ನನ್ನ ಮಗಳು ನನ್ನ ಬಳಿ ಬರೋದಿಲ್ಲ..: ಅಷ್ಟಕ್ಕೂ ರಾಧಿಕಾ ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ?
News18 Kannada | September 19, 2019, 11:54 AM IST
1/ 51
ರಾಧಿಕಾ ಕುಮಾರಸ್ವಾಮಿ ಮತ್ತೊಮ್ಮೆ ಮೋಡಿ ಮಾಡಲು ರೆಡಿಯಾಗಿದ್ದಾರೆ.
2/ 51
ರಾಧಿಕಾ ಅಭಿನಯದ ದಮಯಂತಿ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
3/ 51
ಅದರಲ್ಲೂ ಹಾರರ್ ಲುಕ್ನಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಅವತಾರ ಬೆಚ್ಚಿಬೀಳಿಸುವಂತಿದೆ.
4/ 51
ಶ್ರೀಲಕ್ಷ್ಮೀ ವೃಷಾದ್ರಿ ಪ್ರೊಡಕ್ಷನ್ ಲಾಂಛನದಡಿ ಮೂಡಿ ಬಂದಿರುವ ಈ ಸಿನಿಮಾ ರಾಧಿಕಾ ಕೆರಿಯರ್ನ ಬಿಗ್ ಹಿಟ್ ಸಾಲಿಗೆ ಸೇರಲಿದೆ ಎಂಬ ಮಾತುಗಳು ಗಾಂಧಿನಗರದಲ್ಲಿದೆ. ಈ ಬಗ್ಗೆ ಮಾತನಾಡಿದ ರಾಧಿಕಾ...
5/ 51
ಸಿನಿರಂಗಕ್ಕೆ ಕಂಬ್ಯಾಕ್ ಮಾಡಿದ ಬಳಿಕ ವಿಭಿನ್ನ ಪಾತ್ರ ಮಾಡಬೇಕೆಂಬ ಆಸೆಯಿತ್ತು. ಈ ದಮಯಂತಿ ಟೀಸರ್ ನೋಡಿದ ಬಳಿಕ ಖುಷಿಯಾಗಿದ್ದೇನೆ.
6/ 51
ನಿರ್ದೇಶಕರು ವಿಭಿನ್ನ ಪಾತ್ರವನ್ನು ಸೃಷ್ಟಿಸಿದ್ದರು. ಸ್ಥಳದಲ್ಲೇ ಡೈಲಾಗ್ಗಳನ್ನು ನೀಡುತ್ತಿದ್ದರಿಂದ ಕೆಲ ಮಾತುಗಳಿಗೆ ನಾಲಿಗೆ ಹೊರಳುತ್ತಿರಲಿಲ್ಲ.
7/ 51
ಪ್ರತಿದಿನ ಪಾತ್ರಕ್ಕಾಗಿ 4 ಗಂಟೆಗಳ ಮೇಕಪ್ ಮಾಡಬೇಕಿತ್ತು. ಇದಕ್ಕಾಗಿಯೇ ಮುಂಬೈಯಿಂದ ಮೇಕಪ್ಮ್ಯಾನ್ರನ್ನು ಕರೆಸಿದ್ದರು.
8/ 51
ಇಂತಹದೊಂದು ಗೆಟಪ್ನಲ್ಲಿ ಹಾಗೂ ಡೈಲಾಗ್ ಹೇಳುವ ಪಾತ್ರದಲ್ಲಿ ನಾನು ಈ ಹಿಂದೆ ಯಾವುದೇ ಚಿತ್ರದಲ್ಲಿ ಕಾಣಿಸಿರಲಿಲ್ಲ.
9/ 51
ಇದೀಗ ದಮಯಂತಿ ಚಿತ್ರದೊಂದಿಗೆ ಮರಳಿದ್ದೇನೆ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದರು.
10/ 51
ಇನ್ನು ರಾಧಿಕಾ ಅಭಿನಯದ ಭೈರಾದೇವಿ ಚಿತ್ರ ಕೂಡ ಚಿತ್ರೀಕರಣ ನಡೆಯುತ್ತಿದ್ದು, ಇದಕ್ಕೂ ದಮಯಂತಿ ಚಿತ್ರದ ಕಥೆಗೂ ಯಾವುದೇ ಸಂಬಂಧವಿಲ್ಲ.
11/ 51
ಹಾಗೆಯೇ ಈ ಎರಡು ಸಿನಿಮಾಗಳನ್ನು ವಿಭಿನ್ನ ಸಮಯದಲ್ಲಿ ಬಿಡುಗಡೆ ಮಾಡುವುದಾಗಿ ರಾಧಿಕಾ ತಿಳಿಸಿದರು.
12/ 51
ಇಂದಿನ ಯುಗದ ಕಥೆ ಜೊತೆಗೆ ಐತಿಹಾಸಿಕ ಕಥಾಹಂದರವನ್ನು ದಮಯಂತಿ ಚಿತ್ರದಲ್ಲಿ ಹೆಣೆಯಲಾಗಿದೆ.
13/ 51
ಇದು ಹಾರರ್, ಥ್ರಿಲ್ಲರ್, ಕಾಮಿಡಿಯನ್ನು ಹೊಂದಿರಲಿದೆ ಎಂದು ಹೇಳಿದರು.
14/ 51
ದಮಯಂತಿ ಚಿತ್ರಕ್ಕೆ ಗಣೇಶ್ ನಾರಾಯಣ್ ಅವರ ಸಂಗೀತ ನೀಡಿದ್ದು , ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಹಾಗೆಯೇ ಮಹೇಶ್ ಸಂಕಲನ, ಪಿ.ಕೆ.ಎಚ್.ದಾಸ್ ಅವರ ಕ್ಯಾಮೆರಾ ಕೈಚಳಕವಿದೆ.
15/ 51
ಮಿತ್ರ, ತಬಲಾ ನಾಣಿ, ಸಾಧುಕೋಕಿಲ, ಮಜಾ ಟಾಕೀಸ್ ಖ್ಯಾತಿಯ ಪವನ್, ವೀಣಾ ಸುಂದರ್, ಹೊನ್ನವಳ್ಳಿ ಕೃಷ್ಣ, ಕೆಂಪೇಗೌಡ, ಗಿರಿ, ಶರತ್, ರಾಜ್ ಬಲ್ವಾಡಿ, ನವೀನ್ ಕೃಷ್ಣ, ಅನುಷಾ ರೈ, ಶರಣ್, ಬೇಬಿ ಲಲನಾ ಮುಂತಾದವರು ಈ ಸಿನಿಮಾದಲ್ಲಿ ರಾಧಿಕಾ ಅವರೊಂದಿಗೆ ಬಣ್ಣ ಹಚ್ಚಿದ್ದಾರೆ.
16/ 51
ಇನ್ನು ಟೀಸರ್ ನೋಡಿದ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ರಾಧಿಕಾ ಕುಮಾರಸ್ವಾಮಿ, ಖುದ್ದು ಅವರೇ ಅಚ್ಚರಿಗೊಂಡಿರುವುದಾಗಿ ತಿಳಿಸಿದ್ದಾರೆ.
17/ 51
ಈ ಸಿನಿಮಾ ರಿಲೀಸ್ ಆದ ಬಳಿಕ ನನ್ನ ಮಗಳಾಗಲಿ, ಇಲ್ಲ ಅಣ್ಣನ ಮಕ್ಕಳಾಗಲಿ ನನ್ನ ಹತ್ತಿರ ಬರಲ್ಲ ಅನಿಸ್ತಿದೆ.
18/ 51
ಏಕೆಂದರೆ ನನ್ನ ಪಾತ್ರವು ಆ ಮಟ್ಟಿಗೆ ಭಯಾನಕವಾಗಿದೆ. ಹೀಗಾಗಿ ಚಿತ್ರ ನೋಡಿ ಮಗಳು ಹತ್ತಿರ ಬರಲ್ಲ ಅನಿಸಲು ಆರಂಭಿಸಿದೆ ಎಂದು ರಾಧಿಕಾ ತಿಳಿಸಿದರು.
19/ 51
ಅಂದಹಾಗೆ ದಮಯಂತಿ ಚಿತ್ರ ಕೂಡ ಪಂಚ ಭಾಷೆಯಲ್ಲಿ ತೆರೆಕಾಣಲಿದ್ದು, ಈ ಮೂಲಕ ಪ್ಯಾನ್ ಇಂಡಿಯಾ ಸಾಲಿಗೆ ಸೇರಲಿದೆ.