Actress Madhavi: ಅಣ್ಣಾವ್ರ 'ಭಾಗ್ಯದ ಲಕ್ಷ್ಮಿ' ಈಗ ಹೇಗಿದ್ದಾರೆ? ಎಷ್ಟು ವರ್ಷವಾಯ್ತು ಮೋಹಕ ನಟಿ ಮಾಧವಿ ನೋಡಿ

Actress Madhavi transformation: 80 ಮತ್ತು 90ರ ದಶಕದ ಅವಧಿಯು ಇಡೀ ಸಿನಿಮಾ ಇಂಡಸ್ಟ್ರಿಗೆ ಮಹತ್ವದ ಅವಧಿಯಾಗಿದೆ. ಅನೇಕ ಹಿರಿಯ ಕಲಾವಿದರು ಬೆಳ್ಳಿತೆರೆ ಮೇಲೆ ಮಿಂಚಿದ ಕಾಲ ಅದು. ರಾಜ್ ಕುಮಾರ್, ಮಾಧವಿ ಜೋಡಿ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡಿಗರ ಮನಗೆದ್ದ ಫೇಮಸ್ ಜೋಡಿ ಇದು. ಈಗ ಮೋಹಕ ನಟಿ ಮಾಧವಿ ಎಲ್ಲಿದ್ದಾರೆ? ಹೇಗಿದ್ದಾರೆ?

First published:

  • 18

    Actress Madhavi: ಅಣ್ಣಾವ್ರ 'ಭಾಗ್ಯದ ಲಕ್ಷ್ಮಿ' ಈಗ ಹೇಗಿದ್ದಾರೆ? ಎಷ್ಟು ವರ್ಷವಾಯ್ತು ಮೋಹಕ ನಟಿ ಮಾಧವಿ ನೋಡಿ

    ಮಾಧವಿ ಸೌತ್ ಸಿನಿಮಾಗಳಷ್ಟೇ ಅಲ್ಲ ಕೆಲವು ಹಿಂದಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಆದ್ರೆ ಅತಿ ಹೆಚ್ಚು ಫೇಮಸ್ ಆಗಿದ್ದು ಮಾತ್ರ ಸೌತ್ ಸಿನಿಮಾಗಳಲ್ಲೇ, ದಕ್ಷಿಣದ ಅನೇಕ ಸೂಪರ್ ಸ್ಟಾರ್​ಗಳ ಜೊತೆ ಮಿಂಚಿದ್ದಾರೆ. ಅಮಿತಾಬ್ ಬಚ್ಚನ್ ಅವರಂತಹ ಬಾಲಿವುಡ್ ನಟರೊಂದಿಗೆ ಕೆಲಸ ಮಾಡಿದ್ದಾರೆ.

    MORE
    GALLERIES

  • 28

    Actress Madhavi: ಅಣ್ಣಾವ್ರ 'ಭಾಗ್ಯದ ಲಕ್ಷ್ಮಿ' ಈಗ ಹೇಗಿದ್ದಾರೆ? ಎಷ್ಟು ವರ್ಷವಾಯ್ತು ಮೋಹಕ ನಟಿ ಮಾಧವಿ ನೋಡಿ

    ಮಾಧವಿ ಬ್ಯೂಟಿಗೆ ಆ ಕಾಲದಲ್ಲೇ ಅನೇಕರು ಬೋಲ್ಡ್ ಆಗಿದ್ರು. ತನ್ನ ಲುಕ್ ಹಾಗೂ ನಟನೆಯಿಂದ ಅಪಾರ ಅಭಿಮಾನಿ ಬಳಗ ಹೊಂದಿದ್ರು. ಕಮಲ್ ಹಾಸನ್ ಜೊತೆಗಿನ ‘ಏಕ್ ದುಜೆ ಕೆ ಲಿಯೇ’ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ. ಕನ್ನಡದಲ್ಲಿ ಡಾ ರಾಜ್ ಕುಮಾರ್ ಜೊತೆ ಅನೇಕ ಸಿನಿಮಾಗಳಲ್ಲಿ ನಟಿ ಮಾಧವಿ ನಟಿಸಿದ್ದಾರೆ.

    MORE
    GALLERIES

  • 38

    Actress Madhavi: ಅಣ್ಣಾವ್ರ 'ಭಾಗ್ಯದ ಲಕ್ಷ್ಮಿ' ಈಗ ಹೇಗಿದ್ದಾರೆ? ಎಷ್ಟು ವರ್ಷವಾಯ್ತು ಮೋಹಕ ನಟಿ ಮಾಧವಿ ನೋಡಿ

    ಮಾಧವಿ ಸೆಪ್ಟೆಂಬರ್ 14, 1962 ರಂದು ಜನಿಸಿದರು. ಅವರ ನಿಜವಾದ ಹೆಸರು ವಿಜಯಲಕ್ಷ್ಮಿ. ಆಕೆಗೆ 60 ವರ್ಷ ವಯಸ್ಸಾಗಿದೆ. ಆದರೆ ಇಂದಿಗೂ ಅವರ ಬಗ್ಗೆ ಚರ್ಚೆಯಾದಾಗ ಅವರ ಸುಂದರವಾದ ಮುಖ ಎಲ್ಲರಿಗೂ ನೆನಪಾಗುತ್ತದೆ. ಮಾಧವಿ  ಸೌತ್ ಸಿನಿಮಾ ಮೂಲಕ ಬಣ್ಣಹಚ್ಚಿದ್ರು. ಬಳಿಕ ಬಾಲಿವುಡ್​ನತ್ತ ನಟಿ ಮುಖ ಮಾಡಿದ್ರು. 'ಏಕ್ ದುಜೆ ಕೆ ಲಿಯೇ' ಕೂಡ ಸೂಪರ್ ಹಿಟ್ ಆಗಿತ್ತು. ಇದು 1981ರಲ್ಲಿ ಬಿಡುಗಡೆಯಾಯಿತು.

    MORE
    GALLERIES

  • 48

    Actress Madhavi: ಅಣ್ಣಾವ್ರ 'ಭಾಗ್ಯದ ಲಕ್ಷ್ಮಿ' ಈಗ ಹೇಗಿದ್ದಾರೆ? ಎಷ್ಟು ವರ್ಷವಾಯ್ತು ಮೋಹಕ ನಟಿ ಮಾಧವಿ ನೋಡಿ

    ಮಾಧವಿ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಈ ನಟಿ 'ತುರ್ಪು ಪದ್ಮರ' ಮೂಲಕ ತನ್ನ ಸಿನಿ ಕೆರಿಯರ್ ಪ್ರಾರಂಭಿಸಿದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಮಾಧವಿ ನಟಿಸಿದ್ದಾರೆ. ಬಳಿಕ ಫೆಬ್ರವರಿ 14, 1996 ರಂದು ರಾಲ್ಫ್ ಶರ್ಮಾ ಅವರನ್ನು ಮಾಧವಿ ವಿವಾಹವಾದರು.

    MORE
    GALLERIES

  • 58

    Actress Madhavi: ಅಣ್ಣಾವ್ರ 'ಭಾಗ್ಯದ ಲಕ್ಷ್ಮಿ' ಈಗ ಹೇಗಿದ್ದಾರೆ? ಎಷ್ಟು ವರ್ಷವಾಯ್ತು ಮೋಹಕ ನಟಿ ಮಾಧವಿ ನೋಡಿ

    ಮದುವೆಯ ನಂತರ, ಮಾಧವಿ ತನ್ನ ಪತಿಯೊಂದಿಗೆ  USAನ ನ್ಯೂಜೆರ್ಸಿಯಲ್ಲಿ ವಾಸವಾಗಿದ್ದಾರೆ. ಆಕೆಯ ಪತಿ ಉದ್ಯಮಿಯಾಗಿದ್ದು, ಮೆಡಿಸನ್ ಉದ್ಯಮವನ್ನು ಹೊಂದಿದ್ದಾರೆ. ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಪ್ರಿಸ್ಸಿಲ್ಲಾ, ಟಿಫಾನಿ ಮತ್ತು ಎವೆಲಿನ್ ಇದೀಗ ನಟಿ ತನ್ನ ಪತಿ ಮತ್ತು ಮಕ್ಕಳೊಂದಿಗೆ ವಿದೇಶದಲ್ಲಿ ವಾಸಿಸುತ್ತಿದ್ದಾರೆ.

    MORE
    GALLERIES

  • 68

    Actress Madhavi: ಅಣ್ಣಾವ್ರ 'ಭಾಗ್ಯದ ಲಕ್ಷ್ಮಿ' ಈಗ ಹೇಗಿದ್ದಾರೆ? ಎಷ್ಟು ವರ್ಷವಾಯ್ತು ಮೋಹಕ ನಟಿ ಮಾಧವಿ ನೋಡಿ

    ಮಾಧವಿ ಅವರಿಗೆ ಹಿಂದೂ ಧರ್ಮದಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ. ಆಗಾಗೇ ಭಾರತಕ್ಕೂ ಬರುತ್ತಿರುತ್ತಾರೆ. 2006 ರಲ್ಲಿ ಒಮ್ಮೆ ಈ ಸಮಯವು ತನಗೆ ಸುವರ್ಣ ಅವಧಿಯಾಗಿದೆ ಎಂದು ಹೇಳಿದರು. ಇಂದು ಸಿನಿಮಾದಲ್ಲಿ ಕೆಲಸ ಮಾಡದಿದ್ದರೂ ಸಿನಿಮಾ ನೋಡಿದಾಗಲೆಲ್ಲ ಕೆಲಸ ಮಾಡಬೇಕೆಂಬ ತುಡಿತ ಮೂಡುತ್ತದೆ ಎಂದು ಹೇಳಿದ್ರು.

    MORE
    GALLERIES

  • 78

    Actress Madhavi: ಅಣ್ಣಾವ್ರ 'ಭಾಗ್ಯದ ಲಕ್ಷ್ಮಿ' ಈಗ ಹೇಗಿದ್ದಾರೆ? ಎಷ್ಟು ವರ್ಷವಾಯ್ತು ಮೋಹಕ ನಟಿ ಮಾಧವಿ ನೋಡಿ

    ಮಾಧವಿ ಅವರು 17 ವರ್ಷಗಳ ವೃತ್ತಿಜೀವನದಲ್ಲಿ 7 ಭಾಷೆಗಳ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ತಮಿಳು, ಕನ್ನಡ, ಒರಿಯಾ, ಬೆಂಗಾಲಿ, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

    MORE
    GALLERIES

  • 88

    Actress Madhavi: ಅಣ್ಣಾವ್ರ 'ಭಾಗ್ಯದ ಲಕ್ಷ್ಮಿ' ಈಗ ಹೇಗಿದ್ದಾರೆ? ಎಷ್ಟು ವರ್ಷವಾಯ್ತು ಮೋಹಕ ನಟಿ ಮಾಧವಿ ನೋಡಿ

    ಡಾ.ರಾಜ್ ಕುಮಾರ್ ಜೊತೆ ಹಾಲು ಜೇನು, ಭಾಗ್ಯದ ಲಕ್ಷ್ಮೀ ಬಾರಮ್ಮ,  ಆಕಸ್ಮಿಕ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನಂತ್ ನಾಗ್, ಅಂಬರೀಶ್ ವಿಷ್ಣುವರ್ಧನ್ ಜೊತೆ ಕೂಡ ಕಾಣಿಸಿಕೊಂಡಿದ್ದಾರೆ.

    MORE
    GALLERIES