Priyanka Kothari Birthday: ಪುನೀತ್ಗೆ ಜೋಡಿಯಾಗಿದ್ದ ಬೆಂಗಾಲಿ ಚೆಲುವೆ ನಟಿ ಪ್ರಿಯಾಂಕಾ ಕೊಠಾರಿ ಬರ್ತ್ಡೇ, ನಿಶಾ ಫೌಂಡೇಶನ್ನ ಸಹ-ಸಂಸ್ಥಾಪಕಿಯ ಬಗ್ಗೆ ಗೊತ್ತಾ?
ಬಾಲಿವುಡ್, ತೆಲುಗು, ತಮಿಳು ಮತ್ತು ಕನ್ನಡ ಚಲನಚಿತ್ರಗಳಲ್ಲಿ ಮಿಂಚಿರುವ ನಟಿ ಪ್ರಿಯಾಂಕಾ ಕೊಠಾರಿ ಇಂದು ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರಿಗೆ ಇನ್ನೂ 2 ಹೆಸರುಗಳಿವೆ ನಿಮಗೆ ಗೊತ್ತಾ?
ಬಾಲಿವುಡ್, ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಪ್ರಿಯಾಂಕಾ ಕೊಠಾರಿ ಅವರು ನಿಶಾ ಕೊಠಾರಿ ಅಥವಾ ಅಮೋಹಾ ಎಂದು ಮನ್ನಣೆ ಪಡೆದಿದ್ದಾರೆ. ಇವರು ರೂಪದರ್ಶಿ ಕೂಡ ಹೌದು.
2/ 8
ಪ್ರಿಯಾಂಕಾ ಕೊಠಾರಿ ಅವರು ಜನಿಸಿದ್ದು ಪಶ್ಚಿಮ ಬಂಗಾಳದಲ್ಲಿ. 10 ನೇ ತರಗತಿಯಲ್ಲಿದ್ದಾಗ ದೆಹಲಿಗೆ ಹೋಗುತ್ತಾರೆ. ದೆಹಲಿಯ ದಯಾಲ್ ಸಿಂಗ್ ಕಾಲೇಜಿನಲ್ಲಿ ಭೌತ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ.
3/ 8
ಕಾಲೇಜು ನಂತರ, ಕೊಠಾರಿ ಮಾಡೆಲ್ ಆದರು. ಹಲವಾರು ಜಾಹೀರಾತು ಪ್ರಚಾರಗಳಲ್ಲಿ ಕಾಣಿಸಿಕೊಂಡರು. ಅವರು ಚಡ್ತಿ ಜವಾನಿ ಮೇರಿ ಚಾಲ್ ಮಸ್ತಾನಿಯ ರಿಮಿಕ್ಸ್ ಮ್ಯೂಸಿಕ್ ವೀಡಿಯೋದಲ್ಲಿ ಕಾಣಿಸಿಕೊಂಡರು. 2003 ರಲ್ಲಿ ನಟ ಮಾಧವನ್ ಮೂಲಕ ಆಕೆಗೆ ದೊಡ್ಡ ಬ್ರೇಕ್ ಸಿಕ್ಕಿತು. ಅವರ ಚಲನಚಿತ್ರದ ಆಡಿಷನ್ಗೆ ಶಿಫಾರಸು ಮಾಡಿದರು.
4/ 8
ತಮಿಳು ಚಲನಚಿತ್ರ ಜೇ ಜೇ ಮೂಲಕ ನಟನೆಯನ್ನು ಪ್ರಾರಂಭಿಸಿದರು. 2005 ರ ಸರ್ಕಾರ್ ಸಿನಿಮಾ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಅದೇ ವರ್ಷ ರಾಮ್ ಗೋಪಾಲ್ ವರ್ಮಾ ಮತ್ತು ರೋಹಿತ್ ಜುಗ್ರಾಜ್ ನಿರ್ದೇಶನದ ಜೇಮ್ಸ್ ನಲ್ಲಿ ಕಾಣಿಸಿಕೊಂಡರು.
5/ 8
2009 ರಲ್ಲಿ ಪುನೀತ್ ರಾಜ್ಕುಮಾರ್ ಅಭಿನಯದ ರಾಜ್ ದಿ ಶೋಮ್ಯಾನ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದರು. ನಂತರ ದಂಡುಪಾಳ್ಯದಲ್ಲಿ ಪೋಷಕ ಪಾತ್ರವನ್ನು ಮಾಡಿದ್ದಾರೆ.
6/ 8
ರಾಜ್ ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾಂಕಾ ಅವರು ಕನ್ನಡ ಅಭಿಮಾನಿಗಳಿಗೂ ಇಷ್ಟ ಆಗಿದ್ದರು. ಪ್ರಿಯಾಂಕಾ ನಟನೆ ಚೆನ್ನಾಗಿದೆ ಎಂದು ಎಲ್ಲರೂ ಹೇಳಿದ್ದರು. ಯಾರಾದ್ರೆ ನನಗೇನು ಎಂಬ ಕನ್ನಡ ಚಿತ್ರದಲ್ಲೂ ನಟಿಸಿದ್ದಾರೆ.
7/ 8
ಪ್ರಿಯಾಂಕಾ ಅವರು ಬಾಲಕೃಷ್ಣ ಅವರೊಂದಿಗೆ ತೆಲುಗು ಚಿತ್ರ ಒಕ್ಕ ಮಗಡು ಚಿತ್ರದಲ್ಲಿ ನಟಿಸಿದ್ದಾರೆ. 2011 ರಲ್ಲಿ ಬಿಡುಗಡೆಯಾದ ಏಕೈಕ ಚಿತ್ರ ಬಿನ್ ಬುಲಾಯೆ ಬಾರಾತಿಯಲ್ಲೂ ಅಭಿನಯಿಸಿದ್ದಾರೆ.
8/ 8
ಕೊಠಾರಿ ಅವರು ಏಷ್ಯನ್ ಅಕಾಡೆಮಿ ಆಫ್ ಫಿಲ್ಮ್ ಮತ್ತು ಟೆಲಿವಿಷನ್ನ ಇಂಟನ್ರ್ಯಾಷನಲ್ ಫಿಲ್ಮ್ ಮತ್ತು ಟೆಲಿವಿಷನ್ ಕ್ಲಬ್ನ ಸದಸ್ಯರಾಗಿದ್ದಾರೆ. ಅವರು ನಿಶಾ ಫೌಂಡೇಶನ್ನ ಸಹ-ಸಂಸ್ಥಾಪಕಿಯಾಗಿದ್ದಾರೆ.