ತೆಲುಗಿನ ನಟಿ ಪ್ರಗತಿ ಮರುಮದುವೆಗೆ ಮುಂದಾಗಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗಿದೆ. ನಟಿ ನನಗೂ ಸಂಗಾತಿ ಬೇಕು ಎಂದು ಹೇಳಿದ್ದಾಗಿ ಸೋಷಿಯಲ್ ಮಿಡಿಯಾದಲ್ಲಿ ಸುದ್ದಿಯಾಗಿತ್ತು.
2/ 9
ಪವಿತ್ರಾ ಲೋಕೇಶ್ ಹಾಗೂ ನರೇಶ್ ಕಿಸ್ಸಿಂಗ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಟಿ ತಾವು ಕೂಡಾ ಮದುವೆಯಾಗಬೇಕೆಂದು ಹೇಳಿದ್ದು ಎಲ್ಲೆಡೆ ಸುದ್ದಿಯಾಗಿದೆ.
3/ 9
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಗತಿ ಅವರು ನನಗೆ ಈಗ 47 ವರ್ಷ. ಮರುಮದುವೆ ವಿಚಾರ ಎಂದೂ ನನ್ನ ಮನಸ್ಸಿನಲ್ಲಿ ಇರಲಿಲ್ಲ ಎಂದು ಹೆಳಿದ್ದಾರೆ. ನಾನು ಇಲ್ಲಿಯವರೆಗೆ ಒಂಟಿಯಾಗಿದ್ದೆ. ಹಲವಾರು ಸಮಸ್ಯೆಗಳನ್ನು ಎದುರಿಸಿದ್ದೇನೆ. ಅವುಗಳನ್ನು ನಿವಾರಿಸಿದ್ದೇನೆ ಎಂದಿದ್ದಾರೆ.
4/ 9
ನನಗೆ ಈಗ ಜೀವನ ಸಂಗಾತಿಯ ಅಗತ್ಯವಿಲ್ಲ. ನಾನು ಸಂಗಾತಿಗಾಗಿ ಹುಡುಕುತ್ತಿಲ್ಲ. ನನ್ನ ಆದ್ಯತೆ ನನ್ನ ಫಿಟ್ನೆಸ್, ವೃತ್ತಿ ಮತ್ತು ನನ್ನ ಮಕ್ಕಳು ಎಂದಿದ್ದಾರೆ.
5/ 9
ಪ್ರಗತಿ ಪ್ರಸ್ತುತ ಚಿರಂಜೀವಿ, ತಮನ್ನಾ ಮತ್ತು ಕೀರ್ತಿ ಸುರೇಶ್ ಅಭಿನಯದ ತೆಲುಗು ಚಿತ್ರ 'ಭೋಲಾ ಶಂಕರ್' ನಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಅವರು ಶೀಘ್ರದಲ್ಲೇ ಪ್ರಭುದೇವ ಅಭಿನಯದ 'ಭಗೀರಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
6/ 9
ಪ್ರಗತಿ 1994 ರಲ್ಲಿ ಬಿಡುಗಡೆಯಾದ ಕೆ ಭಾಗ್ಯರಾಜ್ ನಿರ್ದೇಶನದ ತಮಿಳಿನ 'ವೀಟ್ಲ ವಿಶೇಷಾಂಗ' ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.
7/ 9
ನಂತರ ಅವರು ವಿಜಯಕಾಂತ್ ಅಭಿನಯದ 'ಪೆರಿಯಮರುಡು' ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಪ್ರಸ್ತುತ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
8/ 9
ಅಕ್ಕ ಮತ್ತು ತಾಯಿಯ ಪಾತ್ರಗಳನ್ನು ಮಾಡುತ್ತಿದ್ದಾರೆ ಪ್ರಗತಿ. ಟಿವಿ ಸೀರಿಯಲ್ಗಳಲ್ಲಿ ನಟಿಸುವ ಮೂಲಕ ಅವರು ವೃತ್ತಿ ಜೀವನದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
9/ 9
ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಪ್ರಗತಿ ಅವರು ಇಪ್ಪತ್ತರ ಹರೆಯದ ಸಾಫ್ಟ್ವೇರ್ ಇಂಜಿನಿಯರ್ ಅನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೆಲವು ವರ್ಷಗಳ ನಂತರ ಅವರು ಭಿನ್ನಾಭಿಪ್ರಾಯಗಳಿಂದಾಗಿ ತನ್ನ ಪತಿಗೆ ವಿಚ್ಛೇದನ ನೀಡಿದರು.