ಬಹುಭಾಷಾ ನಟಿ ಪ್ರಣೀತಾ ಅವರು ತಮ್ಮ ಮಗಳ ಫೋಟೋವನ್ನು ಶೇರ್ ಮಾಡುತ್ತಿರುತ್ತಾರೆ. ಈಗ ಮಗಳ ಮಂತ್ಲೀ ಬರ್ತ್ಡೇ ಡಿನ್ನರ್ನಿಂದ ಫೋಟೋಸ್ ಹಂಚಿಕೊಂಡಿದ್ದಾರೆ. ಪ್ರಣೀತಾ ಎಷ್ಟೇ ಫೋಟೋ ಶೇರ್ ಮಾಡಿದರೂ ಮಗಳ ಮುಖವನ್ನು ರಿವೀಲ್ ಮಾಡುವುದಿಲ್ಲ. ಮಗಳ ಮುಖದ ಬಳಿ ಒಂದು ಎಮೋಜಿ ಇಟ್ಟು ಹೈಡ್ ಮಾಡುತ್ತಾರೆ. ಮಗಳು ಅರ್ನಾ ಜೊತೆ ಕ್ವಾಲಿಟಿ ಟೈಂ ಸ್ಪೆಂಡ್ ಮಾಡುತ್ತಿರುವ ನಟಿ ಪ್ರಣೀತಾ ಸದ್ಯ ಸಿನಿಮಾದಿಂದ ಸಣ್ಣ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿ ಲೈಫ್ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನೆಟ್ಟಿಗರು ಪ್ರತಿಬಾರಿ ಮಗಳ ಫೋಟೋ ಹೈಡ್ ಮಾಡುತ್ತಿರುವುದಕ್ಕೆ ಕಾಮೆಂಟ್ ಮಾಡಿದ್ದಾರೆ. ಪೋಟೋ ಶೇರ್ ಮಾಡ್ತೀರಾ, ಒಮ್ಮೆಯಾದ್ರೂ ಮುಖ ತೋರಿಸ್ಬಾದ್ರಾ ಎಂದು ಕೇಳಿದ್ದಾರೆ. ನಟಿ ಮಗಳ ಜೊತೆಗಿರುವ ಚಂದದ ಫೋಟೋಸ್ ಶೇರ್ ಮಾಡಿದ್ದು ಮಗಳು ಮಂತ್ಲೀ ಬರ್ತ್ಡೇ ಡಿನ್ನರ್ನಲ್ಲಿ ಈಗಲೇ ಪೌಟ್ ಮಾಡುತ್ತಿದ್ದಾಳೆ ಎಂದು ಕ್ಯಾಪ್ಶನ್ ಬರೆದಿದ್ದಾರೆ. ಫೊಟೋದಲ್ಲಿ ಮಗುವಿನ ಮುಖಕ್ಕೆ ವರ್ಲ್ಡ್ ಸಿಂಬಲ್ ಹಾಕಿ ಹೈಡ್ ಮಾಡಿದ್ದು ಇದರಲ್ಲಿ ಮಗುವಿಗೆ ನಟಿ ಕಿಸ್ ಮಾಡುವುದನ್ನು ಕಾಣಬಹುದು. ಪ್ರಣೀತಾ ಮಗಳು ಕ್ಯೂಟ್ ಆಗಿ ಪೌಟ್ ಮಾಡುವುದನ್ನು ಈ ಫೋಟೋದಲ್ಲಿ ಕಾಣಬಹುದು. ಈ ಫೊಟೋದಲ್ಲಿ ಮಗುವಿನ ಮುಖ ಪೂರ್ತಿ ರಿವೀಲ್ ಆಗಿಲ್ಲ.