ಬಾಲಿವುಡ್ ನಟ ಶಾರುಖ್ ಖಾನ್ ಜೊತೆ ನಯನತಾರಾ, ಜವಾನ್ ಸಿನಿಮಾ ಮಾಡ್ತಿದ್ದಾರೆ. ಬಾದ್ ಷಾ ಜೊತೆ ನಯನತಾರಾ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಈ ಚಿತ್ರ ನಿರ್ದೇಶಕ ಅಟ್ಲಿ ಆ್ಯಕ್ಷನ್ ಕಟ್ ಹೇಳಿದ್ದು, ಜೂನ್ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಚಿತ್ರದಲ್ಲಿ ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ಕೂಡ ನಟಿಸಿದ್ದಾರೆ.