ಆರ್ಆರ್ಆರ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಡಿವಿವಿ ದಾನಯ್ಯ ಅವರೇ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎಂದು ವರದಿಯಾಗಿದೆ. ಕಾಮಿಡಿ ಕಥಾವಸ್ತುವಿರುವ ಕಮರ್ಷಿಯಲ್ ಎಂಟರ್ಟೈನರ್ ಇದಾಗಿದ್ದು, ಮಾರ್ಚ್ 18 ಹೋಳಿ ಹಬ್ಬಕ್ಕೆ ಅಧಿಕೃತ ಘೋಷಣೆ ಮಾಡುವ ಮೂಲಕ ನಟ ಪ್ರಭಾಸ್ಗೆ ಟ್ರೀಟ್ ನೀಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.