ಸೀತಾರಾಮಂ ಸಿನಿಮಾ ಮೂಲಕ ಖ್ಯಾತಿ ಪಡೆದಿರುವ ನಟಿ ಮೃಣಾಲ್ ಠಾಕೂರ್ ಅವರು ಟಾಲಿವುಡ್ ನ ನಾನಿಗೆ ಜೋಡಿಯಾಗಿ ಸಿನಿಮಾ ಮಾಡಲಿದ್ದಾರೆ.
2/ 8
ಸೀತಾ ರಾಮ್ ಸಿನಿಮಾ ನೋಡಿದ ಪ್ರೇಕ್ಷಕರು ಮೃಣಾಲ್ ಅಭಿನಯಕ್ಕೆ ಫಿದಾ ಆಗಿದ್ದರು. ಈ ಸಿನಿಮಾದಲ್ಲಿ ಸೀತಾ ಮಹಾಲಕ್ಷ್ಮಿ ಪಾತ್ರದಲ್ಲಿ ಮೃಣಾಲ್ ಠಾಕೂರ್ ಅವರ ಅತ್ಯುತ್ತಮ ಅಭಿನಯಕ್ಕಾಗಿ ಪ್ರಶಂಸೆ ವ್ಯಕ್ತವಾಗಿತ್ತು..
3/ 8
ಮೃಣಾಲ್ ಠಾಕೂರ್ಗೆ ಟಾಲಿವುಡ್ ಇಂಡಸ್ಟ್ರಿಯಿಂದ ಭಾರೀ ಆಫರ್ಗಳು ಬರುತ್ತಿವೆ ಎನ್ನಲಾಗಿದೆ. ಸೀತಾರಾಮಂ ಚಿತ್ರದ ಯಶಸ್ಸಿನ ನಂತರ ಮೃಣಾಲ್ ಠಾಕೂರ್ ಸಂಭಾವನೆ ದುಪ್ಪಟ್ಟಾಗಿದ್ದರೂ ಕೂಡ ಆಫರ್ ಗಳು ಬರುತ್ತಿವೆ.
4/ 8
ಹಿಂದಿ, ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಮೃಣಾಲ್ ಠಾಕೂರ್ ತೆಲುಗಿನತ್ತ ಮುಖ ಮಾಡಿದ್ದಾರೆ. ನ್ಯಾಚುರನ್ ಸ್ಟಾರ್ ನಾನಿ ಜೊತೆ ಅಭಿನಯಿಸಲು ಸಹಿ ಹಾಕಿದ್ದಾರೆ.
5/ 8
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟಿರುವ ನಟಿ ಮೃಣಾಲ್ ಠಾಕೂರ್ ನಾನಿ ಜೊತೆ ಅಭಿನಯಿಸುವುದಾಗಿ ಹೇಳಿಕೊಂಡಿದ್ದಾರೆ. ನೀವು ಈ ಸಿನಿಮಾ ನೋಡಲು ಕಾದ್ರೆ ತಪ್ಪಿಲ್ಲ ಎಂದು ಹೇಳಿಕೊಂಡಿದ್ದಾರೆ.
6/ 8
ನಾನಿ ಜೊತೆ ಅಭಿನಯಿಸುತ್ತಿರುವುದು ಖುಷಿಯಾಗಿದೆ. ಎಲ್ಲರೂ ಈ ಸಿನಿಮಾ ನೋಡಬಹುದು. ಇದೊಂದು ಅಪ್ಪ-ಮಗಳ ಬಾಂಧವ್ಯದ ಕಥೆಯಾಗಿದೆ ಎಂದು ನಟಿ ಮೃಣಾಲ್ ಠಾಕೂರ್ ಹೇಳಿದ್ದಾರೆ.
7/ 8
ಅಲ್ಲದೇ ಈ ಸಿನಿಮಾದ ಹೆಸರು ನಾನಿ 30. ಇದರಲ್ಲಿ ನಾಯಕಿಯಾಗಿ ನಟಿ ಮೃಣಾಲ್ ಠಾಕೂರ್ ಅಭಿನಯಿಸುತ್ತಿದ್ದಾರೆ. ಇಬ್ಬರ ಮೋಡಿ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ.
8/ 8
ದುಲ್ಕರ್ ಜೊತೆ ನಟಿ ಮೃಣಾಲ್ ಠಾಕೂರ್ ಅಭಿನಯ ಎಲ್ಲರ ಗಮನ ಸೆಳೆದಿತ್ತು. ಈಗ ನಾನಿ ಜೊತೆ ಹೇಗೆ ತಮ್ಮ ಪಾತ್ರ ನಿರ್ವಹಿಸುತ್ತಾರೆ ಎಂದು ಎಲ್ಲರೂ ಕುತೂಹಲದಿಂದ ಎದುರು ನೋಡ್ತಾ ಇದ್ದಾರೆ.