Nayanthara: ಪತಿ ಜೊತೆ ಹೊಸ ಬ್ಯುಸಿನೆಸ್ ಶುರು ಮಾಡಿದ ನಯನತಾರಾ! ನಟನೆಗೆ ಹೇಳ್ತಾರಾ ಗುಡ್ ಬೈ?

ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಸೂಪರ್ ಸ್ಟಾರ್ ನಯನತಾರಾ ಮದುವೆಯಾದ ಒಂದೇ ವರ್ಷಕ್ಕೆ ಬಾಡಿಗೆ ತಾಯ್ತನ ಮೂಲಕ ಇಬ್ಬರು ಮಕ್ಕಳನ್ನು ಪಡೆದಿದ್ದು, ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಹೊಸ ಬ್ಯುಸಿನೆಸ್ ಆರಂಭಿಸಿರುವ ನಯನತಾರಾ, ಇದೀಗ ನಟನೆಗೆ ಗುಡ್ ಬೈ ಹೇಳ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

First published:

  • 18

    Nayanthara: ಪತಿ ಜೊತೆ ಹೊಸ ಬ್ಯುಸಿನೆಸ್ ಶುರು ಮಾಡಿದ ನಯನತಾರಾ! ನಟನೆಗೆ ಹೇಳ್ತಾರಾ ಗುಡ್ ಬೈ?

    ಬಾಲಿವುಡ್ ನಟ ಶಾರುಖ್ ಖಾನ್ ಜೊತೆ ನಯನತಾರಾ ಜವಾನ್ ಸಿನಿಮಾ ಮಾಡುತ್ತಿದ್ದಾರೆ. ಈ ನಡುವೆ ನಯನತಾರಾ ಬಗ್ಗೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ನಯನತಾರಾ ಚಿತ್ರಮಂದಿರ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಈ ಮೂಲಕ ನಯನತಾರಾ ದಂಪತಿ ಥಿಯೇಟರ್ ಬ್ಯುಸಿನೆಸ್​ಗೆ ಎಂಟ್ರಿ ಕೊಟ್ಟಿದ್ದಾರೆ.

    MORE
    GALLERIES

  • 28

    Nayanthara: ಪತಿ ಜೊತೆ ಹೊಸ ಬ್ಯುಸಿನೆಸ್ ಶುರು ಮಾಡಿದ ನಯನತಾರಾ! ನಟನೆಗೆ ಹೇಳ್ತಾರಾ ಗುಡ್ ಬೈ?

    ನಯನಾತಾರ ಹಾಗೂ ಪತಿ ವಿಘ್ನೇಶ್ ಶಿವನ್ ಜೊತೆಯಾಗಿ ಉತ್ತರ ಚೆನ್ನೈನಲ್ಲಿರುವ ಹಳೆಯ ಅಗಸ್ತ್ಯ ಥಿಯೇಟರ್ ಖರೀದಿಸಿದ್ದು, ಇದು ಲೇಡಿ ಸೂಪರ್ ಸ್ಟಾರ್ ಚೆನ್ನೈನಲ್ಲಿ ಖರೀದಿಸಿದ ಮೊದಲ ಆಸ್ತಿಯಾಗಿದೆ. ಅಗಸ್ತ್ಯ ಥಿಯೇಟರ್ ಮುಚ್ಚಿಹೋಗಿ ವರ್ಷಗಳೇ ಕಳೆದಿದೆ.

    MORE
    GALLERIES

  • 38

    Nayanthara: ಪತಿ ಜೊತೆ ಹೊಸ ಬ್ಯುಸಿನೆಸ್ ಶುರು ಮಾಡಿದ ನಯನತಾರಾ! ನಟನೆಗೆ ಹೇಳ್ತಾರಾ ಗುಡ್ ಬೈ?

    ಸುಮಾರು 56 ವರ್ಷಗಳ ಹಳೆಯ ಚಿತ್ರಮಂದಿರ ಇದಾಗಿದ್ದು ಸದ್ಯ ನಯನತಾರಾ ದಂಪತಿ ಇದನ್ನು ಖರೀದಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಯನತಾರಾ ಹೊಸ ಬ್ಯುಸಿನೆಸ್​ಗೂ ಕೈ ಹಾಕಿದ್ದಾರೆ.

    MORE
    GALLERIES

  • 48

    Nayanthara: ಪತಿ ಜೊತೆ ಹೊಸ ಬ್ಯುಸಿನೆಸ್ ಶುರು ಮಾಡಿದ ನಯನತಾರಾ! ನಟನೆಗೆ ಹೇಳ್ತಾರಾ ಗುಡ್ ಬೈ?

    ನಯನತಾರಾ ಲೇಡಿ ಸೂಪರ್​ ಸ್ಟಾರ್ ಆಗಿ ಅಭಿಮಾನಿಗಳ ಮನಗೆದ್ದಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್ ನಟಿಯರಲ್ಲಿ ನಯನತಾರಾ ಕೂಡ ಒಬ್ಬರಾಗಿದ್ದಾರೆ. ಸಿನಿಮಾ ಜೊತೆಗೆ ಇದೀಗ ಥಿಯೇಟರ್ ಬ್ಯುಸಿನೆಸ್ ಆರಂಭಿಸಿರುವ ನಯನತಾರಾ ಮುಂದಿನ ದಿನಗಳಲ್ಲಿ ನಟನೆ ತೊರೆಯುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

    MORE
    GALLERIES

  • 58

    Nayanthara: ಪತಿ ಜೊತೆ ಹೊಸ ಬ್ಯುಸಿನೆಸ್ ಶುರು ಮಾಡಿದ ನಯನತಾರಾ! ನಟನೆಗೆ ಹೇಳ್ತಾರಾ ಗುಡ್ ಬೈ?

    ದೇವಿ ಥಿಯೇಟರ್ ಗ್ರೂಪ್ ಒಡೆತನದ ಅಗಸ್ತ್ಯ ಥಿಯೇಟರ್ 1967 ರಿಂದ ಉತ್ತರ ಚೆನ್ನೈ ಪ್ರದೇಶದಲ್ಲಿ ಕಾರ್ಯನಿರ್ವಹಿಸಿತು. ಎಂಜಿಆರ್, ಶಿವಾಜಿ ಗಣೇಶನ್ ರಿಂದ ರಜಿನಿಕಾಂತ್, ಕಮಲ್ ಹಾಸನ್, ಅಜಿತ್ ಮತ್ತು ವಿಜಯ್ ವರೆಗೆ ತಮಿಳು ಚಿತ್ರರಂಗದ ದಿಗ್ಗಜರ ಅಸಂಖ್ಯಾತ ಬ್ಲಾಕ್ ಬಸ್ಟರ್ ಹಿಟ್ ಚಲನಚಿತ್ರಗಳು ಈ ಚಿತ್ರಮಂದಿರ ಪ್ರದರ್ಶನಗೊಂಡಿದೆ.

    MORE
    GALLERIES

  • 68

    Nayanthara: ಪತಿ ಜೊತೆ ಹೊಸ ಬ್ಯುಸಿನೆಸ್ ಶುರು ಮಾಡಿದ ನಯನತಾರಾ! ನಟನೆಗೆ ಹೇಳ್ತಾರಾ ಗುಡ್ ಬೈ?

    ಕೊರೊನಾ ಬಳಿಕ ಅನೇಕ ಥಿಯೇಟರ್ ಸಂಕಷ್ಟಕ್ಕೆ ಸಿಲುಕಿವೆ. ಅದರಲ್ಲಿ ಅಗಸ್ತ್ಯ ಥಿಯೇಟರ್ ಕೂಡ ಒಂದು. 53 ವರ್ಷಗಳ ಕಾಲ ಸಿನಿಮಾ ಪ್ರದರ್ಶನದ ಮೂಲಕ ಜನರಿಗೆ ಮನರಂಜನೆ ನೀಡಿರುವ ಈ ಥಿಯೇಟರ್ 2020 ರಲ್ಲಿ ಮುಚ್ಚಲ್ಪಟ್ಟಿತ್ತು. ಸದ್ಯ ನಯನತಾರಾ ಈ ಚಿತ್ರಮಂದಿರ ಖರೀದಿಸಿದ್ದಾರೆ.

    MORE
    GALLERIES

  • 78

    Nayanthara: ಪತಿ ಜೊತೆ ಹೊಸ ಬ್ಯುಸಿನೆಸ್ ಶುರು ಮಾಡಿದ ನಯನತಾರಾ! ನಟನೆಗೆ ಹೇಳ್ತಾರಾ ಗುಡ್ ಬೈ?

    ಸದ್ಯ ನಯನತಾರಾ ಖರೀದಿ ಮಾಡಿರುವ ಅಗಸ್ತ್ಯ ಥಿಯೇಟರ್ ಅನ್ನು ಮತ್ತೆ ನವೀಕರಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ. ಸಿಂಗಲ್ ಸ್ಕ್ರೀನ್ ಇದ್ದ ಈ ಥಿಯೇಟರ್ ಅನ್ನು ಎರಡು ಸ್ಕ್ರೀನ್ ಆಗಿ ಪರಿವರ್ತಿಸಲು ನಟಿ ಮುಂದಾಗಿದೆ.

    MORE
    GALLERIES

  • 88

    Nayanthara: ಪತಿ ಜೊತೆ ಹೊಸ ಬ್ಯುಸಿನೆಸ್ ಶುರು ಮಾಡಿದ ನಯನತಾರಾ! ನಟನೆಗೆ ಹೇಳ್ತಾರಾ ಗುಡ್ ಬೈ?

    ಹೊಸ ಬ್ಯುಸಿನೆಸ್ ಶುರು ಮಾಡಿರುವ ನಯನತಾರಾ, ಕೈಯಲ್ಲಿರುವ ಸಿನಿಮಾಗಳನ್ನು ಮುಗಿಸಿ ಮುಂದಿನ ದಿನಗಳಲ್ಲಿ ನಟನೆ ಗುಡ್ ಬೈ ಹೇಳಲಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬರ್ತಿದೆ. ಮಕ್ಕಳ ಲಾಲನೆ-ಪಾಲನೆಯಲ್ಲಿ ನಟಿ ಬ್ಯುಸಿ ಆಗಲಿದ್ದಾರೆ.

    MORE
    GALLERIES