ಕನ್ನಡದ ಮೌರ್ಯ, ಅರಸು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಮೀರಾ ಜಾಸ್ಮಿನ್ ಕನ್ನಡಿಗರಿಗೆ ಪರಿಚಿತರು. ಅಪ್ಪುಗೆ ಜೋಡಿಯಾಗಿ ಕಾಣಿಸಿಕೊಂಡು ಕನ್ನಡಿಗರಿಗೆ ಆಪ್ತರಾಗಿದ್ದರು. ಎರಡೂ ಸಿನಿಮಾದಲ್ಲಿ ಅವರ ಹೋಮ್ಲಿ ಫೇಸ್, ಮುಗ್ಧ ನಟನೆ ಸ್ಯಾಂಡಲ್ ವುಡ್ ಸಿನಿ ಅಭಿಮಾನಿಗಳ ಮನ ಗೆದ್ದಿತ್ತು.
ಮಲೆಯಾಳಂ ಮೂಲದ ನಟಿ ಮೀರಾ ಜಾಸ್ಮಿನ್ ಸದ್ಯ ತೆರೆಮರೆಗೆ ಸರಿದಿದ್ದಾರೆ. ಆದರೆ ವಿವಾದಗಳು ಮಾತ್ರ ಅವರ ಬೆನ್ನು ಬಿಡುತ್ತಿಲ್ಲ. ಮದುವೆ ಕಾಂಟ್ರವರ್ಸಿ, ಕುಟುಂಬಸ್ಥರೇ ಹಣಕ್ಕಾಗಿ ಕೊಟ್ಟ ಟಾರ್ಚರ್ ನಿಂದ ನಟಿ ಸಾಕಷ್ಟು ನೊಂದಿದ್ದಾರೆ.
2/ 9
ಮೀರಾ ಅವರ ಮೂಲ ಹೆಸರು ಜಾಸ್ಮಿನ್ ಮೇರಿ ಜೋಸೆಫ್. ದಕ್ಷಿಣ ಭಾರತದ ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೀರಾ 2001 ರಲ್ಲಿ ಲೋಹಿತದಾಸ್ ಅವರ 'ಸೂತ್ರಧಾರನ್' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.
3/ 9
2014ರಲ್ಲಿ ಫೆಬ್ರವರಿ 9ರಂದು ದುಬೈ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಅನಿಲ್ ಜಾನ್ ಟೈಟಸ್ ಅವರನ್ನು ಮದುವೆಯಾಗುವ ಮೂಲಕ ಮೀರಾ ಅಭಿಮಾನಿಗಳನ್ನು ಅಚ್ಚರಿಸಿಗೊಳಿಸಿದ್ದರು. ಮದುವೆಯ ಸುತ್ತ ಸಾಕಷ್ಟು ಕಾಂಟ್ರವರ್ಸಿ ಸೃಷ್ಟಿಯಾಗಿತ್ತು.
4/ 9
ಖುದ್ದು ಮೀರಾ ಆತಂಕದಲ್ಲೇ ವಿವಾಹವಾಗಿದ್ದರು. ಏಕೆಂದರೆ ಅನಿಲ್ ಜಾನ್ ಗೆ ಮೊದಲೇ ಮದುವೆಯಾಗಿತ್ತು. ಮೊದಲ ಪತ್ನಿ ಜೊತೆ ಡಿವೋರ್ಸ್ ಫೈನಲ್ ಆಗುವ ಮುನ್ನವೇ ಮೀರಾರನ್ನು ಮದುವೆಯಾಗಲು ಮುಂದಾಗಿದ್ದರು.
5/ 9
ಯಾವುದೇ ಕ್ಷಣದಲ್ಲಿ ಮೊದಲ ಪತ್ನಿಯ ಸಂಬಂಧಿಕರು ಮದುವೆಗೆ ಅಡ್ಡಿಪಡಿಸಲು ಪ್ರಯತ್ನಿಸಬಹುದು ಎಂಬ ಭಯದಿಂದ ನಟಿಯ ಪತಿ ತಿರುವನಂತಪುರದಲ್ಲಿ ಪೊಲೀಸ್ ರಕ್ಷಣೆ ಕೋರಿದ್ದರು. ನಂತರ ನೋಂದಣಿ ಅಧಿಕಾರಿಗಳು ವಿವಿಧ ಕಾರಣಗಳನ್ನು ನೀಡಿ ಅವರ ವಿವಾಹವನ್ನು ನೋಂದಾಯಿಸಲು ನಿರಾಕರಿಸಿದರು.
6/ 9
ವರದಿಗಳ ಪ್ರಕಾರ, ನಟಿಯ ಪತಿ ಅನಿಲ್ ತನ್ನ ಮೊದಲ ಹೆಂಡತಿಯಿಂದ ವಿಚ್ಛೇದನ ನೀಡಲು ವಿಫಲರಾಗಿದ್ದರು. ಇನ್ನು ಅನಿಲ್ ಜೊತೆ ಮದುವೆಯಾದಾಗ ಮೀರಾ ನಟನೆ ಬಿಟ್ಟು ದುಬೈಗೆ ಹೋಗಿದ್ದರು.
7/ 9
ಅನಿಲ್ ಅವರನ್ನು ಮದುವೆಯಾಗುವ ಮೊದಲು, ಮೀರಾ ಅವರು 2008 ರಲ್ಲಿ ಸಂದರ್ಶನವೊಂದರಲ್ಲಿ ಶಾಸ್ತ್ರೀಯ ಸಂಗೀತ ಕಲಾವಿದ ಮ್ಯಾಂಡೋಲಿನ್ ರಾಜೇಶ್ ಅವರನ್ನು ಮದುವೆಯಾಗುವುದಾಗಿ ಹೇಳಿದ್ದರು. ಆದರೆ, ನಂತರ ಆಕೆ ರಾಜೇಶ್ ರಿಂದ ದೂರವಾದರು.
8/ 9
ಇಷ್ಟೆ ಅಲ್ಲದೇ ಮೀರಾ ತನ್ನ ಕುಟುಂಬಸ್ಥರ ವಿರುದ್ಧವೇ ಕೊಚ್ಚಿಯಲ್ಲಿ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೋಲಿಸ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದರು. ಡಿಐಜಿಗೆ ನೀಡಿದ ದೂರಿನಲ್ಲಿ, ನನ್ನ ಕುಟುಂಬ ಸದಸ್ಯರು ನನ್ನ ಹಣವನ್ನು ತೆಗೆದುಕೊಂಡು ಮಾಧ್ಯಮಗಳಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದ್ದರು.
9/ 9
ನನ್ನ ಕುಟುಂಬವೇ ನನ್ನ ವಿರುದ್ಧ ತಿರುಗಿಬಿದ್ದಿದೆ. ಈಗ ನನಗೆ ಹೆತ್ತವರು ಅಥವಾ ಸಹೋದರಿಯರು ಇಲ್ಲ. ನನ್ನ ಸಹೋದರಿಯರು ಮಾಧ್ಯಮಗಳಲ್ಲಿ ಸುಳ್ಳುಗಳನ್ನು ಹಬ್ಬಿಸಿದ್ದಾರೆ ಎಂದು ಮೀರಾ ಆರೋಪಿಸಿದ್ದರು.