ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಫುಲ್ ಆಗಿದ್ದಾರೆ. ಗೊಂಬೆ ಎಂದೇ ಕರೆಯಲ್ಪಡುವ ನಿವಿ ಅವರು ಹೊಸ ಫೋಟೋಗಳನ್ನು ನೋಡಿ. ಪಿಂಕ್ ಅಂಡ್ ಬ್ಲ್ಯಾಕ್ ಕಲರ್ ಡ್ರೆಸ್ ನಲ್ಲಿ ಲೂಸ್ ಹೇರ್ ಬಿಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ನಿವೇದಿತಾ ಗೌಡ ಅವರು ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ನಿವೇದಿತಾ ಗೌಡ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಸೀಸನ್ 2 ನಲ್ಲಿ ಭಾಗವಸಿದ್ದಾರೆ. ಜನರಿಗೆ ಮನರಂಜನೆ ನೀಡಲು ಹೊಸ ಹೊಸ ವೇಷ ಧರಿಸುತ್ತಾರೆ. ನಿವೇದಿತಾ ಗೌಡ ಸ್ಕಿಟ್‍ಗಾಗಿ ಪೇಪರ್ ಡ್ರೆಸ್ ಧರಿಸಿದ್ದರು. ಅಲ್ಲದೇ ಕಳದೆ ಬಾರಿ ಬಿಯರ್ ಬಾಟೆಲ್ ಆಗಿದ್ದರು. ತುಂಬಾ ಚೆನ್ನಾಗಿ ಸ್ಕಿಟ್ ಮಾಡಿದ್ದರು. ನಿವೇದಿತಾ ಗೌಡ ಕಳೆದ ಬಾರಿ ಕಲಾವಿದರಲ್ಲದ ವಿಭಾಗದಿಂದ ರನ್ನರ್ ಅಪ್ ಆಗಿದ್ದರು. ಮತ್ತೆ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಸೀಸನ್ 2 ಕಾರ್ಯಕ್ರಮಕ್ಕೆ ಸ್ಪರ್ಧಿ ಆಗಿ ಬಂದಿದ್ದಾರೆ. ಇತ್ತೀಚೆಗೆ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಪೋಷಕರಾಗ್ತಂರಂತೆ ಎಂದು ಎಲ್ಲಡೆ ಸುದ್ದಿ ಹರಡಿತ್ತು. ನಂತರ ಅದು ಸುಳ್ಳು ಎಂದು ಅವರೇ ತಿಳಿಸಿದ್ರು. ನಿವೇದಿತಾ ಗೌಡ ಸದಾ ಸುದ್ದಿಯಲ್ಲಿರುತ್ತಾರೆ. ವಿಭಿನ್ನವಾದ ಡ್ರೆಸ್, ರೀಲ್ಸ್ ಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ನಿವೇದಿತಾ ಸ್ಕಿಟ್ ಸಹ ಅಭಿಮಾನಿಗಳಿಗೆ ಇಷ್ಟ ಆಗುತ್ತೆ. ನಿವೇದಿತಾ ಗೌಡ ಅವರು ಸಿನಿಮಾ ಮಾಡ್ತಾರಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಅದರ ಬಗ್ಗೆ ನಿವಿ ಅವರು ಏನೂ ಹೇಳಿಲ್ಲ.