Kannadathi Ranjani Raghavan: 'ಕತೆ ಡಬ್ಬಿ' ಬಳಿಕ ಕಾದಂಬರಿ ಬರೆದ ಕನ್ನಡತಿ, 'ಸ್ವೈಪ್ ರೈಟ್' ಎಂದ ರಂಜನಿ ರಾಘವನ್
ಭುವಿ ಅಲಿಯಾಸ್ ರಂಜನಿ ರಾಘವನ್ ನಟಿ ಮಾತ್ರ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. ಈಗಾಗಲೇ 'ಕತೆ ಡಬ್ಬಿ' ಎಂಬ ಕಥಾಸಂಕಲನ ಪ್ರಕಟಿಸಿದ್ದಾರೆ. ಇದೀಗ ರಂಜನಿ ರಾಘವನ್ ಹೊಸ ಪುಸ್ತಕ ಬರೆದಿದ್ದಾರೆ. ಅದರ ಹೆಸರು 'ಸ್ವೈಪ್ ರೈಟ್' ಅಂತ. ಡಿಸೆಂಬರ್ 7ರಂದು ಪುಸ್ತಕ ಬಿಡುಗಡೆ ಸಮಾರಂಭ ಇದೆ.
ಕಲರ್ಸ್ ಕನ್ನಡದಲ್ಲಿ ಸಂಜೆ 7.30ಕ್ಕೆ ಪ್ರಸಾರವಾಗುವ ಕನ್ನಡತಿ ಧಾರಾವಾಹಿಗೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ಅದರಲ್ಲಿ ಕನ್ನಡ ಭಾಷೆಯ ಸೊಗಡನ್ನು ಮೆಚ್ಚಿಕೊಂಡಿದ್ದಾರೆ. ಅದೇ ರೀತಿ ಭುವಿ ಪಾತ್ರ ಕೂಡ ಎಲ್ಲರನ್ನೂ ಸೆಳೆದಿದೆ.
2/ 8
ಕನ್ನಡ ಟೀಚರ್ ಆಗಿದ್ದ ಭುವಿ ಕನ್ನಡದ ಮಹತ್ವ ಎಷ್ಟು ಎಂದು ತಿಳಿಸಿಕೊಟ್ಟಿದ್ದಾರೆ. ಧಾರಾವಾಹಿ ಕೊನೆಯಲ್ಲಿ ಭುವಿ ಹೇಳುವ ಕೆಲ ಪದಗಳ ಅರ್ಥವನ್ನು ತಪ್ಪದೇ ನೋಡ್ತಾರೆ.
3/ 8
ಭುವಿ ಅಲಿಯಾಸ್ ರಂಜನಿ ರಾಘವನ್ ನಟಿ ಮಾತ್ರ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. ಈಗಾಗಲೇ 'ಕತೆ ಡಬ್ಬಿ' ಎಂಬ ಕಥಾಸಂಕಲನ ಪ್ರಕಟಿಸಿದ್ದಾರೆ. ಇದೀಗ ರಂಜನಿ ರಾಘವನ್ ಹೊಸ ಪುಸ್ತಕ ಬರೆದಿದ್ದಾರೆ. ಅದರ ಹೆಸರು 'ಸ್ವೈಪ್ ರೈಟ್' ಅಂತ. ಡಿಸೆಂಬರ್ 7ರಂದು ಪುಸ್ತಕ ಬಿಡುಗಡೆ ಸಮಾರಂಭ ಇದೆ.
4/ 8
ಬೆಂಗಳೂರಿನಲ್ಲಿ ಡಿಸೆಂಬರ್ 7 ರಂದು ಪುಸ್ತ ಬಿಡುಗಡೆ ಕಾರ್ಯಕ್ರಮ ಇದೆ. ಇದನ್ನು ರಂಜನಿ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
5/ 8
ರಂಜನಿ ರಾಘವನ್ ಅವರ ಮೊದಲ ಪುಸ್ತಕ ಕತೆ ಡಬ್ಬಿ ಬಹಳ ಜನಪ್ರಿಯವಾಗಿತ್ತು. ಅದು ಕನ್ನಡ ಸಾಹಿತ್ಯ ಪ್ರೇಮಿಗಳ, ಸಾಹಿತ್ಯಾಸಕ್ತರ ಗಮನ ಸೆಳೆದಿತ್ತು. ಚೆನ್ನಾಗಿ ಬರೆದಿದ್ದಾರೆ ಎಂದು ಓದುಗರ ಭುವಿಯ ಬೆನ್ನು ತಟ್ಟಿದ್ದರು.
6/ 8
ಧಾರಾವಾಹಿಯಲ್ಲಿ ರಂಜನಿ ರಾಘವನ್ ಅವರು ತುಂಬಾ ಸ್ಪಷ್ಟವಾದ ಕನ್ನಡ ಮಾತನಾಡುತ್ತಾರೆ. ಅದು ಸಿರೀಯಲ್ ಗೆ ಮಾತ್ರ ಸೀಮಿತವಾಗಿಲ್ಲ. ಅವರಿಗೆ ಕನ್ನಡದ ಮೇಲೆ ಹೆಚ್ಚು ಆಸಕ್ತಿ ಇದೆ.
7/ 8
ರಂಜನಿ ರಾಘವನ್ ಅವರು ಬ್ಯುಸಿ ಸಮಯದಲ್ಲೂ, ಪುಸ್ತಕ ಬರೆಯಲು ಟೈಂ ಮಾಡಿಕೊಳ್ತಾರೆ. ಅವರಿಗೆ ನಟನೆ ಜೊತೆ ಬರೆಯುವುದು ಅಂದ್ರೆ ಇಷ್ಟ ಅಂತೆ.
8/ 8
ಕನ್ನಡತಿ ಭುವಿ ಮೇಲೆ ಅಭಿಮಾನಿಗಳಿಗೆ ಹೆಚ್ಚು ಗೌರವ. ಒಳ್ಳೆ ಗುಣದ ಭುವಿ ಎಂದು ಹೊಗಳುತ್ತಾರೆ. ಈಗ ನಿಜ ಜೀವನದಲ್ಲಿ ಪುಸ್ತಕ ಬರೆಯುವುದು ಒಳ್ಳೆಯ ಕೆಲಸ ಎಂದಿದ್ದಾರೆ.