ಮೌರ್ಯ, ಅರಸು ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದ ನಟಿ ಮೀರಾ ಜಾಸ್ಮಿನ್ ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಾ ಇದ್ದಾರೆ.
2/ 8
ಕೇರಳ ಮೂಲದ ಮೀರಾ ಜಾಸ್ಮಿನ್ ಪ್ರಮುಖವಾಗಿ ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಕನ್ನಡದಲ್ಲಿ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.
3/ 8
1982 ಫೆಬ್ರವರಿ 15 ರಂದು ಕೇರಳದ ತಿರುವಲ್ಲಾ ತಾಲೂಕಿನ ಹಳ್ಳಿಯೊಂದರಲ್ಲಿ ಜನಿಸಿದರು. 2001 ರಲ್ಲಿ ಮಲಯಾಳಂ ಚಿತ್ರ ಸೂತ್ರಧಾರನ್ ಚಿತ್ರದಲ್ಲಿ ನಟಿಸುವ ಮೂಲಕ ಸಿನಿರಂಗ ಪ್ರವೇಶಿಸಿದರು.
4/ 8
2004 ರಲ್ಲಿ ಪುನೀತ್ ರಾಜಕುಮಾರ್ ಅಭಿನಯದ ಮೌರ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಅರಸು, ದೇವರು ಕೊಟ್ಟ ತಂಗಿ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದರು.
5/ 8
ಲೋಹಿತಾದಾಸ್ ನಿರ್ದೇಶಿಸಿದ ಕಸ್ತೂರಿಮಾನ್ ಚಿತ್ರದೊಂದಿಗೆ ಮಲಯಾಳಂ ಚಿತ್ರರಂಗದಲ್ಲಿ ಖ್ಯಾತಿಯನ್ನು ಗಳಿಸಿದರು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ತಮ್ಮ ಮೊದಲ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದರು.
6/ 8
ಜಾಸ್ಮಿನ್ ಅವರು ತಮಿಳಿನಲ್ಲಿ ಅಭಿನಿಯಿಸಿದ ರನ್ ಮತ್ತು ಬಾಲ 2 ಚಿತ್ರಗಳು ಯಶಸ್ಸು ಕಂಡವು. ಅಂದಿನಿಂದ ತೆಲುಗಿನಲ್ಲೂ ನಟಿ ಅಭಿಮಾನಿಗಳನ್ನು ಹೊಂದಿದ್ದಾರೆ.
7/ 8
ರನ್ ಚಿತ್ರದ ಉತ್ತಮ ಅಭಿನಯಕ್ಕಾಗಿ ಫಿಲ್ಮ್ ಫೇರ್ ನಲ್ಲಿ ಉತ್ತಮ ಹೊಸ ನಟಿ ಪ್ರಶಸ್ತಿಯನ್ನು ಪಡೆದರು. ಮೀರಾ ಜಾಸ್ಮಿನ್ ಅವರು 15 ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
8/ 8
ಕೇರಳದ ತಾಲಿಪರಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಟಿ ವಿವಾದಕ್ಕೊಳಗಾದರು. ಅಲ್ಲಿ ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ. ಹಿಂದೂ ಭಕ್ತರು ಇದನ್ನು ವಿರೋಧಿಸಿದರು. ಕೊನೆಯಲ್ಲಿ ಆಕೆ ದೇವಸ್ಥಾನವನ್ನು ಶುದ್ಧಗೊಳಿಸುವುದಕ್ಕಾಗಿ Rs.10,000 ದಂಡವನ್ನು ದೇವಸ್ಥಾನದ ಅಧಿಕಾರಿಗಳಿಗೆ ನೀಡಿದರು.