ಹಾಕಿದ್ದಾರೆ. ‘ರಂಜಿದಮೆ..’ ಹಾಡು ಕೂಡ ಹಿಟ್ ಆಗಿದೆ. ನಾಯಕ ನಟಿಯಾದ್ರೂ ಹೆಚ್ಚು ದೃಶ್ಯದಲ್ಲಿ ಕಾಣಿಸಿಕೊಂಡಿಲ್ಲ ಈ ಬಗ್ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
6/ 8
ನನಗೆ ಮೊದಲೇ ಗೊತ್ತಿತ್ತು ಇದರಲ್ಲಿ ನನ್ನ ಪಾತ್ರ ಹೆಚ್ಚು ಇರೋದಿಲ್ಲ ಎಂದು. ಈ ಚಿತ್ರವನ್ನು ನಾನೇ ಆಯ್ಕೆ ಮಾಡಿಕೊಂಡಿದ್ದು. ಚಿತ್ರದಲ್ಲಿ ನನಗಿರೋದು ಕೇವಲ ಎರಡು ಹಾಡುಗಳು ಮಾತ್ರ ಅಂತ ನಂಗೆ ಗೊತ್ತಿತ್ತು. ಅದರಲ್ಲೇ ನಾನು ಗಮನಸೆಳೆಯಬೇಕು ಎಂದುಕೊಂಡಿದ್ದೆ.
7/ 8
ಕಡಿಮೆ ದೃಶ್ಯಗಳಲ್ಲಿಯೇ ಗಮನಸೆಳೆಯಬೇಕು ಎಂದು ನಾನು ವಿಜಯ್ ಅವರ ಬಳಿ ಕೂಡ ಹೇಳಿದ್ದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ನನಗೆ ವಿಜಯ್ ಅವರ ಜತೆ ನಟಿಸಬೇಕು ಎಂದಿತ್ತು. ಅವರು ನನಗೆ ಮೊದಲಿನಿಂದಲೂ ಅಚ್ಚುಮೆಚ್ಚು ಎಂದು ಹೇಳಿದ್ದಾರೆ.
8/ 8
ವಿಜಯ್ ಅವರ ಜೊತೆ ಅಭಿನಯಿಸುವ ಆಸೆಗಾಗಿ ನಾನು ಈ ಚಿತ್ರವನ್ನು ಒಪ್ಪಿಕೊಂಡೆ. ಓರ್ವ ಕಲಾವಿದನಾಗಿ ಸೆಟ್ಗೆ ಹೋಗುವುದು ಮತ್ತು ಅಲ್ಲಿ ಕೆಲಸ ಮಾಡುತ್ತಿರುವವರಿಂದ ಸಣ್ಣ ವಿಷಯಗಳನ್ನು ಕಲಿತುಕೊಳ್ಳುವುದು ಕೂಡ ನನಗೆ ಮುಖ್ಯ ಎಂದು ರಶ್ಮಿಕಾ ಹೇಳಿದ್ದಾರೆ.