ದಕ್ಷಿಣ ಚಿತ್ರರಂಗದ ಸ್ಟಾರ್ ನಟಿ ಪ್ರಣಿತಾ ಸುಭಾಷ್ ಹೂವಿನೊಂದಿಗೆ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಪ್ರಣೀತಾ ಅವರು ಫೋಟೋದಲ್ಲಿ ಸುಂದರವಾಗಿ ಕಾಣ್ತಾ ಇದ್ದಾರೆ.
2/ 8
ಪ್ರಣಿತಾ ಅವರ ಈ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಹೂವೇ ಇವರ ಮುಂದೆ ನಾಚಿದಂತಿದೆ. ಹೂವಿಗಿಂತ ಸೌಂದರ್ಯ ಸೂಪರ್ ಎಂದಿದ್ದಾರೆ ಅಭಿಮಾನಿಗಳು.
3/ 8
2010ರಿಂದಲೂ ಪ್ರಣಿತಾ ಸುಭಾಷ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ ಪೊರ್ಕಿ ಚಿತ್ರಚಿತ್ರ ಮೂಲಕ ಅವರು ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಈಗ ಬಹುಭಾಷಾ ನಟಿಯಾಗಿ ಹೆಸರು ಮಾಡಿದ್ದಾರೆ. ಬಾಲಿವುಡ್ನಲ್ಲಿ ಸಹ ಅಭಿನಯಿಸಿದ್ದಾರೆ.
4/ 8
ನಿತಿನ್ ರಾಜು ಜೊತೆ ಸುಖ ಸಂಸಾರ ನಡೆಸುತ್ತಿರುವ ಪ್ರಣೀತಾ ದಂಪತಿಗೆ ಹೆಣ್ಣು ಮಗು ಇದೆ. ಮಗುವಿಗೆ ಅರ್ನಾ ಎಂದು ಹೆಸರಿಟ್ಟಿದ್ದಾರೆ. ಇತ್ತೀಚೆಗೆ ಮಗುವಿಗೆ ಬೋಡಿ ಮಾಡಿಸಿದ್ದಾರೆ.
5/ 8
ಮಾತೃಭಾಷೆ ಕನ್ನಡದ ಬಗ್ಗೆ ಪ್ರಣೀತಾ ಅವರಿಗೆ ಅಪಾರ ಗೌರವವಿದೆ. ಅದಕ್ಕಾಗಿಯೇ ಅವರು ಹೆಚ್ಚಾಗಿ ಕನ್ನಡ ಸಿನಿಮಾಗಳನ್ನು ಮಾಡಲು ಇಷ್ಟಪಡುತ್ತಾರೆ. ಆದರೆ, ತೆಲುಗಿನಲ್ಲಿ ಹೆಚ್ಚು ಫೇಮಸ್ ಆಗಿದ್ದಾರೆ.
6/ 8
ಕೋರೊನಾಕ್ಕಿಂತ ಮೊದಲು ಎಲ್ಲರೂ ಪ್ರಣಿತಾ ಸುಭಾಷ್ ಅವರನ್ನು ಕೇವಲ ನಾಯಕಿಯಾಗಿ ನೋಡುತ್ತಿದ್ದರು. ಆದರೆ ಕರೋನಾ ಸಮಯದಲ್ಲಿ ಪ್ರಣಿತಾ ಮಾಡಿದ ಒಳ್ಳೆಯ ಕಾರ್ಯಗಳು ಎಲ್ಲರ ಮನಸ್ಸು ಗೆದ್ದಿವೆ. ಆಹಾರದ ಕೊರತೆಯಿಂದ ಹಸಿವಿನಿಂದ ಬಳಲುತ್ತಿದ್ದ ಅನೇಕ ಜನರಿಗೆ ಪ್ರಣಿತಾ ಸಹಾಯ ಮಾಡಿದರು.
7/ 8
ಪ್ರಣೀತಾ ತಮ್ಮದೇ ಆದ ಫೌಂಡೇಶನ್ ಮಾಡಿಕೊಂಡು ಅದರ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿದ್ದಾರೆ.
8/ 8
ಮಮ್ಮಿ ಆಗಿದ್ರೂ ಪ್ರಣೀತಾ ಅವರು ಫಿಟ್ ಆಗಿದ್ದಾರೆ. ಒಂದು ಮಗುವಿನ ತಾಯಿ ರೀತಿ ಕಾಣಲ್ಲ. ಸೂಪರ್ ಆಗಿ ಕಾಣ್ತೀರ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.