ಸಾರಿ:ಕರ್ಮ ರಿಟರ್ನ್ಸ್ ಸಿನಿಮಾದ ಮುಹೂರ್ತ ನೆರವೇರಿದ್ದು, ಬ್ರಹ್ಮ ಎಂಬುವರು ಇದರ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಆ್ಯಕ್ಷನ್, ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಸಾರಿ-ಕರ್ಮ ರಿಟರ್ನ್ಸ್ ಸಿನಿಮಾದ ಜೊತೆಗೆ ರಾಗಿಣಿ ದ್ವಿವೇದಿ ರಾಣಾ ಸಿನಿಮಾದ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಲಿದ್ದಾರೆ. ಇದರ ಜೊತೆಗೆ ಕರ್ವ 3, ಹಾಗೂ ಜಾನಿ ವಾಕರ್ ಸಿನಿಮಾಗಳೂ ಇವೆ.