Nikki Galrani Birthday: ಮದುವೆ ನಂತ್ರ ಗಂಡನೊಂದಿಗೆ ನಿಕ್ಕಿ ಗರ್ಲಾನಿ ಮೊದಲ ಬರ್ತ್ಡೇ!
ನಟಿಯರಿಗೆ ಮದುವೆ ನಂತರ ಮೊದಲ ಒಂದು ವರ್ಷ ಎಲ್ಲ ಸೆಲೆಬ್ರೇಷನ್ ಸೂಪರ್ ಸ್ಪೆಷಲ್ ಆಗಿರುತ್ತದೆ. ಈಗ ನಟಿ ನಿಕ್ಕಿ ಗರ್ಲಾನಿ ಅವರಿಗೆ ಇದು ಮದುವೆ ನಂತರ ಮೊದಲ ಬರ್ತ್ಡೇ.
1/ 7
ಸೌತ್ ನಟಿ ನಿಕ್ಕಿ ಗರ್ಲಾನಿ ಅವರಿಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ. ಬಹುಭಾಷಾ ನಟಿ ಈ ಬಾರಿ ಗಂಡನೊಂದಿಗೆ ಬರ್ತ್ಡೇ ಆಚರಿಸಲಿದ್ದಾರೆ ಎನ್ನುವುದು ವಿಶೇಷ.
2/ 7
ಹೌದು. ಮದುವೆಯಾದ ನಂತರ ಇದು ನಿಕ್ಕಿ ಅವರ ಮೊದಲ ಬರ್ತ್ಡೇ. ನಿಕ್ಕಿ ನಟಿ ಸಂಜನಾ ಗರ್ಲಾನಿ ಅವರ ಸಹೋದರಿ.
3/ 7
ಆದರೆ ನಿಕ್ಕಿ ಅವರು ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿಯೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಸದ್ಯ ಕಾಲಿವುಡ್ನಲ್ಲಿಯೇ ಆ್ಯಕ್ಟಿವ್ ಆಗಿದ್ದಾರೆ.
4/ 7
ನಟಿ ಇಂದು 33ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದು ಅವರ ಅಭಿಮಾನಿಗಳು ನಟಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
5/ 7
ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮೊದಲು ತೆರೆ ಹಂಚಿಕೊಂಡಿದ್ದು ನಿವಿನ್ ಪೌಲಿ ಜೊತೆ. ಆ ವರ್ಷದ ಬೆಸ್ಟ್ ಡಿಬಟ್ ಆ್ಯಕ್ಟ್ರೆಸ್ ಅವಾರ್ಡ್ ಪಡೆದಿದ್ದಾರೆ.
6/ 7
ನಟಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು ಫೋಟೊ ಹಾಗೂ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಲೇ ಇರುತ್ತಾರೆ.
7/ 7
ಸದ್ಯ ನಟಿ ಸೋಷಿಯಲ್ ಮೀಡಿಯಾದಲ್ಲಿ 3.2 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಈ ಬಾರಿ ಅವರು ಪತಿಯೊಂದಿಗೆ ಬರ್ತ್ಡೇ ಆಚರಿಸಿಕೊಳ್ಳುತ್ತಿರುವುದು ವಿಶೇಷ.
First published: