Rayan Raj Sarja’s festival photos: ಹಬ್ಬದಂದು ಗೊಂಬೆಗಳ ಎದುರು ರಾಯನ್ ರಾಜ್ ಸರ್ಜಾ ತುಂಟಾಟ

ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಸೆಲೆಬ್ರೆಟಿಗಳು ಹಬ್ಬ ಆಚರಣೆ ಮಾಡಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಂತೆಯೇ ನಟಿ ಮೇಘನಾ ರಾಜ್ ಸರ್ಜಾ (Meghana Raj Sarja) ಪುತ್ರ ರಾಯನ್ (Rayan) ಜೊತೆ ವಿಶೇಷ ಸ್ಥಳದಲ್ಲಿ ವಿಜಯದಶಮಿ ಆಚರಣೆ ಮಾಡಿದ್ದಾರೆ. (Instagram photos)

First published:

  • 15

    Rayan Raj Sarja’s festival photos: ಹಬ್ಬದಂದು ಗೊಂಬೆಗಳ ಎದುರು ರಾಯನ್ ರಾಜ್ ಸರ್ಜಾ ತುಂಟಾಟ

    ಇನ್ಸ್ಟಾಗ್ರಾಂ(Instagram)ನಲ್ಲಿ ಪುತ್ರನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಳದಿ ಬಣ್ಣದ ಟೀಶರ್ಟ್ ಧರಿಸಿ, ತಲೆ ಮೇಲೆ ಜುಟ್ಟು ಹಾಕಿಕೊಂಡಿರು ಪುಟ್ಟ ರಾಯನ್, ಆಟಿಕೆಯೊಂದಿಗೆ ಆಟವಾಡುತ್ತಿರೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ರಾಯನ್ ಹಬ್ಬದ ಫೋಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಲೈಕ್ಸ್ ನೀಡೋದರ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.

    MORE
    GALLERIES

  • 25

    Rayan Raj Sarja’s festival photos: ಹಬ್ಬದಂದು ಗೊಂಬೆಗಳ ಎದುರು ರಾಯನ್ ರಾಜ್ ಸರ್ಜಾ ತುಂಟಾಟ

    ಫೋಟೋ ಜೊತೆ ಕೆಲ ಸಾಲುಗಳನ್ನು ಬರೆದುಕೊಂಡಿರುವ ಮೇಘನಾ ರಾಜ್ ಸರ್ಜಾ, ಮಗನಿಗೆ ಇದು ಮೊದಲ ವಿಜಯದಶಮಿ ಹಬ್ಬ. ಕಳೆದ ವರ್ಷ ನವರಾತ್ರಿ ವೇಳೆಯೇ ರಾಯನ್ ಜನನವಾಗಿತ್ತು. ಹಾಗಾಗಿ ಈ ಎರಡೂ ಕಾರಣಗಳಿಂದ ರಾಯನ್ ಗೆ ವಿಜಯದಶಮಿ ವಿಶೇಷ.

    MORE
    GALLERIES

  • 35

    Rayan Raj Sarja’s festival photos: ಹಬ್ಬದಂದು ಗೊಂಬೆಗಳ ಎದುರು ರಾಯನ್ ರಾಜ್ ಸರ್ಜಾ ತುಂಟಾಟ

    ಹಿಂದೆ ಇರಿಸಲಾಗಿರುವ ಎಲ್ಲ ಗೊಂಬೆಗಳು ಸುಮಾರು 40 ವರ್ಷದಷ್ಟು ಹಳೆಯದು. ಪ್ರತಿ ವರ್ಷ ಈ ಬೊಂಬೆಗಳನ್ನು ಹಬ್ಬದ ಬಳಿಕ ಭದ್ರವಾಗಿ ತೆಗೆದಿಡಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 45

    Rayan Raj Sarja’s festival photos: ಹಬ್ಬದಂದು ಗೊಂಬೆಗಳ ಎದುರು ರಾಯನ್ ರಾಜ್ ಸರ್ಜಾ ತುಂಟಾಟ

    ಈ ಬಾರಿ ರಾಯನ್ ವಿಶೇಷ ಸ್ಥಳದಲ್ಲಿ ಹಬ್ಬ ಆಚರಣೆ ಮಾಡಿದ್ದಾನೆ. ಅಂದ್ರೆ ಅಜ್ಜ ಸುಂದರ್ ರಾಜ್ ಅವರ ಅಜ್ಜನ ಮನೆಯಲ್ಲಿ ಎಂಬುದನ್ನು ಮೇಘನಾ ತಿಳಿಸಿದ್ದಾರೆ. ಹಾಗೆ ಎಲ್ಲರಿಗೂ ವಿಜಯದಶಮಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಸದ್ಯ ಫೋಟೋಗಳಿಗೆ 80 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ.

    MORE
    GALLERIES

  • 55

    Rayan Raj Sarja’s festival photos: ಹಬ್ಬದಂದು ಗೊಂಬೆಗಳ ಎದುರು ರಾಯನ್ ರಾಜ್ ಸರ್ಜಾ ತುಂಟಾಟ

    ಇದೇ ಅಕ್ಟೋಬರ್ 22ರಂದು ರಾಯನ್ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾನೆ. ಕೆಲ ದಿನಗಳ ಹಿಂದೆ ರಾಯನ್ ನಾಮಕರಣ ಶಾಸ್ತ್ರವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಂದನವನ ಬಹುತೇಕ ಹಿರಿಯ ತಾರೆಯರು ಆಗಮಿಸಿ ಮುದ್ದು ಕಂದನಿಗೆ ಆಶೀರ್ವಾದ ನೀಡಿದ್ದರು. (ವರದಿ: ಮೊಹ್ಮದ್​ ರಫೀಕ್​​ ಕೆ )

    MORE
    GALLERIES