Mahalakshmi-Ravindar: ಮಹಾಲಕ್ಷ್ಮಿ-ರವೀಂದರ್ ಭರ್ಜರಿ ಕ್ರಿಸ್ಮಸ್ ಸೆಲಬ್ರೇಷನ್; ಪತಿ ಕೊಟ್ಟ ಗಿಫ್ಟ್ಗೆ ಪತ್ನಿ ಫಿದಾ
Actress Mahalakshmi Christmas Celebration: ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಮದುವೆಯಾದಾಗಿನಿಂದ ಅವರು ಒಂದಲ್ಲ ಒಂದು ಕಾರಣಕ್ಕಾಗಿ ಚರ್ಚೆಯಲ್ಲಿದ್ದಾರೆ. ಈ ಜೋಡಿ ಇದೀಗ ಕ್ರಿಸ್ ಮಸ್ ಸೆಲಬ್ರೇಷನ್ ಮಾಡಿದ್ದಾರೆ.
ಇದೀಗ ಮತ್ತೊಮ್ಮೆ ಟ್ರೋಲ್ ಮಾಡಿದವರಿಗೆ ಉತ್ತರಿಸಿದ ನಟಿ ಜನರು ಏನೇ ಹೇಳಿದರೂ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದಿದ್ದಾರೆ. ನಟಿ ಮಹಾಲಕ್ಷ್ಮಿ ಹಾಗೂ ರವೀಂದರ್ ಚಂದ್ರಶೇಖರನ್ ದಂಪತಿ ಕ್ರಿಸ್ಮಸ್ ಸೆಲಬ್ರೇಟ್ ಮಾಡಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ.
2/ 7
ಕ್ರಿಸ್ಮಸ್ ಮಹಾಲಕ್ಷ್ಮಿಗೆ ರವೀಂದ್ರರ್ ಗಿಫ್ಟ್ ನೀಡಿದ್ದಾರೆ. ಕಸ್ಟಮೈಸ್ ಮಾಡಿದ ನೇಮ್ ಬೋರ್ಡ್ ನೀಡಿದ್ದಾರೆ. ಗಿಫ್ಟ್ ನೋಡಿ ಫಿದಾ ಆದ ಮಹಾಲಕ್ಷ್ಮಿ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
3/ 7
ರವೀಂದರ ಚಂದ್ರಶೇಖರ್, ಮಹಾಲಕ್ಷ್ಮಿ ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಹೆಂಡತಿಯನ್ನು ಒಂದು ಅದ್ಭುತ ಎಂದು ಬಣ್ಣಿಸಿದ್ದಾರೆ.
4/ 7
ಇದಕ್ಕೆ ಪ್ರತಿಕ್ರಿಯಿಸಿದ ನಟಿ, ಜನರು ಏನೇ ಹೇಳಲಿ, ನನ್ನ ಹೃದಯ ಬಡಿತ ಇರುವವರೆಗೂ ನಾನು ನಿನ್ನನ್ನು ಪ್ರೀತಿಸುತ್ತೇನೆ. ನೀನಿಲ್ಲದೆ ನಾನು ಏನೂ ಅಲ್ಲ. ನೀನೇ ನನ್ನ ಸರ್ವಸ್ವ ಎಂದಿದ್ದಾರೆ.
5/ 7
ಟ್ರೋಲ್ಗಳಿಗೆ ಉತ್ತರಿಸಿದ ಮಹಾಲಕ್ಷ್ಮಿ ಯಾರು ಏನೇ ಅಂದ್ರು ನಮ್ಮಿಬ್ಬರ ಪ್ರೀತಿ ಮಾತ್ರ ಸುಳ್ಳಲ್ಲ ಎಂದು ಹೇಳಿದ್ದಾರೆ.
6/ 7
ಈ ವರ್ಷದ ಸೆಪ್ಟೆಂಬರ್ನಲ್ಲಿ ರವೀಂದರ್ ಮತ್ತು ಮಹಾಲಕ್ಷ್ಮಿ ವಿವಾಹವಾದ್ರು. ಇವರ ಜೋಡಿ ನೋಡಿ ಅನೇಕರು ಗೇಲಿ ಮಾಡಿದ್ದಾರೆ.
7/ 7
ನಟಿ ಮಹಾಲಕ್ಷ್ಮಿಗೆ ಇದು 2ನೇ ಮದುವೆಯಾಗಿದ್ದು ಇದಕ್ಕೂ ಮೊದಲು ಅನಿಲ್ ಅವರನ್ನು ವಿವಾಹವಾಗಿದ್ದರು. ಇವ್ರಿಗೆ 1 ಮಗು ಕೂಡ ಇದೆ. ಮಹಾಲಕ್ಷ್ಮಿಗೆ ನಿರ್ಮಾಪಕ ರವೀಂದರ್ ಅನೇಕ ಸಹಾಯ ಮಾಡಿದ್ದು, ಇಬ್ಬರ ಸ್ನೇಹ ಬಳಿಕ ಪ್ರೀತಿ ಆಗಿ ಮದುವೆಯಾಗಿದ್ದಾರೆ.