ತುಂಬಾ ದಿನಗಳ ಬಳಿಕ ರಜಿನಿ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಗೆ ಅಂತರ ಆಗಿ ಎಂಟ್ರಿ ಕೊಟ್ಟಿದ್ದಾರೆ. ಎಜೆಯ ಮೊದಲನೇ ಹೆಂಡ್ತಿ ಅಂತರ.
2/ 8
ಧಾರಾವಾಹಿಯಲ್ಲಿ ಎಜೆ ಅಂತರಾಳನ್ನು ತುಂಬಾ ಪ್ರೀತಿ ಮಾಡ್ತಾ ಇರುತ್ತಾನೆ. ಅಂತರ ಅಂದ್ರೆ ಎಜೆಗೆ ತುಂಬಾ ಇಷ್ಟ. ಪತ್ನಿಯನ್ನು ಈ ರೀತಿ ಪ್ರೀತಿ ಮಾಡ್ತಾರಾ ಅನ್ನುವಷ್ಟು ಪ್ರೀತಿಸುತ್ತಾರೆ.
3/ 8
ಸದ್ಯ ರಜಿನಿ ಅವರು ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಭಾಗವಹಿದ್ದಾರೆ. ಇತರ ಸ್ಪರ್ಧಿಗಳಗೆ ಸಖತ್ ಕಾಂಪಿಟೇಷನ್ ಕೊಡ್ತಾರೆ.
4/ 8
ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ನಟಿ ರಜಿನಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಧಾರಾವಾಹಿಯಲ್ಲಿ ಎಜೆ ಪ್ರೀತಿ ಮಾಡೋ ತರ ನಿಜ ಜೀವನದಲ್ಲಿ ಯಾರಾದ್ರೂ ಇದ್ದಾರಾ ಎಂದು ಕೇಳಿದ್ದರು. ಅದಕ್ಕೆ ರಜಿನಿ ಹೌದು ಎಂದಿದ್ದಾರೆ.
5/ 8
ಸೂಪರ್ ಕ್ವೀನ್ ಶೋನಲ್ಲಿ ರಜಿನಿ ತಮ್ಮ ಪ್ರೀತಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಅದನ್ನು ಕೇಳಿ ಅಭಿಮಾನಿಗಳು ಖುಷಿ ಆಗಿದ್ದಾರೆ. ಮದುವೆ ಯಾವಾಗ? ಅಂತಿದ್ದಾರೆ.
6/ 8
ರಜಿನಿ ಅವರು ಮಜಾ ಟಾಕೀಸ್, ಡ್ಯಾನ್ಸಿಂಗ್ ಸ್ಟಾರ್ ಹಲವು ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಅಲ್ಲೂ ರಜಿನಿ ಸದ್ದು ಮಾಡಿದ್ದರು. ಈಗ ಪ್ರೀತಿ ಮಾಡ್ತಿರುವುದಾಗಿ ತಿಳಿಸಿದ್ದಾರೆ. ಹುಡುಗ ಯಾರು ಅನ್ನೋ ಬಗ್ಗೆ ಹೇಳಿಲ್ಲ.
7/ 8
ರಜಿನಿ ಅವರು ಸೂಪರ್ ಕ್ವೀನ್ ಕಾರ್ಯಕ್ರಮ ಗೆಲ್ಲಲಿ ಎಂದು ಹಲವರು ವಿಶ್ ಮಾಡಿದ್ದಾರೆ. ಹಾಗೇ ಬೇಗ ಮದುವೆ ಊಟ ಹಾಕಿಸಿ ಎಂದು ಕೇಳಿದ್ದಾರೆ.
8/ 8
ಅಮೃತವರ್ಷಿಣಿ ಧಾರಾವಾಹಿ ಒಂದು ಕಾಲದಲ್ಲಿ ಸೂಪರ್ ಹಿಟ್ ಆಗಿ ರನ್ ಆಗ್ತಿದ್ದ ಧಾರಾವಾಹಿ. ಆ ಧಾರಾವಾಹಿಯಲ್ಲಿ ಅಮೃತ ಪಾತ್ರ ಮಾಡಿದ್ದ ರಜಿನಿ ಅವರು ಮನೆ ಮಾತಾಗಿದ್ದರು.