Pavitra Lokesh: ತಂದೆಯಂತೆ ಆಗಬಾರದೆಂದು ಎಷ್ಟೇ ಪ್ರಯತ್ನಿಸಿದರೂ ಪವಿತ್ರಾ ಲೋಕೇಶ್​ಗೆ ಸಾಧ್ಯವಾಗಲೇ ಇಲ್ಲ

ಕನ್ನಡದ ಖ್ಯಾತ ನಟ ಮೈಸೂರು ಲೋಕೇಶ್ ಅವರ ಪುತ್ರಿ ಪವಿತ್ರಾ ಲೋಕೇಶ್ ಇತ್ತೀಚಿಗೆ ತಮ್ಮ ವೈಯಕ್ತಿಕ ವಿಚಾರಗಳಿಂದ ಸುದ್ದಿಗೆ ಗ್ರಾಸವಾಗುತ್ತಲೇ ಇದ್ದಾರೆ. ತೆಲುಗು ನಟ ನರೇಶ್ ಬಾಬು ಜೊತೆಗೆ ಅವರ ಹೆಸರು ಕೇಳಿ ಬಂದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಯ ವಿಷಯವಾಗಿದ್ದಾರೆ.

First published:

  • 18

    Pavitra Lokesh: ತಂದೆಯಂತೆ ಆಗಬಾರದೆಂದು ಎಷ್ಟೇ ಪ್ರಯತ್ನಿಸಿದರೂ ಪವಿತ್ರಾ ಲೋಕೇಶ್​ಗೆ ಸಾಧ್ಯವಾಗಲೇ ಇಲ್ಲ

    ಚಿಕ್ಕ ವಯಸ್ಸಿನಲ್ಲೇ ನಟನೆ ಆರಂಭಿಸಿದ ಪವಿತ್ರಾ ಅವರು ನಿಜವಾಗಲು ಜೀವನದಲ್ಲಿ ಏನಾಗಬೇಕೆಂದು ಬಯಸಿದ್ದರು. ತಂದೆಯ ಸಾವಿನ ಬಳಿಕ ಹೇಗೆ ಜೀವನ-ವೃತ್ತಿ ಆಯ್ಕೆ ಬದಲಾಯಿತು ಎಂಬ ಬಗ್ಗೆ ಇಲ್ಲಿ ತಿಳಿಯೋಣ.

    MORE
    GALLERIES

  • 28

    Pavitra Lokesh: ತಂದೆಯಂತೆ ಆಗಬಾರದೆಂದು ಎಷ್ಟೇ ಪ್ರಯತ್ನಿಸಿದರೂ ಪವಿತ್ರಾ ಲೋಕೇಶ್​ಗೆ ಸಾಧ್ಯವಾಗಲೇ ಇಲ್ಲ

    ಪವಿತ್ರಾ ಅವರು 16 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಇಲ್ಲಿಯವರೆಗೆ 150ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ನಾಯಿ ನೆರಳು (2006) ನಲ್ಲಿನ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಯಿತು.

    MORE
    GALLERIES

  • 38

    Pavitra Lokesh: ತಂದೆಯಂತೆ ಆಗಬಾರದೆಂದು ಎಷ್ಟೇ ಪ್ರಯತ್ನಿಸಿದರೂ ಪವಿತ್ರಾ ಲೋಕೇಶ್​ಗೆ ಸಾಧ್ಯವಾಗಲೇ ಇಲ್ಲ

    ಪವಿತ್ರಾ ಮೈಸೂರಿನಲ್ಲಿ ಜನಿಸಿದವರು. ಅವರ ತಂದೆ ಲೋಕೇಶ್ ನಟರಾಗಿದ್ದರೆ, ತಾಯಿ ಶಿಕ್ಷಕಿಯಾಗಿದ್ದರು. ಇವರಿಗೆ ಆದಿ ಲೋಕೇಶ್ ಎಂಬ ಕಿರಿಯ ಸಹೋದರನಿದ್ದಾನೆ. ಪವಿತ್ರಾ ಒಂಬತ್ತನೇ ತರಗತಿಯಲ್ಲಿದ್ದಾಗ ಆಕೆಯ ತಂದೆ ತೀರಿಕೊಂಡರು.

    MORE
    GALLERIES

  • 48

    Pavitra Lokesh: ತಂದೆಯಂತೆ ಆಗಬಾರದೆಂದು ಎಷ್ಟೇ ಪ್ರಯತ್ನಿಸಿದರೂ ಪವಿತ್ರಾ ಲೋಕೇಶ್​ಗೆ ಸಾಧ್ಯವಾಗಲೇ ಇಲ್ಲ

    ಪವಿತ್ರಾ ಓದಿನಲ್ಲಿ ಚುರುಕಾಗಿದ್ದರು. ಶಾಲಾ ಶಿಕ್ಷಣದ ವೇಳೆ ಹೆಚ್ಚಿನ ಅಂಕಗಳನ್ನು ಸಹ ಗಳಿಸಿದ್ದರು. ನಾಗರಿಕ ಸೇವೆಗೆ ಸೇರಬೇಕೆಂದು ಬಯಸಿದ್ದರು. ಐಪಿಎಸ್ ಆಗಬೇಕು ಎಂದು ಕನಸು ಕಂಡಿದ್ದರು. ಆದರೆ ತಂದೆಯ ಸಾವಿನೊಂದಿಗೆ ಅವರ ಕನಸು ಕಮರಿ ಹೋಯಿತು.

    MORE
    GALLERIES

  • 58

    Pavitra Lokesh: ತಂದೆಯಂತೆ ಆಗಬಾರದೆಂದು ಎಷ್ಟೇ ಪ್ರಯತ್ನಿಸಿದರೂ ಪವಿತ್ರಾ ಲೋಕೇಶ್​ಗೆ ಸಾಧ್ಯವಾಗಲೇ ಇಲ್ಲ

    ಪವಿತ್ರಾ ಅವರು ತಂದೆಯ ಮರಣದ ನಂತರ ತಾಯಿಗೆ ಸಹಾಯ ಮಾಡಲು ನಿರ್ಧರಿಸಿದರು. ಆ ಸಮಯದಲ್ಲಿ ಕುಟುಂಬದ ಜವಾಬ್ದಾರಿಯನ್ನು ಹೊತ್ತರು. ಆರಂಭದಲ್ಲಿ ತನ್ನ ತಂದೆಯ ಹಾದಿಯಲ್ಲಿ ನಟನೆಯನ್ನು ಅನುಸರಿಸದಿರಲು ನಿರ್ಧರಿಸಿದ ಪವಿತ್ರಾ, ಮೈಸೂರಿನ ಎಸ್ ಬಿಆರ್ ಆರ್ ಮಹಾಜನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.

    MORE
    GALLERIES

  • 68

    Pavitra Lokesh: ತಂದೆಯಂತೆ ಆಗಬಾರದೆಂದು ಎಷ್ಟೇ ಪ್ರಯತ್ನಿಸಿದರೂ ಪವಿತ್ರಾ ಲೋಕೇಶ್​ಗೆ ಸಾಧ್ಯವಾಗಲೇ ಇಲ್ಲ

    ಇದೇ ಸಮಯದಲ್ಲಿ ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗಿದ್ದರು. ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ವಿಫಲವಾದ ನಂತರ ಬೆಂಗಳೂರಿಗೆ ತೆರಳುವ ಮುನ್ನ ನಟನೆ ಆರಂಭಿಸಿದರು. ತಂದೆಯಂತೆ ನಟನೆಗೆ ಬರಬಾರದು ಎಂದುಕೊಂಡಿದ್ದ ಪವಿತ್ರಾ ಬೇರೆ ದಾರಿ ಇಲ್ಲದೆ ಸಿನಿಮಾಗಳಿಗೆ ಬಣ್ಣ ಹಚ್ಚಬೇಕಾಯಿತು.

    MORE
    GALLERIES

  • 78

    Pavitra Lokesh: ತಂದೆಯಂತೆ ಆಗಬಾರದೆಂದು ಎಷ್ಟೇ ಪ್ರಯತ್ನಿಸಿದರೂ ಪವಿತ್ರಾ ಲೋಕೇಶ್​ಗೆ ಸಾಧ್ಯವಾಗಲೇ ಇಲ್ಲ

    ಇನ್ನು ನಟಿ ಮೊದಲು ಸಾಫ್ಟ್ ವೇರ್ ಇಂಜಿನಿಯರ್ ಅನ್ನು ಮದುವೆಯಾಗಿದ್ದರು, ನಂತರ ವಿಚ್ಛೇದನ ಪಡೆದರು. ನಟನಾ ವೃತ್ತಿಜೀವನದ ಮಧ್ಯೆ, ನಟ ಸುಚೇಂದ್ರ ಪ್ರಸಾದ್ ಅವರೊಂದಿಗಿನ ಅವರ ನಿಕಟತೆ ಹೆಚ್ಚಾಯಿತು. ಅವರೊಂದಿಗೆ ಲಿವ್-ಇನ್-ರಿಲೇಶನ್ ನಲ್ಲಿ ವಾಸಿಸಲು ಪ್ರಾರಂಭಿಸಿದರು. 2018 ರಲ್ಲಿ, ಅವರು ಸುಚೇಂದ್ರ ಪ್ರಸಾದ್ ಅವರಿಂದಲೂ ದೂರವಾದರು.

    MORE
    GALLERIES

  • 88

    Pavitra Lokesh: ತಂದೆಯಂತೆ ಆಗಬಾರದೆಂದು ಎಷ್ಟೇ ಪ್ರಯತ್ನಿಸಿದರೂ ಪವಿತ್ರಾ ಲೋಕೇಶ್​ಗೆ ಸಾಧ್ಯವಾಗಲೇ ಇಲ್ಲ

    ಪವಿತ್ರಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಈಗ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮಲ ಸಹೋದರ ನರೇಶ್ ಬಾಬು ಅವರೊಂದಿಗೆ ಸಂಬಂಧ ಹೊಂದಿದ್ದಾರೆ. ಇತ್ತೀಚಿಗೆ ಇಬ್ಬರು ಜೊತೆಯಾಗಿ ಇರುವ, ಮುತ್ತಿಡುವ ವಿಡಿಯೋವನ್ನು ಹರಿಬಿಟ್ಟಿದ್ದರು.

    MORE
    GALLERIES