Actress Rambha: ಮೂರು ಮಕ್ಕಳಾದ ಬಳಿಕ ಗಂಡನ ‘ಸತ್ಯ’ ತಿಳಿದು ಆಘಾತಕ್ಕೊಳಗಾದ ನಟಿ ರಂಭಾ

ನಟಿ ರಂಭಾ ಕನ್ನಡಿಗರಿಗೆ ಪರಿಚಿತರು. ಬಾಲಿವುಡ್ ನ ಸಲ್ಮಾನ್ ಖಾನ್ ರಿಂದ ಹಿಡಿದು ಕನ್ನಡದ ನಟ ಜಗ್ಗೇಶ್ ವರೆಗೆ ಖ್ಯಾತ ನಟರ ಜೊತೆ ನಟಿ ರಂಭಾ ನಟಿಸಿದ್ದಾರೆ. ಅದರಲ್ಲೂ ರವಿಚಂದ್ರನ್ ಅವರ ಜೊತೆ ನಟಿ ರಂಭಾ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

First published:

 • 17

  Actress Rambha: ಮೂರು ಮಕ್ಕಳಾದ ಬಳಿಕ ಗಂಡನ ‘ಸತ್ಯ’ ತಿಳಿದು ಆಘಾತಕ್ಕೊಳಗಾದ ನಟಿ ರಂಭಾ

  ರಂಭಾ ದಕ್ಷಿಣದ ಸುಪ್ರಸಿದ್ಧ ನಟಿಯಾಗಿದ್ದು, 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಸಿನಿಮಾಗಳಿಂದ ದೂರುವಿರುವ ನಟಿ ರಂಭಾ ತಮ್ಮ ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಏನದು ಸುದ್ದಿ ಎಂದು ತಿಳಿಯೋಣ ಬನ್ನಿ.

  MORE
  GALLERIES

 • 27

  Actress Rambha: ಮೂರು ಮಕ್ಕಳಾದ ಬಳಿಕ ಗಂಡನ ‘ಸತ್ಯ’ ತಿಳಿದು ಆಘಾತಕ್ಕೊಳಗಾದ ನಟಿ ರಂಭಾ

  ನಟಿ ರಂಭಾ 2010 ರಲ್ಲಿ ಕೆನಡಾದಲ್ಲಿ ನೆಲೆಸಿರುವ ಶ್ರೀಲಂಕಾದ ತಮಿಳು ಉದ್ಯಮಿ ಇಂದ್ರನ್ ಪದ್ಮನಾಥನ್ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ ಇದ್ದಾನೆ. ಕುಟುಂಬದೊಂದಿಗಿನ ಫೋಟೋಗಳನ್ನು ರಂಭಾ ಅವರು ಸೋಷಿಯಲ್ ಮೀಡಿಯಾದಲ್ಲಿ ಆಗಾಗೆ ಹಂಚಿಕೊಳ್ಳುತ್ತಾರೆ.

  MORE
  GALLERIES

 • 37

  Actress Rambha: ಮೂರು ಮಕ್ಕಳಾದ ಬಳಿಕ ಗಂಡನ ‘ಸತ್ಯ’ ತಿಳಿದು ಆಘಾತಕ್ಕೊಳಗಾದ ನಟಿ ರಂಭಾ

  ಆದರೆ, ರಂಭಾ ಸಂಸಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತು ಕೇಳಿ ಬಂದಿದೆ. ತನ್ನ ಪತಿ ಈ ಮೊದಲೇ ಮದುವೆಯಾಗಿದ್ದರು. ಅದನ್ನು ಮುಚ್ಚಿಟ್ಟು ತನ್ನನ್ನು ಮದುವೆಯಾಗಿದ್ದಾರೆ ಎಂದು ರಂಭಾ ಕೆಂಡಾಮಂಡಲರಾಗಿದ್ದರಂತೆ. ಪತಿಯ ಹಿಂದಿನ ಮದುವೆ ಬಗ್ಗೆ ಗೊತ್ತಾದಾಗ ಆಘಾತಕ್ಕೆ ಒಳಗಾಗಿದ್ದರಂತೆ.

  MORE
  GALLERIES

 • 47

  Actress Rambha: ಮೂರು ಮಕ್ಕಳಾದ ಬಳಿಕ ಗಂಡನ ‘ಸತ್ಯ’ ತಿಳಿದು ಆಘಾತಕ್ಕೊಳಗಾದ ನಟಿ ರಂಭಾ

  ಇದೇ ಸಮಯದಲ್ಲಿ ನಟಿ ರಂಭಾ ತನ್ನ ಪತಿಯಿಂದ ವಿಚ್ಛೇದನ ಪಡೆಯುವ ಹಂತದಲ್ಲಿದ್ದಾರೆ ಎಂದು ವರದಿಗಳು ಬಂದವು. ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿಯೂ ಕಾಣಿಸಿಕೊಂಡರು.

  MORE
  GALLERIES

 • 57

  Actress Rambha: ಮೂರು ಮಕ್ಕಳಾದ ಬಳಿಕ ಗಂಡನ ‘ಸತ್ಯ’ ತಿಳಿದು ಆಘಾತಕ್ಕೊಳಗಾದ ನಟಿ ರಂಭಾ

  ನಂತರ ರಾಜಿ-ಪಂಚಾಯ್ತಿ ಮಾಡಿ ಸಂಸಾರವನ್ನು ಒಗ್ಗೂಡಿಸಿದ್ದಾರೆ ಎನ್ನಲಾಗ್ತಿದೆ. ರಂಭಾ ಕೂಡ ವಿಚ್ಛೇದನದ ಸುದ್ದಿಯನ್ನು ತಳ್ಳಿಹಾಕಿ, ನಾನು ತನ್ನ ಪತಿ ಮತ್ತು ಕುಟುಂಬದೊಂದಿಗೆ ಸಂತೋಷವಾಗಿದ್ದೇನೆ ಎಂದು ಹೇಳಿಕೆ ನೀಡಿದರು.

  MORE
  GALLERIES

 • 67

  Actress Rambha: ಮೂರು ಮಕ್ಕಳಾದ ಬಳಿಕ ಗಂಡನ ‘ಸತ್ಯ’ ತಿಳಿದು ಆಘಾತಕ್ಕೊಳಗಾದ ನಟಿ ರಂಭಾ

  ಇದಾದ ಬಳಿಕ ತಮ್ಮ ಕೌಟುಂಬಿಕ ಜೀವನದ ಬಗ್ಗೆ ನಟಿ ರಂಭಾ ಹೆಚ್ಚೇನು ಮಾತನಾಡಲಿಲ್ಲ. ಪತಿ-ಮಕ್ಕಳೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ರಂಭಾ ತಮ್ಮ ವೃತ್ತಿಜೀವನದಲ್ಲಿ ಯಾವುದೇ ಸಹನಟರ ಜೊತೆ ಗಾಸಿಪ್ ಗೆ ಒಳಗಾದವರಲ್ಲ.

  MORE
  GALLERIES

 • 77

  Actress Rambha: ಮೂರು ಮಕ್ಕಳಾದ ಬಳಿಕ ಗಂಡನ ‘ಸತ್ಯ’ ತಿಳಿದು ಆಘಾತಕ್ಕೊಳಗಾದ ನಟಿ ರಂಭಾ

  ಇನ್ನು ಕಳೆದ ವರ್ಷ ನವೆಂಬರ್ ನಲ್ಲಿ ನಟಿ ರಂಭಾ ಅವರ ಕಾರು ಅಪಘಾತಕ್ಕೀಡಾಗಿತ್ತು. ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹಿಂತಿರುಗುತ್ತಿದ್ದಾಗ ರಂಭಾ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ನಟಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.

  MORE
  GALLERIES