ಟಾಲಿವುಡ್ ಕ್ರಿಯೇಟಿವ್ ಡೈರೆಕ್ಟರ್ 'ಕೃಷ್ಣ ವಂಶಿ' ಪತ್ನಿ ರಮ್ಯಾ ಕೃಷ್ಣನ್ಗೆ ಆ್ಯಕ್ಷನ್ ಕಟ್ ಹೇಳಿದ್ರು. 'ರಂಗಮಾರ್ತಾಂಡ' ಎಂಬ ಸಿನಿಮಾ ಮಾರ್ಚ್ 22 ರಂದು ಬಿಡುಗಡೆಯಾಗಿತ್ತು. ರಂಗ ಕಲಾವಿದರ ಬದುಕಿನ ಸುತ್ತ ಹೆಣೆದಿದ್ದ ಈ ಕಥೆಯಲ್ಲಿ ಪ್ರಕಾಶ್ ರಾಜ್, ಬ್ರಹ್ಮಾನಂದಂ, ರಮ್ಯಾ ಕೃಷ್ಣನ್, ರಾಹುಲ್ ಸಿಪ್ಲಿಗಂಜ್, ಶಿವಾನಿ ರಾಜಶೇಖರ್, ಆದರ್ಶ್ ಬಾಲಕೃಷ್ಣ, ಅಲಿ ರೆಜಾ, ಅನಸೂಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.