Mehreen Pirzada: ಮುರಿದು ಬಿತ್ತು F2 ಸಿನಿಮಾ ಖ್ಯಾತಿಯ ನಟಿ ಮೆಹ್ರೀನ್ ನಿಶ್ಚಿತಾರ್ಥ.. ಕಾರಣವೇನು?
ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಮೆಹ್ರೀನ್ ಪಿರ್ಜಾದಾ ನಿಶ್ಚಿತಾರ್ಥ ಮುರಿದು ಬಿದ್ದಿದೆ. 4 ತಿಂಗಳುಗಳ ಹಿಂದೆ 3 ಬಾರಿ ಹರಿಯಾಣದ ಮುಖ್ಯಮಂತ್ರಿಯಾಗಿದ್ದ ಭಜನ್ ಲಾಲ್ರ ಮೊಮ್ಮಗ ಭವ್ಯ ಬಿಷ್ನೋಯ್ ಜೊತೆ ಉಂಗುರ ಬದಲಾಯಿಸಿಕೊಂಡಿದ್ದರು. ಆದರೆ ಈಗ ನಿಶ್ಚಿತಾರ್ಥವನ್ನು ಮುರಿದುಕೊಂಡಿರುವುದಾಗಿ ನಟಿ ಮೆಹ್ರೀನ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
ನಾನು, ಭವ್ಯ ಬಿಷ್ನೋಯ್ ಇಬ್ಬರು ಒಪ್ಪಿಗೆ ಮೇರೆಗೆ ಎಂಗೇಜ್ ಮೆಂಟ್ನ ರದ್ದು ಮಾಡುತ್ತಿದ್ದೇವೆ. ಇಬ್ಬರಿಗೂ ಈ ನಿರ್ಧಾರ ಸೂಕ್ತವಾಗಿದೆ ಎಂದು ಹೇಳಲು ಇಚ್ಛಿಸುತ್ತೇನೆ.
2/ 11
ಇನ್ಮುಂದೆ ನಾನು, ನನ್ನ ಕುಟುಂಬಸ್ಥರು ಹಾಗೂ ಗೆಳೆಯರು ಭವ್ಯ ಅವರ ಜೊತೆ ಯಾವುದೇ ಸಂಬಂಧ, ಸಂಪರ್ಕ ಹೊಂದಿರುವುದಿಲ್ಲ.
3/ 11
ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಮ್ಮ ವೈಯಕ್ತಿಯ ನಿರ್ಧಾರವನ್ನು ಗೌರವಿಸುತ್ತೀರ ಎಂದು ಭಾವಿಸುತ್ತೇನೆ ಎಂದು ಮೆಹ್ರೀನ್ ಬರೆದುಕೊಂಡಿದ್ದಾರೆ.
4/ 11
ಮುಂದೆ ಸಿನಿಮಾಗಳಲ್ಲಿ ಎಂದಿನಂತೆ ತೊಡಗಿಕೊಳ್ಳುತ್ತೇನೆ, ನಟನೆ ಮೂಲಕ ನಿಮ್ಮನ್ನು ರಂಜಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
5/ 11
ಹರಿಯಾಣದ ಹಿಸ್ಸಾರ್ನನ ಅದಮ್ಪುರ ವಿಧಾನಸಭಾ ಕ್ಷೇತ್ರದ ಶಾಸಕ ಕುಲ್ದೀಪ್ ಬಿಷ್ನೋಯ್ ಅವರ ಪುತ್ರ ಭವ್ಯ ಬಿಷ್ನೋಯ್ ಸಹ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
6/ 11
ರಾಜಸ್ತಾನದ ಜೈಪುರದ ಹಳೆಯ ಕಾಲದ ರಾಜಮನೆತನಕ್ಕೆ ಸೇರಿದ ಮಹಲಿನಲ್ಲಿ ಅದ್ಧೂರಿಯಾಗಿ ಮೆಹ್ರೀನ್ ಪೀರ್ಜಾದಾ ಹಾಗೂ ಭವ್ಯ ಬಿಷ್ನೋಯ್ ನಿಶ್ಚಿತಾರ್ಥ ನೆರವೇರಿತ್ತು.
7/ 11
ಕಳೆದ ವರ್ಷ ಏಪ್ರಿಲ್ ನಲ್ಲೇ ಮೆಹ್ರೀನ್ ಹಾಗೂ ಭವ್ಯ ಅವರ ಮದುವೆ ನಡೆಯಬೇಕಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಈ ವರ್ಷಕ್ಕೆ ಮುಂದೂಡಲ್ಪಟ್ಟಿತ್ತು. ಈಗ ಎಂಗೇಜ್ಮೆಂಟ್ ಮುರಿದು ಬಿದ್ದಿದೆ.
8/ 11
4 ತಿಂಗಳುಗಳ ಹಿಂದೆ ಅದ್ಧೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಜೋಡಿಯ ಮಧ್ಯೆ ಅಂತಹದ್ದೇನಾಯ್ತು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.
9/ 11
2016ರಲ್ಲಿ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮೆಹ್ರೀನ್ ಪೀರ್ಜಾದಾ ಇದುವರೆಗೆ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
10/ 11
ಬಾಲಿವುಡ್ನಲ್ಲಿ ಫಿಲ್ಲೌರಿ ಸೇರಿದಂತೆ ಮಹಾನುಬಾವುಡು, ರಾಜಾ ದಿ ಗ್ರೇಟ್, ನೋಟಾ, ಚಾಣಕ್ಯ, ಪಟ್ಟಾಸ್, ಫನ್ ಆ್ಯಂಡ್ ಫ್ರಸ್ಟ್ರೇಷನ್ ಸೇರಿದಂತೆ ಹತ್ತಕ್ಕೂ ಹೆಚ್ಚು ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.
11/ 11
ಮೆಹ್ರೀನ್ - ಭವ್ಯ ಅದ್ಧೂರಿಯಾಗಿ ನಿಶಿತಾರ್ಥ ಮಾಡಿಕೊಂಡಿದ್ದರು.