Shamna Khasim: ಮಗುವಿನ ಮುಖ ರಿವೀಲ್ ಮಾಡಿದ ನಟಿ ಪೂರ್ಣ

ಪೂರ್ಣಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಒಂದೆಡೆ ಕಿರುತೆರೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡು ಸಿನಿಮಾ ಕೂಡಾ ಮಾಡುತ್ತಿದ್ದಾರೆ ಸೌತ್​ನ ಈ ನಟಿ. ಪೂರ್ಣಾ ದುಬೈನ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದು ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಅವರು ಇತ್ತೀಚೆಗೆ ತಮ್ಮ ಮಗನ ಫೋಟೋವನ್ನು ತಮ್ಮ ಫಾಲೋವರ್ಸ್ ಜೊತೆ ಹಂಚಿಕೊಂಡಿದ್ದಾರೆ. ಇದೀಗ ಆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

First published:

  • 18

    Shamna Khasim: ಮಗುವಿನ ಮುಖ ರಿವೀಲ್ ಮಾಡಿದ ನಟಿ ಪೂರ್ಣ

    ನಟಿ ಪೂರ್ಣಾ ಇತ್ತೀಚೆಗಷ್ಟೇ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ದುಬೈ ಮೂಲದ ಉದ್ಯಮಿ ಶಾನಿದ್ ಆಸಿಫ್ ಅಲಿ ಅವರನ್ನು ಪೂರ್ಣ ವಿವಾಹವಾಗಿದ್ದರು. ಪೂರ್ಣಾ ಅವರು 2023 ರ ಮೊದಲ ವಾರದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಇತ್ತೀಚೆಗಷ್ಟೇ ನಟಿ ಪೂರ್ಣಾ ತಮ್ಮ ಮಗನ ಫೋಟೋಗಳನ್ನು ತಮ್ಮ ಫಾಲೋವರ್ಸ್ ಜೊತೆ ಹಂಚಿಕೊಂಡಿದ್ದಾರೆ.

    MORE
    GALLERIES

  • 28

    Shamna Khasim: ಮಗುವಿನ ಮುಖ ರಿವೀಲ್ ಮಾಡಿದ ನಟಿ ಪೂರ್ಣ

    ಪತಿಯೊಂದಿಗೆ ಇರುವ ಆ ಫೋಟೋದಲ್ಲಿ ನಟಿ ತನ್ನ ಮಗನಿಗೆ ಮುತ್ತಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನಟಿ ಮಗನ ಹೆಸರನ್ನು ಅನೌನ್ಸ್ ಮಾಡಿದ್ದಾರೆ. ತಮ್ಮ ಸೋಷಿಯಲ್ ಮಿಡಿಯಾ ಫ್ಲಾಟ್​ಫಾರ್ಮ್​ನಲ್ಲಿ ಪೋಸ್ಟ್ ಅನ್ನು ಶೇರ್ ಮಾಡಿದ ನಟಿ ತಮ್ಮ ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ. ಪೂರ್ಣಾ ತನ್ನ ಮಗನಿಗೆ ಹಮ್ದಾನ್ ಆಸಿಫಾಲಿ ಎಂದು ಹೆಸರಿಟ್ಟಿದ್ದಾರೆ.

    MORE
    GALLERIES

  • 38

    Shamna Khasim: ಮಗುವಿನ ಮುಖ ರಿವೀಲ್ ಮಾಡಿದ ನಟಿ ಪೂರ್ಣ

    ಸಿನಿಮಾಗಳ ವಿಷಯಕ್ಕೆ ಬಂದರೆ, ಅವರು ಇತ್ತೀಚೆಗೆ ನಾನಿ ನಾಯಕನಾಗಿ ದಸರಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ವಿಲನ್ ಪತ್ನಿ. ಚಿತ್ರವು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

    MORE
    GALLERIES

  • 48

    Shamna Khasim: ಮಗುವಿನ ಮುಖ ರಿವೀಲ್ ಮಾಡಿದ ನಟಿ ಪೂರ್ಣ

    ಪೂರ್ಣ ನಟನಾ ವೃತ್ತಿಜೀವನದ ವಿಷಯಕ್ಕೆ ಬಂದರೆ ಅವರು ಹಲವಾರು ವರ್ಷಗಳಿಂದ ತೆಲುಗು ಪ್ರೇಕ್ಷಕರನ್ನು ತಮ್ಮ ಸೌಂದರ್ಯದಿಂದ ರಂಜಿಸುತ್ತಿದ್ದಾರೆ. ನರೇಶ್ ಅಭಿನಯದ 'ಸೀಮಾ ತಪಕೈ' ಚಿತ್ರದಲ್ಲಿ ನಟಿಸಿದ ನಂತರ ಮಲಯಾಳಿ ಸುಂದರಿ ಪೂರ್ಣ ಜನಪ್ರಿಯರಾದರು. ಆ ನಂತರ ರವಿಬಾಬು ನಿರ್ದೇಶನದ ‘ಆವುನು’ ಸಿನಿಮಾದಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು.

    MORE
    GALLERIES

  • 58

    Shamna Khasim: ಮಗುವಿನ ಮುಖ ರಿವೀಲ್ ಮಾಡಿದ ನಟಿ ಪೂರ್ಣ

    ನಾಯಕಿ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ ಪೂರ್ಣಾ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನೆಲೆಯೂರಿದರು. ಅದರ ಭಾಗವಾಗಿ ‘ಸಿಲ್ಲಿ ಫೆಲೋಸ್’, ‘ಅಖಂಡ’, ‘ದೃಶಂ 2’ ಚಿತ್ರಗಳಲ್ಲಿ ನಟಿಸಿದ್ದಾರೆ. ಪೂರ್ಣಾ ಒಂದೆಡೆ ಸಿನಿಮಾಗಳಲ್ಲಿ ನಟಿಸುತ್ತಿದ್ದರೆ, ಸ್ಮಾಲ್ ಸ್ಕ್ರೀನ್‌ನಲ್ಲಿ ಜಡ್ಜ್ ಆಗಿಯೂ ಭಾಗವಹಿಸುತ್ತಾರೆ.

    MORE
    GALLERIES

  • 68

    Shamna Khasim: ಮಗುವಿನ ಮುಖ ರಿವೀಲ್ ಮಾಡಿದ ನಟಿ ಪೂರ್ಣ

    ನಟಿ ಇತ್ತೀಚೆಗಷ್ಟೇ ತಾನು ಮದುವೆಯಾಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ಗೊತ್ತೇ ಇದೆ. ಯುಎಇ ಉದ್ಯಮಿ ಶಾನಿದ್ ಆಸಿಫ್ ಅಲಿ ಅವರನ್ನು ಮದುವೆಯಾಗಿರುವುದಾಗಿ ಪೂರ್ಣಾ ಘೋಷಿಸಿದ್ದಾರೆ.

    MORE
    GALLERIES

  • 78

    Shamna Khasim: ಮಗುವಿನ ಮುಖ ರಿವೀಲ್ ಮಾಡಿದ ನಟಿ ಪೂರ್ಣ

    ಮದುವೆಯ ಸಂದರ್ಭದಲ್ಲಿ ಪೂರ್ಣಾ ಅವರ ಪತಿ ನೀಡಿದ ಉಡುಗೊರೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ವೈರಲ್ ಆಗಿತ್ತು. ದುಬೈನ ಜೆಬಿಎಸ್ ಗ್ರೂಪ್ ಆಫ್ ಕಂಪನಿಗಳ ಸ್ಥಾಪಕ ಮತ್ತು ಸಿಇಒ ಶಾನಿದ್ ಆಸಿಫ್ ಅಲಿ ಅವರನ್ನು ಪೂರ್ಣಾ ಪ್ರೀತಿಸುತ್ತಿದ್ದರು.

    MORE
    GALLERIES

  • 88

    Shamna Khasim: ಮಗುವಿನ ಮುಖ ರಿವೀಲ್ ಮಾಡಿದ ನಟಿ ಪೂರ್ಣ

    ಇತ್ತೀಚೆಗಿನ ಮಾಹಿತಿ ಪ್ರಕಾರ ನಟಿ ಪೂರ್ಣಾಗೆ ಪತಿ ಶಾನಿದ್ ಹಲವು ಕೋಟಿ ಬೆಲೆಯ ಗಿಫ್ಟ್ ನೀಡಿದ್ದಾರೆ. ಮದುವೆಗೂ ಮುನ್ನ ಆಕೆಗೆ 2700 ಗ್ರಾಂ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದಾರೆ.

    MORE
    GALLERIES