Nikki Galrani - Aadhi: ನಿಕ್ಕಿ ಗಲ್ರಾನಿ, ಆದಿ ಪೆನಿಸೆಟ್ಟಿ ಆರತಕ್ಷತೆ ಸಂಭ್ರಮ - ಹೇಗಿತ್ತು ನೋಡಿ ಅದ್ದೂರಿ ಕಾರ್ಯಕ್ರಮ
Nikki Reception: ಬಹುಭಾಷಾ ನಟಿ ನಿಕ್ಕಿ ಗಲ್ರಾನಿ ತಮ್ಮ ಬಹುಕಾಲದ ಗೆಳೆಯ ಆದಿ ಪೆನಿಸೆಟ್ಟಿ ಜೊತೆ ಸಪ್ತಪದಿ ತುಳಿದಿದ್ದು, ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಹೇಗಿತ್ತು, ಯಾರೆಲ್ಲಾ ಬಂದಿದ್ದರು. ಇಲ್ಲಿದೆ ಮಾಹಿತಿ.
ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿರುವ ನಿಕ್ಕಿ ಗಲ್ರಾನಿ, ಪ್ರೀತಿಸಿದ ಯುವಕನ ಜೊತೆ ಇದೇ ಮೇ 19 ರಂದು ಸಪ್ತಪದಿ ತುಳಿದಿದ್ದು, ಮದುವೆಯ ನಂತರ ಹಮ್ಮಿಕೊಂಡಿದ್ದ ಆರತಕ್ಷತೆ ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯರು ಭಾಗವಹಿಸಿದ್ದರು.
2/ 8
2015ರಲ್ಲಿ ಬಿಡುಗಡೆಯಾದ ಯಾಗವರಾಯಿನುಮ್ ನಾ ಕಾಕ್ಕಾ ಚಿತ್ರದಲ್ಲಿ ಮೊದಲ ಬಾರಿಗೆ ಈ ಜೊಡಿ ಭೇಟಿಯಾಗಿತ್ತು. ಅಲ್ಲಿಂದ ಆರಂಭವಾದ ಇವರಿಬ್ಬರ ಸಂಬಂಧಕ್ಕೆ ಈಗ ಮೂರು ಗಂಟಿನ ಮುದ್ರೆ ಬಿದ್ದಿದೆ.
3/ 8
ನಂತರ ಮರಗಧ ನಾನಯಮ್' ಸಿನಿಮಾದಲ್ಲಿ ಕೂಡ ಒಟ್ಟಿಗೆ ನಟಿಸಿದ್ದ ಜೋಡಿ, ಇದೇ ಮಾರ್ಚ್ನಲ್ಲಿ ನಿಶ್ಚಿತಾರ್ಥವನ್ನು ಸಹ ಮಾಡಿಕೊಂಡಿತ್ತು. ಬಹಳ ವರ್ಷಗಳ ಕಾಲ ಡೇಟಿಂಗ್ ಮಾಡಿದ ಜೋಡಿ ಸತಿ ಪತಿಗಳಾಗಿದ್ದಾರೆ.
4/ 8
ಮೇ 19ರ ಮದುವೆಯಲ್ಲಿ ಸಹ ಸಂದೀಪ್ ಕೃಷ್ಣನ್, ನಾನಿ ಹಾಗೂ ತಮಿಳು, ತೆಲುಗಿನ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ನಂತರ ನಡೆದ ಆರತಕ್ಷತೆ ಜಾರ್ಯಕ್ರಮಕ್ಕೆ ಸಹ ಹಲವಾರು ಜನರು ಬಂದಿದ್ದರು.
5/ 8
ಮದು ಮಕ್ಕಳಿಗೆ ಹಾರೈಸಲು ಸಂಗೀತ ಮಾಂತ್ರಿಕ ಇಳಯರಾಜಾ, ರಾಧಿಕ ಶರತ್ ಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರು ಬಂದಿದ್ದರು.
6/ 8
ಹಾಗೆಯೇ ನಾಸೀರ್, ಶಶಿಕುಮಾರ್ ಸೇರಿದಂತೆ ಗಣ್ಯಾತಿ ಗಣ್ಯರು ಆಗಮಿಸಿ ನವ ಜೋಡಿಗೆ ಶುಭಾಶಯ ಕೋರಿದ್ದಾರೆ. ಈ ಅದ್ಧೂರಿ ಕಾರ್ಯಕ್ರಮದಲ್ಲಿ ಮದುಮಕ್ಕಳು ಸುಂದರವಾಗಿ ಕಾಣಿಸುತ್ತಿದ್ದಾರೆ.
7/ 8
ಲೈಟ್ ಸಿಲ್ವರ್ ಬಣ್ಣದ ಗೌನ್ ಧರಿಸಿದ್ದ ನಿಕ್ಕಿ ನಿಜಕ್ಕೂ ರಾಜಕುಮಾರಿಯಂತೆ ಕಾಣುತ್ತಿದ್ದು, ಆದಿ ಬಿಳಿ ಸೂಟ್ನಲ್ಲಿ ಮಿಂಚುತ್ತಿದ್ದರು. ಅಭಿಮಾನಿಗಳು ಸಹ ಈ ಜೋಡಿ ನೋಡಿ ಹಾರೈಸಿದ್ದಾರೆ.
8/ 8
ಇನ್ನು ಗಲ್ರಾನಿ ಕುಟುಂಬಕ್ಕೆ ಮೇ 19 ಡಬಲ್ ಧಮಾಕವಾಗಿದ್ದು, ಒಂದೆಡೆ ನಿಕ್ಕಿ ಮದುವೆ ಇದ್ದರೆ ಇನ್ನೊಂದೆಡೆ ಸಂಜನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.