Priyanka Chopra: ಬಾಡಿಗೆ ತಾಯ್ತನ ಏಕೆ? ಕೊನೆಗೂ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡ ದೇಸಿ ಗರ್ಲ್
ಮಗುವಾದರೆ ಸೌಂದರ್ಯ ಕೆಡುತ್ತೆ, ದೇಹ ಬದಲಾಗುತ್ತೆ ಎಂದು ನಟಿಯರು ಬಾಡಿಗೆ ತಾಯ್ತನ ಆರಿಸಿಕೊಳ್ಳುತ್ತಾರೆ ಎನ್ನುವುದು ಸಾಮಾನ್ಯ ಮಾತು. ಆದರೆ ಪ್ರಿಯಾಂಕ ಚೋಪ್ರಾ ತಾವು ಬಾಡಿಗೆ ತಾಯ್ತನ ಆರಿಸಿಕೊಂಡಿದ್ದರ ರಿಯಲ್ ಕಾರಣವನ್ನು ರಿವೀಲ್ ಮಾಡಿದ್ದಾರೆ.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೊನೆಗೂ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಅವರ ಹುಟ್ಟಿನ ಕುರಿತು ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ. ಮಾಲ್ತಿ ಅವರ ಮುಖದ ಫೋಟೋ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ನಟಿ ಇದುವರೆಗೂ ಶೇರ್ ಮಾಡಿಲ್ಲ.
2/ 7
ದೇಸಿ ಗರ್ಲ್ ಈಗ ಅವರ ಮಗಳ ಅವಧಿಗೂ ಮುನ್ನ ನಡೆದ ಜನನ, ಅವರು ಬಾಡಿಗೆ ತಾಯ್ತನದ ಮಾರ್ಗವನ್ನು ಏಕೆ ಆರಿಸಿಕೊಂಡರು ಎನ್ನುವ ಮಾಹಿತಿ ಹಲವು ವಿಚಾರ ರಿವೀಲ್ ಮಾಡಿದ್ದಾರೆ.
3/ 7
ಬ್ರಿಟಿಷ್ ವೋಗ್ ಜೊತೆ ಮಾತನಾಡಿದ ನಟಿ ಪ್ರಿಯಾಂಕಾ ಅವರು ತನ್ನ ಮಗಳು ಸಮಯಕ್ಕೂ ತುಂಬಾ ಮುಂಚೆಯೇ ಜನಿಸಿದಳು. ಅವಳು ಹೊರಗೆ ಬಂದಾಗ ನಾನು ಆಪರೇಷನ್ ರೂಮ್ನಲ್ಲಿದ್ದೆ. ಅವಳು ತುಂಬಾ ಚಿಕ್ಕವಳಿದ್ದಳು, ನನ್ನ ಕೈಗಿಂತ ಚಿಕ್ಕ ಗಾತ್ರದಲ್ಲಿದ್ದಳು ಎಂದಿದ್ದಾರೆ.
4/ 7
ನಿಕ್ ಮತ್ತು ನಾನು ಇಬ್ಬರೂ ಅಲ್ಲಿಯೇ ನಿಂತಿದ್ದೆವು. ಅವಳು ತುಂಬಾ ಚಿಕ್ಕವಳಿದ್ದಳು. ವೈದ್ಯರು ಅವಳನ್ನು ಹೇಗೆ ನೋಡಿಕೊಂಡಿದ್ದರೋ ಗೊತ್ತಿಲ್ಲ. ಆದರೆ ನಾವು ದಿನವೂ ಆಸ್ಪತ್ರೆಗೆ ಹೋಗುತ್ತಿದ್ದೆವು ಎಂದಿದ್ದಾರೆ.
5/ 7
ನಟಿ ತಮಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದಳು. ನನಗೆ ಆರೋಗ್ಯ ಸಮಸ್ಯೆ ಇತ್ತು. ನಮ್ಮ ಮಗುವಿನ ಬಾಡಿಗೆ ತಾಯಿ ತುಂಬಾ ದಯೆ ಉಳ್ಳವರೂ, ಸುಂದರಿಯೂ ತಮಾಷೆಯ ಮನೋಭಾವದವರಾಗಿದ್ದರು. ಅವರು ಆರು ತಿಂಗಳ ಕಾಲ ನಮ್ಮ ಈ ಅಮೂಲ್ಯ ಉಡುಗೊರೆಯನ್ನು ನೋಡಿಕೊಂಡರು ಎಂದಿದ್ದಾರೆ.
6/ 7
ಪ್ರಿಯಾಂಕಾ ಮತ್ತು ನಿಕ್ ಜೋನಾಸ್ 2018 ರಲ್ಲಿ ವಿವಾಹವಾದರು. ಕಳೆದ ವರ್ಷ ಜನವರಿಯಲ್ಲಿ ಇಬ್ಬರೂ ತಮ್ಮ ಮೊದಲ ಮಗುವಿನ ಜನನವನ್ನು ಘೋಷಿಸಿದರು. ಮಾಲ್ತಿ ಮೇರಿಯ ಹೆಸರು ಅವರಿಬ್ಬರ ತಾಯಂದಿರ ಮಧ್ಯದ ಹೆಸರಿನಿಂದ ಪ್ರೇರಿತವಾಗಿದೆ.
7/ 7
ಪ್ರಿಯಾಂಕ ಚೋಪ್ರಾ ಅವರು ಸದ್ಯ ಬಾಲಿವುಡ್ನಿಂದ ಸ್ವಲ್ಪ ದೂರವಾಗಿ ಹಾಲಿವುಡ್ನಲ್ಲಿ ಆ್ಯಕ್ಟಿವ್ ಇದ್ದಾರೆ. ಪತಿ ಹಾಗೂ ಮಗಳೋಂದಿಗೆ ವಿದೇಶದಲ್ಲಿಯೇ ನೆಲೆಸಿದ್ದಾರೆ.