Pooja Bhatt: 3 ವರ್ಷಗಳಲ್ಲಿ ಮೊದಲ ಬಾರಿ ಕೊರೊನಾ ಪಾಸಿಟಿವ್! ಮಾಸ್ಕ್ ಹಾಕ್ಕೊಳ್ಳಿ ಎಂದ ನಟಿ

ಕೊರೋನಾ ಮುಗಿದಿದೆ ಎನ್ನುವವರಿಗೆ ನಟಿ ಪೂಜಾ ಭಟ್ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ಮೂರು ವರ್ಷದಲ್ಲಿಯೇ ನನಗೆ ಮೊದಲಬಾರಿ ಕೊರೋನಾ ಪಾಸಿಟಿವ್ ಬಂದಿದೆ ಎಂದಿದ್ದಾರೆ ನಟಿ.

First published:

  • 17

    Pooja Bhatt: 3 ವರ್ಷಗಳಲ್ಲಿ ಮೊದಲ ಬಾರಿ ಕೊರೊನಾ ಪಾಸಿಟಿವ್! ಮಾಸ್ಕ್ ಹಾಕ್ಕೊಳ್ಳಿ ಎಂದ ನಟಿ

    ಬಾಲಿವುಡ್ ನಟಿ ಪೂಜಾ ಭಟ್ ಅವರಿಗೆ ಮಾರ್ಚ್ 24ರಂದು ಬೆಳಗ್ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದಾಗಿ ಹೇಳಿದ್ದಾರೆ. ನಟಿ ತಮಗೆ ಪಾಸಿಟಿವ್ ಬಂದಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿದ್ದಾರೆ.

    MORE
    GALLERIES

  • 27

    Pooja Bhatt: 3 ವರ್ಷಗಳಲ್ಲಿ ಮೊದಲ ಬಾರಿ ಕೊರೊನಾ ಪಾಸಿಟಿವ್! ಮಾಸ್ಕ್ ಹಾಕ್ಕೊಳ್ಳಿ ಎಂದ ನಟಿ

    ಎಲ್ಲರೂ ಮಾಸ್ಕ್ ಧರಿಸಿ ಕೊರೋನಾ ಇನ್ನೂ ಮುಗಿದಿಲ್ಲ ಎಂದು ನಟಿ ಸೋಷಿಯಲ್ ಮೀಡಿಯಾ ಮೂಲಕ ಹೇಳಿದ್ದಾರೆ. ಪೂಜಾ ಅವರ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 37

    Pooja Bhatt: 3 ವರ್ಷಗಳಲ್ಲಿ ಮೊದಲ ಬಾರಿ ಕೊರೊನಾ ಪಾಸಿಟಿವ್! ಮಾಸ್ಕ್ ಹಾಕ್ಕೊಳ್ಳಿ ಎಂದ ನಟಿ

    ಸರಿಯಾಗಿ ಮೂರು ವರ್ಷದ ನಂತರ ಮೊದಲ ಬಾರಿಗೆ ನನಗೆ ಕೊರೋನಾ ಪಾಸಿಟಿವ್ ಬಂದಿದೆ. ಮಾಸ್ಕ್ ಧರಿಸಿ. ಕೊರೋನಾ ನಮ್ಮ ಸುತ್ತ ಮುತ್ತ ಇದೆ. ವ್ಯಾಕ್ಸಿನ್ ಪಡೆಯಿರಿ. ನಾನು ಶೀಘ್ರು ಗುಣಮುಖಳಾಗುತ್ತೇನೆ ಎಂಬ ನಂಬಿಕೆ ಇದೆ ಎಂದು ನಟಿ ಟ್ವೀಟ್ ಮಾಡಿದ್ದಾರೆ.

    MORE
    GALLERIES

  • 47

    Pooja Bhatt: 3 ವರ್ಷಗಳಲ್ಲಿ ಮೊದಲ ಬಾರಿ ಕೊರೊನಾ ಪಾಸಿಟಿವ್! ಮಾಸ್ಕ್ ಹಾಕ್ಕೊಳ್ಳಿ ಎಂದ ನಟಿ

    ಪೂಜಾ ಭಟ್ ಅವರು ಬಾಲಿವುಡ್ ಸಿನಿಮಾ ನಿರ್ದೇಶಕ ಮಹೇಶ್ ಭಟ್ ಅವರ ಮೊದಲ ಪುತ್ರಿ. ಇವರು 17ನೇ ವರ್ಷದಲ್ಲಿಯೇ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ. 1989ರಲ್ಲಿ ಮಹೇಶ್ ಭಟ್ ನಿರ್ದೇಶನದ ಡ್ಯಾಡಿ ಚಿತ್ರದ ಮೂಲಕ ಬಣ್ಣ ಹಚ್ಚಿದರು.

    MORE
    GALLERIES

  • 57

    Pooja Bhatt: 3 ವರ್ಷಗಳಲ್ಲಿ ಮೊದಲ ಬಾರಿ ಕೊರೊನಾ ಪಾಸಿಟಿವ್! ಮಾಸ್ಕ್ ಹಾಕ್ಕೊಳ್ಳಿ ಎಂದ ನಟಿ

    ಈ ಸಿನಿಮಾದಲ್ಲಿ ತಂದೆಯಿಂದ ದೂರವಾದ ಟೀನೇಜ್ ಹುಡುಗಿಯಾಗಿ ನಟಿಸಿದ ಪೂಜಾ ಭಟ್ ಖ್ಯಾತಿ ಗಳಿಸಿದರು. ಅವರಿಗೆ ಸಾಕಷ್ಟು ಸಿನಿಮಾ ಅವಕಾಶಗಳೂ ಬಂದವು.

    MORE
    GALLERIES

  • 67

    Pooja Bhatt: 3 ವರ್ಷಗಳಲ್ಲಿ ಮೊದಲ ಬಾರಿ ಕೊರೊನಾ ಪಾಸಿಟಿವ್! ಮಾಸ್ಕ್ ಹಾಕ್ಕೊಳ್ಳಿ ಎಂದ ನಟಿ

    ದಿಲ್ ಹೇ ಕಿ ಮಾನ್​ತಾ ನಹಿ ಸಿನಿಮಾದಲ್ಲಿ ಅಮೀರ್ ಖಾನ್ ಜೊತೆ ನಟಿಸಿ ದೊಡ್ಡ ಹಿಟ್ ಸಿನಿಮಾ ಕೊಟ್ಟರು. ಇದು 1991ರಲ್ಲಿ ರಿಲೀಸ್ ಆಯಿತು. ನಟಿ ಕಜ್ರಾರೆ, ಜಿಸ್ಮ್ 2 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

    MORE
    GALLERIES

  • 77

    Pooja Bhatt: 3 ವರ್ಷಗಳಲ್ಲಿ ಮೊದಲ ಬಾರಿ ಕೊರೊನಾ ಪಾಸಿಟಿವ್! ಮಾಸ್ಕ್ ಹಾಕ್ಕೊಳ್ಳಿ ಎಂದ ನಟಿ

    ಪೂಜಾ ಅವರು ಚುಪ್: ರಿವೆಂಜ್ ಆಫ್ ಆರ್ಟಿಸ್ಟ್ ಸಿನಿಮಾದಲ್ಲಿ ನಟಿಸಿದ್ದಾರೆ. ಆರ್ ಬಾಲ್ಕಿ ನಿರ್ದೇಶನದಲ್ಲಿ ನಟಿಸಿದ್ದಾರೆ. ಇದರಲ್ಲಿ ಸನ್ನಿ ಡಿಯೋಲ್, ದುಲ್ಖರ್ ಸಲ್ಮಾನ್, ಶ್ರೇಯಾ ಧನ್ವಂತರಿ ನಟಿಸಿದ್ದಾರೆ.

    MORE
    GALLERIES