ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ಮೇಘಾ ಶೆಟ್ಟಿ ಹೆಸರುವಾಸಿಯಾಗಿದ್ದಾರೆ. ಅನು ಸಿರಿಮನೆ ಎಂಬ ಹೆಸರಿನಲ್ಲಿ ಕನ್ನಡ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದ್ದಾರೆ. ಮೇಘಾ ಶೆಟ್ಟಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ.
2/ 8
ಮೇಘಾ ಶೆಟ್ಟಿ ಬಿಳಿ ಬಣ್ಣದ ಡ್ರೆಸ್ ನಲ್ಲಿ, ಅದು ಗುಲಾಬಿ ಹೂವುಗಳಿರುವ ಉಡುಗೆಯಲ್ಲಿ ಮಿಂಚಿದ್ದಾರೆ. ಫೋಟೋಗಳು ತುಂಬಾ ಚೆನ್ನಾಗಿವೆ.
3/ 8
ಮೇಘಾ ಶೆಟ್ಟಿ ಅವರು ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಹಲವರು ಈ ಫೋಟೋಗಳನ್ನು ಮೆಚ್ಚಿಕೊಂಡಿದ್ದಾರೆ.
4/ 8
ವಾವ್ ಸೂಪರ್, ತುಂಬಾ ಚೆನ್ನಾಗಿವೆ, ಗುಲಾಬಿ ಹೂವಿನ ಒಳಗೆ ಗುಲಾಬಿಯಂತೆ ನೀವು, ತುಂಬಾ ಮುದ್ದಾಗಿ ಕಾಣ್ತೀರಿ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.
5/ 8
ಅಲ್ಲದೇ ಮೇಘಾ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಈ ಬಾರಿಯ ವಿಶೇಷ ಏನಂದ್ರೆ, ಇದು ಅವರ 300ನೇ ಪೋಸ್ಟ್ ಅಂತೆ.
6/ 8
ಜೊತೆ ಜೊತೆಯಲಿ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲಿಯೂ ಮೇಘಾ ಶೆಟ್ಟಿ ಬ್ಯುಸಿಯಾಗಿದ್ದಾರೆ. ಧಾರಾವಾಹಿ ಯಶಸ್ವಿಯಾದ ಬೆನ್ನಲ್ಲೇ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದೆ.
7/ 8
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೇಘಾ, ಗಣೇಶ್ ಜೊತೆಗಿನ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಜೊತೆ ಸಹ ದಿಲ್ ಪಸಂದ್ ಚಿತ್ರದಲ್ಲಿ ನಟಿಸಿದ್ದಾರೆ.
8/ 8
ಹಲವು ಸಿನಿಮಾಗಳಲ್ಲಿ ನಟಿಸಲಿರುವ ಮೇಘಾ ಶೆಟ್ಟಿ ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಬ್ಯುಸಿ ಇದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ.