ಜೊತೆ ಜೊತೆಯಲಿ ಧಾರಾವಾಹಿಯ ಶೂಟಿಂಗ್ ಸೆಟ್ ನಲ್ಲಿ ಆದ ಕಿರಿಕ್ ನಿಂದ ಧಾರಾವಾಹಿಯಿಂದ ನಟ ಅನಿರುದ್ಧ್ ಔಟ್ ಆಗಿದ್ದಾರೆ. ಆದಾದ ಹಲವು ದಿನಗಳ ನಂತರ ಮೇಘಾ ಶೆಟ್ಟಿ-ಅನಿರುದ್ಧ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
2/ 8
ಡಾ.ವಿಷ್ಣುವರ್ಧನ್ ಅವರ ಕನಸಿನ ಮನೆಯ ಗೃಹಪ್ರವೇಶದಲ್ಲಿ ನಟಿ ಮೇಘಾ ಶೆಟ್ಟಿ ಪಾಲ್ಗೊಂಡಿದ್ದರು. ಅನಿರುದ್ಧ್ ಕುಟುಂಬದ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.
3/ 8
ದಿ. ಡಾ.ವಿಷ್ಣುವರ್ಧನ್ ಅವರ ಕನಸಿನ ಮನೆಯ ಗೃಹಪ್ರವೇಶದಲ್ಲಿ ಹಲವಾರು ನಟ, ನಟಿಯರು, ಗಣ್ಯರು, ಕಲಾವಿದರು ಪಾಲ್ಗೊಂಡಿದ್ದರು. ಮೇಘಾ ಶೆಟ್ಟಿ ಸಹ ಬಂದಿದ್ದರು.
4/ 8
ಡಾ.ವಿಷ್ಣುವರ್ಧನ್ ಅವರ ಭಾವಚಿತ್ರ ಇರುವ ಸ್ಥಳದಲ್ಲಿ ನಿಂತು ಮೇಘಾ ಫೋಟೋ ತೆಗೆಸಿಕೊಂಡಿದ್ದಾರೆ. ಅನು ಫೋಟೋಕ್ಕೆ ಹಲವು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
5/ 8
ಜಯನಗರದಲ್ಲಿ ನಿರ್ಮಾಣವಾಗಿರುವ ಭವ್ಯ ಮನೆಯಲ್ಲಿ ಹಳೆಯ ನೆನಪುಗಳನ್ನೇ ಉಳಿಸಿಕೊಂಡು ಹೊಸ ಮನೆಯನ್ನು ನಿರ್ಮಾಣ ಮಾಡಿದ್ದಾರೆ. ಮನೆಗೆ ವಲ್ಮೀಕ ಎಂದು ಹೆಸರಿಟ್ಟಿದ್ದಾರೆ.
6/ 8
ಸಾಹಸಸಿಂಹ ವಿಷ್ಣುವರ್ಧನ್ ಅವರ ಕನಸಿನ ಮನೆ ಇರುವುದು ಜಯನಗರದ ಟಿ ಬ್ಲಾಕ್ ನಲ್ಲಿ 90/90 ಚದರಡಿಯಲ್ಲಿ. ಮನೆ ಗೃಹಪ್ರವೇಶಕ್ಕೆ, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಬಂದಿದ್ದರು.
7/ 8
ವಲ್ಮೀಕ ಎಂದರೆ ಹಾವಿನ ಹುತ್ತ ಎಂದರ್ಥ. ನಾಗರಹಾವು ಚಿತ್ರದ ಯಶಸ್ಸಿನ ನಂತರ ಇಲ್ಲೇ ಇದ್ದ ವಿಷ್ಣುವರ್ಧನ್ ಹಳೇ ಮನೆಗೆ ವಲ್ಮೀಕ ಎಂದು ಹೆಸರಿಟ್ಟಿದ್ದರು. 1976 ರಲ್ಲಿ ವಿಷ್ಣುವರ್ಧನ್ ಈ ಜಾಗ ಖರೀದಿ ಮಾಡಿದ್ದರಂತೆ. ಈಗ ಅಲ್ಲಿ ಭವ್ಯ ಬಂಗಲೆ ನಿರ್ಮಾಣವಾಗಿದೆ.
8/ 8
ಧಾರಾವಾಹಿ ಸೆಟ್ ಬಿಟ್ಟ ಮೇಲೆ ಎಷ್ಟೋ ದಿನಗಳ ನಂತರ ಮೇಘಾ ಶೆಟ್ಟಿ ಅನಿರುದ್ಧ್ ಅವರನ್ನು ಭೇಟಿಯಾಗಿದ್ದಾರೆ. ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.