ಹಲವು ವರ್ಷಗಳ ಹಿಂದೆ ವಿಚ್ಛೇದನ ಪಡೆದು ಒಂಟಿಯಾಗಿ ಜೀವನ ಸಾಗಿಸುತ್ತಿರುವ ನಟಿ ಪ್ರೇಮಾ ಇದೀಗ 2ನೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಕಂಕಣ ಭಾಗ್ಯ ಕರುಣಿಸುವಂತೆ ದೈವದ ಮೋರೆ ಹೋಗಿದ್ದಾರೆ.
2/ 7
ಕಾಪು ಕೊರಗಜ್ಜ ಸನ್ನಿಧಿಯಲ್ಲಿ ಮದುವೆಗಾಗಿ ಪ್ರಾರ್ಥನೆ ಮಾಡಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ ನಟಿ ಪ್ರೇಮಾ ಕೊರಗಜ್ಜನ ಸನ್ನಿಧಿಗೂ ಭೇಟಿ ನೀಡಿದ್ರು.
3/ 7
ಉಡುಪಿ ಜಿಲ್ಲೆಯ ಕಾಪು ಕೊರಗಜ್ಜ ಸನ್ನಿಧಿ ಇದಾಗಿದ್ದು, ನಟಿ ಪ್ರೇಮಾ ಜೊತೆ ತಮ್ಮ ಅಯ್ಯಪ್ಪ ಪತ್ನಿ ನಟಿ ಅನು ಅಯ್ಯಪ್ಪ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿದ್ರು.
4/ 7
2016 ರಲ್ಲಿ ತಮ್ಮ 10 ವರ್ಷದ ದಾಂಪತ್ಯಕ್ಕೆ ವಿದಾಯ ಹೇಳಿದ್ರು. ಪರಸ್ಪರ ಒಪ್ಪಿಗೆ ಮೇರೆಗೆ ಪ್ರೇಮಾ ದಂಪತಿ ಬೆಂಗಳೂರಿನ ಕೌಟಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಪಡೆದ್ರು.
5/ 7
1995 ರಲ್ಲಿ ಶಿವರಾಜಕುಮಾರ್ ರವರ `ಸವ್ಯಸಾಚಿ' ಮತ್ತು ರಾಘವೇಂದ್ರ ರಾಜಕುಮಾರ್ ರವರ `ಆಟ ಹುಡುಗಾಟ' ಚಿತ್ರದಿಂದ ಸಿನಿಪಯಣ ಆರಂಭಿಸಿದರು.
6/ 7
ನಂತರ ಶಿವಣ್ಣರವರ `ಓಂ' ಚಿತ್ರದಲ್ಲಿನ ನಟನೆಗೆ ರಾಜ್ಯ ಪ್ರಶಸ್ತಿ ಪಡೆದರು. 1996 ರಲ್ಲಿ ತೆರೆಕಂಡ `ನಮ್ಮೂರ ಮಂದಾರ ಹೂವೇ' ಚಿತ್ರದಲ್ಲಿ ಅದ್ಭುತ ನಟನೆ ನೀಡಿದರು.
7/ 7
ನಂತರ ತೆಲುಗು ಮತ್ತು ಮಲಯಾಳಂ ಚಿತ್ರದಲ್ಲಿ ನಟಿಸಿದ ಪ್ರೇಮ, ನಾನು ನನ್ನ ಹೆಂಡ್ತೀರು, ಯಜಮಾನ ,ಕನಸುಗಾರ,ಆಪ್ತಮಿತ್ರ ಮುಂತಾದ ಹಿಟ್ ಚಿತ್ರಗಳನ್ನು ನೀಡಿದ್ದಾರೆ.