ಸ್ಯಾಂಡಲ್ವುಡ್ ನಟಿ ಮಾಲಾಶ್ರೀ ಅವರು ಇತ್ತೀಚೆಗಷ್ಟೇ ದುಬೈ ವೆಕೇಷನ್ ಫೋಟೋಸ್ ಹಂಚಿಕೊಂಡಿದ್ದರು. ಈಗ ಅವರ ಪುತ್ರಿ ಕೂಡಾ ವೆಕೇಷನ್ ಫೋಟೊಸ್ ಶೇರ್ ಮಾಡಿದ್ದಾರೆ. ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈಗ ನಟಿ ಸುದ್ದಿ ಮಾಡಿರುವುದು ಸಿನಿಮಾ ಅಲ್ಲ, ದುಬೈ ಪ್ರವಾಸದಿಂದ. ನಟಿ ಮಾಲಾಶ್ರೀ ಅವರ ಮಗಳು ರಾಧನಾ ಚಿತ್ರರಂಗಕ್ಕೆ ಬರುವ ಸಿಹಿ ಸುದ್ದಿ ಕೊಟ್ಟಿದ್ದರು. ತೆರೆಯ ಮೇಲೆ ಮಿಂಚಲು ಅಮ್ಮನಂತೆಯೇ ರಾಧನಾ ಕೂಡ ರೆಡಿಯಾಗ್ತಾ ಇದ್ದಾರೆ. ಈಗಾಗಲೇ ಇವರು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫೋಟೋಗಳನ್ನು ಶೇರ್ ಮಾಡಿ ಸಖತ್ತಾಗಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಈಗ ದುಬೈ ವೆಕೇಷನ್ನ ಚಂದದ ಫೋಟೋಸ್ ಹಂಚಿಕೊಂಡಿದ್ದಾರೆ. ದುಬೈನ ಸುಂದರ ತಾಣಗಳಿಗೆ ನಟಿ ಪ್ರವಾಸ ಹೋಗಿದ್ದಾರೆ. ಅಮ್ಮನ ಜೊತೆ ದುಬೈ ಪ್ರವಾಸದಲ್ಲಿ ರಾಧನಾ ರಾಮ್ ಮಿಂಚಿದ್ದಾರೆ. ರಾಧನಾ ಅವರು ಈಗಾಗಲೇ ಇನ್ಸ್ಟಾಗ್ರಾಮ್ನಲ್ಲಿ 12 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಸ್, ವೀಡಿಯೋಸ್ ಶೇರ್ ಮಾಡುತ್ತಾರೆ. ನಟಿ ಈವರೆಗೆ 21 ಪೋಸ್ಟ್ಗಳನ್ನಷ್ಟೇ ಮಾಡಿದ್ದರೂ ಅವರ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.