ಸ್ಯಾಂಡಲ್ವುಡ್ ನಟಿ ಮಾಲಾಶ್ರೀ ಅವರು ದುಬೈ ಪ್ರವಾಸದ ಕೆಲವೊಂದು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ದುಬೈ ಜನರಂತೆ ಪೋಷಾಕು ಧರಿಸಿ ಬ್ಲಾಕ್ ಗಾಗಲ್ಸ್ ಧರಿಸಿಕೊಂಡಿದ್ದರು ನಟಿ. ನಟಿಯ ಹಿಂದೆ ಕಣ್ಣು ಹಾಯಿಸಿದಷ್ಟು ದೂರಕ್ಕೆ ಮರಳಿನ ರಾಶಿ ಕಾಣಬಹುದು. ನಟಿಯ ಮುಖದ ಸುತ್ತ ಪ್ರಿಂಟೆಟ್ ಕ್ಲೋತ್ ಕವರ್ ಮಾಡಿರುವುದನ್ನು ಕಾಣಬಹುದು. ಕೆಂಪು, ಬಿಳಿ, ಕಪ್ಪು ಬಣ್ಣದ ಕಾಂಬಿನೇಷನ್ನಲ್ಲಿತ್ತು ನಟಿಯ ತಲೆಯ ಮೇಲಿದ್ದ ಬಟ್ಟೆ. ಮಾಲಾಶ್ರೀ ಅವರು ದುಬೈ ಎಂದು ಕ್ಯಾಪ್ಶನ್ ಕೊಟ್ಟು ಫೋಟೋವನ್ನು ಶೇರ್ ಮಾಡಿದ್ದಾರೆ. ನಟಿಯ ಫೋಟೋಗಳಿಗೆ 6 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಮಾಲಾಶ್ರೀ ವಿದೇಶ ಪ್ರವಾಸ ಹೋಗುತ್ತಿರುವುದು ಇದೇ ಮೊದಲೇನಲ್ಲ. ಅವರು ಈ ಹಿಂದೆಯೂ ಪ್ಯಾರಿಸ್ ಸೇರಿದಂತೆ ಹಲವು ಸ್ಥಳಗಳಿಗೆ ವೆಕೇಷನ್ ಹೋಗಿ ಫೋಟೋಸ್ ಶೇರ್ ಮಾಡಿದ್ದಾರೆ. ನಟಿ ಈ ಹಿಂದೆ ಹಂಚಿಕೊಂಡಿದ್ದ ಫೋಟೋದಲ್ಲಿ ಪ್ಯಾರಿಸ್ ನಗರದಲ್ಲಿ ನಟಿ ಸುತ್ತಾಡುತ್ತಿರುವುದನ್ನು ಕಾಣಬಹುದು. ಇದರಲ್ಲಿ ನಟಿ ಬ್ಲೂ ಜೀನ್ಸ್ ಹಾಗೂ ಪ್ರಿಂಟೆಡ್ ಶರ್ಟ್ ಧರಿಸಿದ್ದರು. ಮಾಲಾಶ್ರೀ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 60 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ನಟಿ ತಮ್ಮ ಪ್ರವಾಸ ಹಾಗೂ ಇವೆಂಟ್ ಫೋಟೋಸ್ ಶೇರ್ ಮಾಡುತ್ತಾರೆ.